Thursday 10 January 2013

ಹಳ್ಳಿ ಸೈನ್ಯ.....ದುಷ್ಕರ್ಮಿಗಳ ಬೆನ್ನತ್ತಿ



ನೂರರಿಂದ ಇನ್ನೂರು ಜನರನ್ನ  ಹೊಂದಿದ್ದ ಪುಟ್ಟ ಗ್ರಾಮವದು.
ಬೆಟ್ಟ ಗುಡ್ಡ ಗಳಿಂದ ಕೂಡಿದ್ದ ಸುಂದರ ಪ್ರದೇಶದಲ್ಲಿ ತಲೆಯಿತ್ತಿ ನಿಂತಿತ್ತು
ದಿಟ್ಟ ಯುವಕರು ಛಲ ತೊಟ್ಟ ಮಹಿಳೆಯರು ಕಷ್ಟಪಟ್ಟು ದುಡಿಯುವ ಗ್ರಾಮಸ್ಥರು ಗ್ರಾಮದ ಆಧಾರ ಸ್ಥಂಭಗಳು
ಎಷ್ಟೋ ಸಮಸ್ಯೆಗಳ ನಡುವೆಯೂ ನೆಮ್ಮದಿಯಿಂದ ಸಾಗುತ್ತಿದ್ದರು ಹಳ್ಳಿ ಜನರು.

ಇದ್ದಕ್ಕಿದಂತೆ ಹಳ್ಳಿಯಲಿ ಜನರು ಭಯ ಪಡುವಂತ, ಆಶ್ಚರ್ಯವಾಗುವಂತ ಘಟನೆಗಳು ನಡೆಯತೊಡಗಿದವು
ದಿನದಿಂದ ದಿನಕ್ಕೆ ಹಳ್ಳಿ ಹುಡುಗಿಯರು ಕಾಣೆಯಾಗತೊಡಗಿದರು
ರಾತ್ರಿ ವೇಳೆ ಭಯಾನಕ ಶಬ್ದಗಳು ಕೇಳಿಸುತ್ತಿದ್ದವು.. ಹಾಗೂ ಅಲ್ಲಲ್ಲಿ ಬೆಂಕಿ ಹತ್ತಿಕೊಳ್ಳುವುದು ಹೀಗೆ ಅನೇಕ ಘಟನೆಗಳು ಸಂಭವಿಸುತ್ತಿದ್ದವು
ಏನಾಗುತ್ತಿದೆ ಎಂಬ ಸಣ್ಣ ಸುಳಿವು ಕೂಡ ಇವರಿಗೆ ಸಿಕ್ಕಿರಲಿಲ್ಲ.. ಹಳ್ಳಿ ಜನರು ತುಂಬಾ ಘಾಸಿಗೊಂಡಿದ್ದರು
ಊರಿನ ಹುಡುಗಿಯರು ಕಾಣೆಯಾಗುತ್ಟಿದ ವಿಷಯ ಮಾತ್ರ ಇವರನ್ನು ತುಂಬಾ ಚಿಂತೆಗೀಡುಮಾಡಿತ್ತು
ಹಾಗೂ ಆಗಾಗ ಆಗುತ್ತಿದ್ದ ಕೊಲೆಗಳು ಭಯ ತರಿಸಿತ್ತು. ಊರಿನ ಸ್ವಲ್ಪ ದೂರದಲ್ಲಿದ ಕಾಡಿಗಂತೂ ಯಾರು ಹೆಜ್ಜೆ ಕೂಡ ಇಡದಂತಾಗಿತ್ತು.

ಇಷ್ಟೆಲ್ಲಾ ಆಗ್ತಾ ಇದ್ರು ಇವರು ಪೋಲೀಸ್ ಸ್ಟೇಶನ್ ಗೆ ಆಗಲಿ ಅಥವಾ ಬೇರೆ ಯಾರಿಗೆ ದೂರು ಕೊಡುವ ಪ್ರಯತ್ನನೇ ಮಾಡಲಿಲ್ಲ..
ಇದಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು ಅಂತ ಹಳ್ಳಿ ಜನರೆಲ್ಲಾ ಸೇರಿ ಸಭೆ ಸೇರುತ್ತಾರೆ.
ಹಲವು ಚರ್ಚೆಗಳ ಮೂಲಕ ಇದನ್ನೆಲ್ಲ ಯಾರೋ ದುಷ್ಕ್ರರ್ಮಿಗಳು ಮಾಡುತ್ತಿರುವುದು ಅಂತ ನಿರ್ಧರಿಸುತ್ತಾರೆ
ಆಗಲೇ ಸಭೆಯಲ್ಲೇ ಒಂದು ಸೈನ್ಯ ರಚನೆಯಾಗುತ್ತೆ ಅದೇ  "ಹಳ್ಳಿ ಸೈನ್ಯ"
 11 ಜನರನ್ನ ಒಳಗೊಂಡ ಸೈನ್ಯದಲ್ಲಿ 3 ಮಹಿಳೆಯರು ಹಾಗೂ 8 ಬಲಿಷ್ಟ ಯುವಪಡೆ ಇರುತ್ತೆ.
ದುಷ್ಕ್ರರ್ಮಿಗಳ ರಕ್ತ ಹೀರಲು ಹಳ್ಳಿ ಸೈನ್ಯ ಸಿದ್ದವಾಗುತ್ತೆ
ಕೆಂಪು ಬಟ್ಟೆ, ಕೆಂಪು ಧ್ವಜ ಎಲ್ಲವೂ ರಕ್ತ ಮಯ . ನೋಡಿದ್ರೆ ಭಯವಾಗಬೇಕು ಹಾಗಿತ್ತು ಇವರ ಗಾಂಭೀರ್ಯ
ಗೆಲ್ಲುವ ಛಲವಿದ್ದವನು ಗಲ್ಲಿಗೇರಿಸುವಾಗಲು ನುಸುನಗುತ್ತಾನೆ ಎಂಬಂತೆ ಸಾವಿಗೂ ಅಂಜದೆ ದಟ್ಟ ಕಾಡಿನೊಳಗೆ ಹೆಜ್ಜೆ ಇಡುತ್ತಾರೆ.
ಮೂರು ಗುಂಪು ಗಳನ್ನ ಮಾಡಿಕೊಂಡು ಒಂದೊಂದು ಗುಂಪು ಒಂದೊಂದು ಕಡೆ ಕಾಡನ್ನು ಭೇದಿಸಲು ಶುರುಮಾಡುತ್ತಾರೆ
ಕಲ್ಲು, ಮುಳ್ಳು, ಚಳಿ ,ಬಿಸಿಲು,ಹಸಿವು ಯಾವುದನ್ನು ಲೆಕ್ಕಿಸುವುದೇ ಇಲ್ಲ.ಗುರಿಯ ಮುಂದೆ ಅವೆಲ್ಲವೂ ಶೂನ್ಯವಾಗಿ ಬಿಡುತ್ತವೆ
ಆಗೋ ಈಗೋ.. ಮೂರು ದಿನ ಕಳೆದು ಹೋಗುತ್ತೆ ಬಂದ ಕೆಲಸ ಮಾತ್ರ ಕೊಂಚವೂ ಆಗಿರುವುದಿಲ್ಲ
ಮತ್ತೆ ಎಲ್ಲರೂ ಒಂದೆಡೆ ಸೇರಿ ಗಟ್ಟಿ ನಿರ್ಧಾರಗಳನ್ನ ತೆಗೆದುಕೊಂಡು ನಮ್ಮ ಗುರಿ ತಲುಪುವವರೆಗೂ  ಹಿಂತಿರುಗಬಾರದೆಂದು ಶಪಥ ಮಾಡಿ ಮುನ್ನುಗ್ಗುತ್ತಾರೆ.
ಅಂದು 8 ನೇ ದಿನ ಸುಮಾರು ಸಾಯಂಕಾಲ 4 ಗಂಟೆ ಸಮಯವಿರಬಹುದು ಹತ್ತಿರದಲ್ಲೆಲ್ಲೋ ಯಾರೋ ಮಾತನಾಡುವ ಶಬ್ದ ಕೇಳಿಸುತ್ತದೆ..
ಶಬ್ದವನ್ನೇ ಗ್ರಹಿಸಿ ಜಾಗಕ್ಕೆ ಮುಖ ಮಾಡಿ ಹೋಗಾ ಹೋಗುತ್ತಿದ್ದಂತೆ ಇವರಿಗೆ ಇನ್ನೂ ಅನೇಕ ಮಾಹಿತಿಗಳು ಸಿಗುತ್ತವೆ.
ಮುಂದೆ ಹೋಗುತ್ತಾ ಹೋಗುತ್ತಾ... ದೊಡ್ಡ ದೊಡ್ಡ ಬಂಡೆಗಳು..ನೆಲಕ್ಕೆ ಬೇರು ಬಿಟ್ಟಿದ್ದ ದೊಡ್ಡ ದೊಡ್ಡ ಮರಗಳ ಮದ್ಯೆ 2 ಗುಡಿಸಲು ಇರುವುದು
ಇವರಿಗೆ ಕಂಡು ಬರುತ್ತದೆ. ಅಲ್ಲಿ ಯಾರೋ ಓಡಾಡುತ್ತಿರುವ ದೃಶ್ಯ ಕಾಣಿಸುತ್ತಿದ್ದಂತೆ.. ಎಲ್ಲರೂ ಅಲ್ಲಿಗೆ ದೌಡಯಿಸುತ್ತಾರೆ
ಅಲ್ಲಿಗೆ ಹೋಗುತ್ತಿದ್ದಂತೆ ದುಷ್ಕರ್ಮಿಗಳು ಇವರ ಮೇಲೆ ಹಾರಿ ಹಾರಿ ಬರುತ್ತಾರೆ..  
ಬಲಾಡ್ಯ ಹಳ್ಳಿ ಸೈನ್ಯದ ಮುಂದೆ ಅವರ ಅಟ್ಟಹಾಸ ಏನೂ ನಡೆಯುವುದಿಲ್ಲ
ಎಲ್ಲರನ್ನೂ ಬಡಿದು ಸೆರೆ ಹಿಡಿಯುತ್ತಾರೆ...  ಆಮೇಲೆ ಗೊತ್ತಾಗೋದು ಇದೊಂದು ದೊಡ್ಡ ಕಾಮುಕರ ಗುಂಪು ಎಂದು. ಕೇವಲ ಕಾಮ ಸುಖಕ್ಕೋಸ್ಕರ ಇವರು ಇಂತಹ ಒಂದು ದೊಡ್ಡ ಕೃತ್ಯವನ್ನ ಎಸಗಿರುತ್ತಾರೆ.. ಇದನ್ನೆಲ್ಲಾ ತಿಳಿದ ಹಳ್ಳಿ ಸೈನ್ಯ ಕೋಪಗೊಂಡು ತಮ್ಮೂರಿನ ಹುಡುಗಿಯರ ರಕ್ಷಿಸುವುದರ ಜೊತೆಗೆ ಕಾಮುಕರನ್ನು ಊರಿಗೆ ಎಳೆದು ತರುತ್ತಾರೆ..
ನಮ್ಮದೇ ನ್ಯಾಯ ನಮ್ಮದೇ ತೀರ್ಪು ಎನ್ನುವಂತೆ ಅವರು ಮಾಡಿದ ತಪ್ಪಿಗೆ ಊರ ಜನರೇ ಶಿಕ್ಷೆ ಕೊಡುತ್ತಾರೆ.
 ಎಲ್ಲರನ್ನೂ ಸಾಲಾಗಿ ನಿಲ್ಲಿಸಿ
ಕುರಿ ಕಡಿದ ಹಾಗೆ ಅವರ ರುಂಡಗಳನ್ನು ಕತ್ತರಿಸಿ ಕಥೆಗೆ ತೆರೆ ಎಳೆಯುತ್ತಾರೆ.
ಅಂತೂ ಹಳ್ಳಿ ಸೈನ್ಯ ಗೆಲುವನ್ನ ತನ್ನದಾಗಿಸಿಕೊಳ್ಳುತ್ತದೆ.
ಹಳ್ಳಿ ಜನರು ಇಟ್ಟಿದ್ದ ನಂಬಿಕೆಯನ್ನ ಉಳಿಸಿಕೂಳುತ್ತದೆ..

ಜೈ ಹಳ್ಳಿ ಸೈನ್ಯ

ಮತ್ತೆ ಸಿಗೋಣ

ಧನ್ಯವಾದ

ಸೋಮೇಶ್ ಎನ್ ಗೌಡ