Thursday 4 December 2014

ಒಲವಿನ ಸೆಳೆತ


PART - 1
*********************************************************************************************************************

( ನಿತೀಶ್ ಮತ್ತು ಸತೀಶ್ ಆತ್ಮೀಯ ಗೆಳೆಯರು ಅಪರೂಪಕ್ಕೊಮ್ಮೆ ಭೇಟಿಯಾಗುತ್ತಿದ್ದರು.. ತಮ್ಮ ಮನಸ್ಸಲ್ಲಿರುವುದನ್ಣ ಒಬ್ಬರೊಲ್ಲಬ್ಬರು ಹಂಚಿಕೊಳ್ಳುತ್ತಿದರು .. ಸತೀಶ ಸ್ವಲ್ಪ ಪೋಲಿ ಬಾಯಿಗೆ ಬಂದಿದ್ದು ಮಾತಾಡೋದೆ ಅವನ ಹವ್ಯಾಸ
ಇನ್ನು ನಿತೀಶ ಸುಮ್ನೆ ಸುಮ್ನೆ ಮಾತಾಡೋದು ಕಡಿಮೆ ಮಾತಾಡಿದ್ರೆ  ಡೈಲಾಗ್ ಗಳ ಸುರಿಮಳೆ… ಈಗೆ ಇರುವ ಇವರಿಬ್ಬರು ಒಂದಿನ ಎದುರಾದಾಗ ಏನಾಯ್ತು ನೀವೇ ಓದಿ )

ಏನ್ ಕವಿರಾಜರು ಆರಾಮಾಗಿ ಇದೀರಾ..
ಮುಖದಲ್ಲೇನೋ ಹೊಸ ಕಳೆ ಕಾಣ್ತಾಇದೆ..ಏನಮ್ಮ ವಿಷ್ಯ..?    ಶುರುಮಾಡೇ ಬಿಟ್ಟ ಸತೀಶ

ನಾವ್ ಹೆಂಗ್ ಇದ್ರೆ ಏನೋ ನಿಮ್ಮ ತರ ರೋಮಿಯೋ ಆಗಕ್ಕೆ ಆಗಲ್ಲ ಬಿಡೋ . ಎಂದು ನೀರಸ ಪ್ರತಿಕ್ರಿಯೆ ಕೊಟ್ಟ ನಿತೀಶ

ಅಲಲಲೆ ಇರ್ಲಿ ಹೇಳ್ ಬಾರೋ ಏನ್ ಹೊಸ ಹುಡ್ಗಿ ಸಿಕ್ಕಿದ್ಲಾ...?

ಕವಿಗೆ ಕಿವಿ ನೆಟ್ಟಗೆ ಆಗಿಬಿಟ್ಟದೆ..!
ಲೋ ಎಷ್ಟ್ ದೂರದಿಂದ ನೋಡಿದ್ರೂ ಹತ್ರದಲ್ಲೇ ಇರೋ ಹಾಗೆ ಕಾಣೋ ನಿಮ್ಮಂತ 3D film ಮುಂದೆ..
ಎಷ್ಟ್ ಸಲ ನೋಡಿದ್ರು ಒಂದೇ ಕಲರ್ ಕಾಣೋ ನಮ್ಮಂತ Black and white picture ಯಾವ ಹುಡ್ಗಿ ನೋಡ್ತಾಳೊ.

ನನ್ ಮಗ್ನೆ ಇಂಗೆ ಬಿಟ್ಟಿ dialog- ಪುಗಸಟ್ಟೆ Poem ಹೇಳಿ ಅದೆಷ್ಟ್ ಹುಡ್ಗೀರ್ ಮರಳು ಮಾಡಿದ್ದೀಯೋ..

ಹಲೋ... ಮಂತ್ರಕ್ಕೆಲ್ಲಾ ಮಾವಿನ  ಕಾಯಿ ಉದುರಲ್ಲ ಮ್ಮ

ಇರಬಹುದು.. ಆದ್ರೆ ಮಂತ್ರ ಹೇಳೋ ಬಾಯಿಗೆ ರೆಸ್ಟ್ ಕೊಟ್ಟು, ಸ್ವಲ್ಪಕೈಯಿಗೆ ಕೆಲ್ಸ ಕೊಟ್ರೆ ಎಲ್ಲಾ ಉದ್ರುತ್ತೆ!..... :

ತೂ ಏನ್ ಮಾತಾಡ್ತೀಯೋ...

ಹಲೋ ಬಾಸ್.... ನಾನ್ ಹೇಳಿದ್ದ್ ಕರೆಕ್ಟ್ ಹಾಗೆ ಇದೆ.. ನೀನ್ ಅರ್ಥ ಮಾಡ್ಕೊಂಡ್ ರೀತಿ ಸರಿಯಿಲ್ಲ ಅಷ್ಟೇ..

ಅಂದ್ರೆ

ಅಂದ್ರೆ ಮಂತ್ರ ಹೇಳ್ತಾನೇ ನಿಂತ್ಕೊಂಡಿದ್ರೆ ಮಾವಿನ ಕಾಯು ಉದುರಲ್ಲ ಬೇವಿನ ಸೊಪ್ಪು ಬೆದರಲ್ಲ, ಸ್ವಲ್ಪ ತಂತ್ರ ಉಪಯೋಗಿಸಿ ಕೈಯಿಗೆ ಕೊಡಬೇಕಾಗಿರೋದು ಕೊಟ್ಟು ಹೊಡಿಯೋ ಜಾಗಕ್ಕೆ ಹೋಡಿದ್ರೆ ಬೇಕಾಗಿರೋದ್  ನಮ್ ಮುಂದೆ ಬೀಳತ್ತೆ


ಓಹೋ.. ಹಂಗೆ...!!

ಹಂಗೇನೇ .
ಭಯ ಬಿಟ್ಟು ಬಾವಿಗೆ ಇಳಿ.. !

ಕೆರೆ ದಡದ ಮೇಲೆ ನಿಂತ್ಕೊಂಡು ಮೀನ್ ಸಿಕ್ಕಿಲ್ಲ ಮೀನ್ ಸಿಕ್ಕಿಲ್ಲ ಅಂದ್ರೆ ಯಾವ ಮೀನೂ ಕೈಯಿಗೆ ಬಂದ್ಬೀಳಲ್ಲ.
ಗಾಳ ಹಾಕಿನೇ.. ಮೀನ್ ಹಿಡಿಬೇಕು

ದಡದ ಮೇಲೆ ನಿಂತ್ಕೊಂಡು ಕೊರಗೋದು ಹೇಡಿತನ!
ಬಲೆ ಬೀಸಿ ಮೀನ್ ಹಿಡಿಯೋದೇ ಮಗ  ಗಂಡಸ್ತನ! :)

ಓಹೋ ಹಾಗಾದ್ರೆ ಬಲೆ ಬೀಸ್ಲೆ ಬೇಕು ಅಂತೀಯಾ..

ಹಾಆಆ! ಮಗು ಸದ್ಯಕ್ಕೆ ಗಾಳ ಹಾಕಿ ಒಂದ್ ಹಿಡಿಯೋದ್ ಕಲಿ..
ಬಲೆ ಬೀಸೋದೆನಿದ್ರು ನನ್ ಕೆಲ್ಸ...
ನಿನ್ನ ಒಳ್ಳೆ ಬುದ್ದಿ ಜೊತೆ ಸ್ವಲ್ಪ ನನ್ನ ಕೆಟ್ಟ ಐಡಿಯಾನೂ ಸೇರಿಸ್ಕೊಳ್ಲಪ್ಪ Final result  ಪಕ್ಕ A+ ..

ಆಯ್ತು ಬಿಡಪ್ಪ….

ಏನ್ ಇನ್ನೂ ನೋಡ್ತಾ ನಿಂತಿದೀಯ..

ಭಾವನೆಗಳ ಲೋಕದಲ್ಲಿ ತೇಲೋ ನಿನಗೆ ಬಣ್ಣದ ಲೋಕ ಕಾಯ್ತಾಇದೆ
ಹೋಗು ….ಹೊಡಿಗೋಲಿ
ಇನ್ನ್ ಮುಂದೆ ನಿನ್ನ್ ಲೈಫ್ ಫುಲ್ ಜಾಲಿ!!! J

@@@@@@@@



PART -2

ಪೋಲಿ ಸತೀಶನ ಮಾತು ಕೇಳಿ ಅಲ್ಲಿಂದ ಕಾಲ್ಕಿತ್ತ ನಿತೀಶನ ಮನದಲ್ಲಿ ಗುನುಗುಟ್ಟುತ್ತಿದ್ದಿದ್ದು ಇದು...

ನನಗೂ ಎಷ್ಟೋ ಹುಡುಗೀರ್ attract ಮಾಡಿದ್ರು ಅಲ್ವಾ, ನಾನೇಕೆ ಯಾರನ್ನೂLove ಮಾಡೋ ಧೈರ್ಯ ಮಾಡಲಿಲ್ಲ
attraction ಗೆ propos ಮಾಡಿ Love ಅನ್ನೋ ಲಾಲಿಪಪ್ ಯಾಕೆ ಕೈಲಿ ಹಿಡೀಲಿಲ್ಲ.
ನನಗೇನ್ ಕಡಿಮೆ ಆಗಿದೆ, ನೋಡಕ್ಕೆ ಚನ್ನಾಗಿಲ್ವಾ!, ಬುದ್ದಿ ಇಲ್ವಾ!, ಕನಸುಗಳ ಕಟ್ಟಿಲ್ವಾ!. ನನ್ನನ್ನೂ ಒಂದು ಹುಡುಗಿ ಇಷ್ಟಪಟ್ಟಿರ್ಬೇಕಲ್ಲ.. ಹೇ..ಇಲ್ದೆ ಇರುತ್ತಾ, ನನಗೆ ಅಷ್ಟೊಂದ್ ಹುಡುಗೀರ್ ಅಟ್ರ್ಯಾಕ್ಟ್ ಮಾಡಿರುವಾಗ , ನಾನು ಒಬ್ಬರಿಗಾದ್ರೂ ಅಟ್ರ್ಯಾಕ್ಟ್ ಆಗ್ದೇ ಇರ್ತೀನ,


 Yes ಇನ್ ಮೇಲಾದ್ರೂಭಯ ಬಿಟ್ಟು ಲವ್ ಸಾಂಗ್ ಹಾಡಲೇಬೇಕು,

ಬಡ್ಡಿ ಮಗ ಕಾಂತರಾಜ, ನೀನ್ ಬರೀಪುಸ್ತಕದ ಬದನೆಕಾಯಿ ಕಣೋ, ಕವನ ಬರೆಯುವಷ್ಟು ಸುಲಭವಲ್ಲ ಪ್ರೀತಿ ಮಾಡೋದು- ಪ್ರೀತಿ ಅಂದ್ರೆ ನೀನ್ ಬರೆಯೋ ಕಥೆ ಅಲ್ಲ . ಪ್ರೀತಿ ಬಗ್ಗೆ ನಿನಗೇನು ಗೊತ್ತೋ ಅಂತ ರೇಗಿಸುತ್ತಿದ್ದ.. ಅದು ನನಗೆ! ಛೇ.!
ಅವನಿಗೆ ಹೊಟ್ಟೆ ಉರಿಸಕ್ಕಾದರೂ ನಾನ್ Love ಮಾಡಲೇಬೇಕು.

ಕವನ ಕಥೆ ಬರೆಯೋಕೆ ಶುರು ಮಾಡಿದಾಗ ಕೆಲವರು ಹುಚ್ಚ ಅಂದ್ರು, ಇನ್ನು ಕೆಲವರು ಮಾಡಕ್ಕೆ ಕೆಲ್ಸ ಇಲ್ಲ ಅಂದ್ರು,  ಅದು ಹೋಗ್ಲಿ ಇನ್ನೂ ಕೆಲವರು ಲೇ ಇವನ ಲೈಫ್ ಇಷ್ಟೇ ಕಣೋ ಅಂದು ಬಿಟ್ಟರು. !!! ಬಡ್ಡಿ ಮಕ್ಳು ನನ್ನ ನಾಲ್ಕು ಜನ ನನ್ನಹೊಗಳಿದಾಗ ಮಾತ್ರ ಇವನು ನಮ್ ಫ್ರೇಂಡೆ ಸಾರ್, ಹಾಗೆ ಹೀಗೆ ಅಂತ ನನ್ ಜೊತೆಗೆ ಅವರ level ಹೆಚ್ಚಿಸಿಕೊಳ್ಳೋಕೆ ಟ್ರೈ ಮಾಡ್ತಿದ್ರು... ಏನ್ ಒಂದೇ ಚಡ್ದಿನಾ ಹೊಗೆದೊಗೆದು ಇಬ್ಬರು ಹಾಕೊಂಡ್  ಬೆಳೆದ ಹಾಗೆ... Uppp.. ಅದೇನ್ ರೇಂಜು.

ಇನ್ನ ನಾನ್ ಪ್ರೀತಿ ಮಾಡ್ತೀನಿ ಅಂದ್ರೆಅದೆಷ್ಟ್ ಜನ ಕಾಲು ಎಳೀತಾರೋ..

ಇರ್ಲಿ.. ನಮ್ನ ಕಾಲು ಎಳೆಯೊರು ಎಷ್ಟೇ ಜನ ಇದ್ರು...
                 ನಾವು ಇನ್ನೊಬ್ರ ಕಾಲು ಹಿಡ್ಕೊಂಡ್ ಆದ್ರೂ ಮೇಲೆ ಬರಬೇಕು..  
ಸಪೋರ್ಟ್ ಇಲ್ದೆ ಎಷ್ಟೋ ಕೆಲಸ ಪೂರ್ತಿ ಆಗೋದೇ ಇಲ್ಲ.. ಗೊತ್ತಾಲ್ವಾ...!

ಎಲ್ಲ ಸರಿ ಈಗ ನಾನ್ ಯಾರನ್ನ ಲವ್ ಮಾಡೋದು.....

ಹೇ ನಮ್ಮ ಕಾಲೇಜ್ ನಲ್ಲಿ ಎಷ್ಟ್ ಚೆಂದ ಚೆಂದದ ಹುಡುಗಿಯರಿಲ್ಲ..

ಶಾಂತಿ-- ಕಪ್ಪಗಿದ್ದರು ಲಕ್ಷಣವಾಗಿ ಇದ್ದಾಳೆ, …. ಛೆ ಬೇಡ ಬೇಡ.. ಅವಳು ತಮಿಳಿನವಳು.. ಕವಿಗೆ ಒಬ್ಬ ಕವಯಿತ್ರಿ ಸಿಗದೆ ಇದ್ದರು ಪರವಾಗಿಲ್ಲ.. ಕೊನೆ ಪಕ್ಷ ಕವಿ ಮನಸನ್ನಅರ್ಥ ಮಾಡಿಕೊಳ್ಳೋ ಒಬ್ಬ ಕನ್ನಡತಿ ಬೇಡ್ವೇ?


ಹೌದು ಮತ್ತೆ ಆ ಶಿಲ್ಪ-  ಬೇಡಪ್ಪ.. ಅವಳಿಗೆ ಕೊಬ್ಬು ಜಾಸ್ತಿ.. ಮೈಯಲ್ಲೂ.. ಮನಸ್ಸಲ್ಲೂ……!!

ಕಲಾ- ಹ್ಮ್ ಹ್ಮ್ ಹ್ಮ್ -   ನಳಿನಿ... ಹ್ಮ್ ಹ್ಮ್ ಹ್ಮ್ ಹ್ಮ್

ಮತ್ತೆ ನನಗೆ ಸೆಟ್ ಆಗೋದ್ ಯಾರಪ್ಪಾ????

ಹಾ........!  ಅವಳೇ ಸರಿ..  ಅವಳೇ  ನಂದಿನಿ”    ನಿತೀಶ ನಿಗೆ ಮ್ಯಾಚ್ ಆಗೋ ಒಂದೇ ಒಂದು ಪ್ರೊಫೈಲ್
ಎಷ್ಟ್ ಚೆನ್ನಾಗಿ ಇದ್ದಾಳೆ, ಸಕ್ಕತ್ತಾಗಿ ಹಾಡ್ತಾಳೆ, ಬುದ್ದಿವಂತೆ ಕೂಡ
ಸೂಪರ್ ಸೂಪರ್.. ನನ್ನ lyrics ಗೆ ಅವಳೇ Singer.
ಅದ್ಭುತ , ಅಂತೂ ಬಿಟ್ಟಿ ಕರೆನ್ಸಿಲಿ 3 ಫೋನ್ ಕಾಲ್ ಮಾಡಿಕೊಂಡಷ್ಟು ಖುಷಿ ಆಯ್ತು...

ಆದ್ರೆ ಅವಳಿಗೆ ಹೆಂಗಪ್ಪಪ್ರಪೋಸ್ ಮಾಡೋದು...

ಹೇ ನಮ್ಮ ಸತೀಶನ ಕೇಳಿದ್ರಾಯ್ತು….

ಛೇ ಛೇ.. ಬೇಡ ಬೇಡ, ಒಬ್ಬ ಕವಿಯಾಗಿ,, ನಾನು ಒಂದು ಹುಡುಗಿಗೆ ಪ್ರೋಪೋಸ್ ಮಾಡೋದ್ದನ್ನ ಬೇರೆಯವರ ಕೈಲಿ ಹೇಳಿಸಿಕೊಳ್ಳೋದಾ.... ಅದೆಷ್ಟು ಜನಕ್ಕೆ Love letter ಬರೆದು ಕೊಟ್ಟಿಲ್ಲ... ನಾನೇ ಟ್ರೈ ಮಾಡ್ತೀನಿ....
ಆದ್ರೂ ಭಯಾನೆ,,,
ನೋಡುವ ಜೈ ಗಣೇಶ ಅಂತ ಮುನ್ನಿಗ್ಗಿದ್ರೆ ಆಯ್ತು!...... .




 @@@@@@@@@@@@ 






PART- 3

ಮಾರನೇ ದಿನ ನಂದಿನಿ ಗಾಗಿ ಕಾಯ್ತಾ ಇದ್ದ ನಿತೀಶ್, ಅವಳು ಕಾಲೇಜ್ ಗೆ ಬಂದ ಕೂಡಲೇ ಅವಳಿಗೆ Matter ಹೇಳಿ ಬಿಡಬೇಕೆಂದು, ಹೃದಯದ ಭಾರವನ್ನು ಕಡಿಮೆ ಮಾಡಿಕೊಳ್ಳಲು  ಹತ್ತಿರ ಬರ್ತಾನೆ..

ಹಾಯ್ ನಂದಿನಿ
ಹಾಯ್ ನಿತೀಶ್ ನಮಸ್ಕಾರ!
ಶುಭೋದಯ..

ಹೇಳಿ ಏನ್ ಸಮಾಚಾರ

ಮೂಡಿಹುದು ನನ್ನೆದೆಯಲ್ಲಿ ಹೊಸದೊಂದು ಆಶಾಕಿರಣ
ನಿನ್ನ ಕಂಡಾಗಿನಿಂದ ಮನಸ್ಸಲ್ಲೇನೋ ತಲ್ಲಣ
ತಲೆಯಲ್ಲಿ ನಾನಾ ವಿಷಯಗಳ ನರ್ತನ
ಮರುಗಿಹೋಗಿರುವೆ ನಾ ಕಳೆದುಕೊಂಡು ನಿದ್ದೆನಾ
ಹೇಳು ನೀ, ಇದೇನು ಪ್ರೀತಿನಾ
ಇಲ್ಲ ದೇವರು ಕೊಟ್ಟ ವರನಾ.!”     (  ಎಂದು ಕವನದ ಮೂಲಕ ತನ್ನ ಮನಸ್ಸಲ್ಲಿರುವುದನ್ನು ತಿಳಿಸುತ್ತಾನೆ )

ಆದರೆ ನಂದಿನಿ

ವಾವ್.. ಸೊ ಸ್ವೀಟ್, ಅಂತೂ ಬೆಳಿಗ್ಗೆ ಬೆಳಿಗ್ಗೇನೆ ಒಂದು ಒಳ್ಳೆ ಕವನ ಹೇಳಿಬಿಟ್ಟಿರಿ
ಥ್ಯಾಂಕ್ ಯೂ...

(ಎಂದು ಹೇಳಿ ಮತ್ತೆ ಸಿಗ್ತೀನಿ.. ಅಂತ ಹೇಳಿ ಅವಳ ಪಾಡಿಗೆ ಅವಳು ಹೊರಟು ಬಿಡ್ತಾಳೆ....)

ಇಲ್ಲಿ ನಿತೀಶ್,,, ಅರೆಅಲ್ಲ ಅದು... ನಂದಿನಿ.. ಹಲೋ ಹಲೋ.....
ಛೇ..ಎಲ್ಲ ಕವಿತೆಗೂ ಕೊಡೊಶಹಬ್ಬಾಸ್ ಗಿರಿ ತರ... ಇದಕ್ಕೂ ಗುಡ್, ಸ್ವೀಟ್ ಅಂತ ಹೇಳಿ ಕಾಲ್ ಎತ್ತಿ ಬಿಟ್ಟಳಲ್ಲ.

ಆಲ್ ರೈಟ್



"ಮರಳಿ ಪ್ರಯತ್ನವ ಮಾಡು
ಗೆಲುವು ನಿನ್ನದೆ
ಗೆದ್ದು ಕುಣಿದಾಡು
ಅವಳ ಒಲವು ನಿನ್ನದೆ" !!!.   ಎಂದು ತನಗೆ ತಾನೇ ಹೇಳಿಕೊಳ್ಳುತ್ತಾನೆ


(ಹೌದು ನಿತೀಶ ಪ್ರಯತ್ನ ಬಿಡಲಿಲ್ಲ, ಗೆಲ್ಲುವ ಛಲ ಅವನ್ನಲ್ಲಿತ್ತು

ಕಾಲೇಜ್ ಬೆಲ್ ಹೊಡೆಯುವುದನ್ನೇ ಕಾಯುತ್ತಿದ್ದವನು, ಟಕ್ಕನೆ ಎದ್ದು ನಂದಿನಿ ಹಿಂದೆ ಬೀಳುತ್ತಾನೆ, ಹಿಂಬಾಲಿಸಿ ತುಸು ದೂರ ಬಂದೊಡನೆ ಅವಳನ್ನ ಕೂಗಿ ನಿಲ್ಲಿಸಿ, ಎದುರುಗಡೆ ಪ್ರತ್ಯಕ್ಷನಾಗುತ್ತಾನೆ.)

ಕ್ಷಮಿಸಬೇಕು ಮತ್ತೆ ಡಿಸ್ಟರ್ಬ್ ಮಾಡ್ತ ಇದೀನಿ..

ಅಯ್ಯೋ ಪರವಾಗಿಲ್ಲ ಹೇಳಿ ಏನು ಮತ್ತೊಂದ್ ಹೊಸ ಕವಿತೆ ಬರೆದ್ರಾ... ?

ಅರೆ ಏನು ಬರೀ ಕವಿತೆ ಇದ್ರೆ ಮಾತ್ರಾನ ನೀವು ನನ್ನ ಜೊತೆ ಮಾತಾಡೋದು..

ಛೆ ಛೆ ಹಾಗೇನಿಲ್ಲ, ನಿಮ್ಮ ಪ್ರತಿಯೊಂದು ಮಾತು ನನಗೆ ಕವಿತೇನೇ. ನಿಮ್ಮ ಮಾತನ್ನ ಕೇಳೋದೇ ನಮ್ಮ ಅದೃಷ್ಟ ಗೊತ್ತಾ.!

ಓಹೋ ತುಂಬಾ ಹತ್ತಿಸಬೇಡಿ ಆಮೇಲೆ ನೀವ್ ನನ್ನ ಹಿಡಿಯೋಕೆ ಸರ್ಕಸ್ ಮಾಡಬೇಕಾಗುತ್ತದೆ.

( ಇಬ್ಬರೂ ನಕ್ಕರು ಒಬ್ಬರನ್ನೊಬ್ಬರು ಕಣ್ಣಲ್ಲಿ ಕೂಡಿಟ್ಟುಕೊಂಡು.)

ಮುಂದೆವರೆದ ನಿತೀಶ, ಮತ್ತೇನು ಯೋಚಿಸದೆ, ಸ್ವಲ್ಪವೂ ತಡ ಮಾಡದೆ..
ಒಂದೇ ಬಾರಿಗೆ..
ನಂದಿನಿ...     " ಲವ್ ಯೂ"     ಎಂದು ಹೇಳೆ ಬಿಡ್ತಾನೆ..

ಅನಿರೀಕ್ಷಿತವಾಗಿ ಮಾತನ್ನು ಕೇಳಿದ ನಂದಿನಿ ಸ್ವಲ್ಪ ಮೌನವಾಗಿದ್ದು. ಜೋರಾಗಿ ನಗುತ್ತಾಳೆ,,

ಏನ್ ನಿತೀಶ್ ಇವತ್ತು ತುಂಬಾ ಕಾಮಿಡಿ ಮಾಡ್ತ ಇದೀರಲ್ಲ..

ರಿ ನಾನ್ ಸೀರಿಯಸ್ ಆಗಿ ಹೇಳ್ತಾ ಇದೀನಿ.. ಇದು ಕಾಮೆಡಿ ಅಲ್ಲ. ನೀವ್ಯಾಕೆ ನಾನ್ ಏನ್ ಹೇಳಿದ್ರು ಕತೆ ಕವನ ಅಂತ ತಿಳ್ಕೊತೀರಾ..
ನನಗೂ ಪುಸ್ತಕದಿಂದಾಚೆಗೆ ಯೋಚನೆ ಮಾಡೋ ತಲೆ ಇದೆ.!

(ನಿತೀಶನ ಮಾತಲ್ಲಿ ನಿಜವಾಗಲೂ ಸೀರಿಯಸ್ ಎದ್ದು ಕಾಣುತ್ತಿತ್ತು)

ಏನ್ ಹೇಳ್ತಾ ಇದೀರಾ ನಿಜಾನಾ......... ನೀವು ನನ್ನ   "ಲವ್"  ..... .. ಓಹ್ ಮೈ ಗಾಡ್.. ನನಗೆ ಇಂಥದೊಂದು ಸರ್ಪ್ರೈಸ್ ಸಿಗತ್ತೆ ಅಂತ ಅಂದುಕೊಂಡಿರಲಿಲ್ಲ

ಅಂದ್ರೆ ನೀವು ನನ್ನ ಒಪ್ಕೊಂಡ್ರಿ ಅಂತ ಆಯ್ತು..ooooooo  (ನಿತೀಶ್ ಖುಷಿಯಲ್ಲಿ ಮುಳುಗಿಹೋಗಿದ್ದ)
ಹೌದು ಎಂದು ಸೂಚನೆ ಕೊಟ್ಟ ನಂದಿನಿ ಕಣ್ಣಲ್ಲಿ ನೀರೇ ಬಂತು...
ಉಪ್ಪ್ ನನಗಂತೂ ಭಯನೇ ಆಗೋಗಿತ್ತು. ನೀವ್ ಒಪ್ಪಿಕೊಳ್ತೀರೋ ಇಲ್ವೋ ಅಂತ...

ಅಯ್ಯೋ ಯಾಕೆ ಅಳ್ತಾ ಇದೀರಾ.. ಏನಾಯ್ತು

ಏನಿಲ್ಲ ಇದು ಖುಷಿಗೆ... ಹೇಳ ಬೇಕಂದ್ರೆ ನಿಮ್ಮ ಬುಟ್ಟಿಗೆ ನಾನ್ ಯಾವತ್ತೋ ಬಿದ್ದಿದ್ದೆ..   ನೀವು ಇವತ್ತು ಇಣುಕಿ ನೋಡಿದ್ರಿ ಅಷ್ಟೆ.
ಬರೀ ನಾನಲ್ಲ ನಮ್ಮ ಕಾಲೇಜಿನಲ್ಲಿ ಇನ್ನೂ ಸುಮಾರು ಹುಡ್ಗೀರ್ ಇದಾರೆ ನಿಮ್ಮ ಲಿಸ್ಟ್ ನಲ್ಲಿ..
ನಿಮ್ಮ ಕ್ರಿಯಾಶೀಲತೆ, ಮುಗ್ದತೆ, ಚಾಣಕ್ಯತೆ, ಯಾರಿಗ್ ಇಷ್ಟ ಆಗಲ್ಲ ಹೇಳಿ..

oh oh ನೋಡಿ ನೀವ್ ಮತ್ತೆ ನನ್ನ ಹೊಗಳುತ್ತಾ ಇದೀರ!

ಅಯ್ಯೋ ಸಾರೀ ಸಾರೀ.. ಆಗಂತಾ ನೀವೇನಾದ್ರೂ ಬೇರೆ ಹುಡ್ಗೀರ್ ಜೊತೆ ಹೋಗ್ ಹೀಗ್ ಬಿಟ್ಟೀರಾ..ಆಮೇಲೆ ಅಷ್ಟೇ...!

ಅಬ್ಬಾ,..ಪ್ರೀತಿ ಶುರುವಾಗಿ ಇನ್ನೂ ಅರ್ಧ ನಿಮಿಷ ಆಗ್ಲಿಲ್ಲ... ಆಗ್ಲೇ ....

( ಮತ್ತೆ ನಕ್ಕರು,,, ಕಣ್ಣುಗಳಲ್ಲಿ  ಸೆರೆ ಹಿಡಿದು ಒಬ್ಬರನ್ನೊಬ್ಬರು,  ನಗುತ್ತಲೇ ಇದ್ದರೂ...!

ಮುಂದುವರೆದ ನಂದಿನಿ..

ಬರೀ ಕವಿತೆ ಹೇಳೀನೆ ಹೊಟ್ಟೆ ತುಂಬ್ಸಲ್ಲ ತಾನೆ.J

ಹ್ಮ್ ಹ್ಮ್.. ಡೊಂಟ್ ವರಿ ನನ್ನ ಹೊಟ್ಟೆ ಬಗೆದಾದ್ರು ನಿನ್ನ ಹೊಟ್ಟೆ ತುಂಬಿಸ್ತೀನಿ.

ಏನು.. ???

ಅಂದ್ರೆ ಎಷ್ಟೇ ಕಷ್ಟ ಬಂದ್ರು ನಾನೇ ಅನುಭವಿಸಿ, ಬರೀ ಸುಖನಷ್ಟೇ ನಿಮಗೆ ಹಂಚ್ತೀನಿ ಅಂತ..

ಹಾಹಾ.. ನೀವ್ ಕಷ್ಟ ಪಡ್ತಿದ್ರೆ.. ಅದೇಗೆ ನಾನ್ ಸುಖವಾಗಿರ್ತೀನಿ..

ಅಲಲಲೆ.. ಬಿಟ್ರೆ ಮೇಡಮ್ ನವರು ಈಗಿನಿಂದಲೇ ನನ್ನ ಮೇಲೆ ಅಧಿಕಾರ ಚಲಾಯಿಸುವ ಆಗಿದೆ
ಸದ್ಯಕ್ಕೆ ಸಾಕು...ನಾಳೆ ಸಿಗೋಣ..

ಮಾತಾಡೋದು ತುಂಬಾ ಇದೆ
ಮೌನ ಮರೆಯಾಗಿ ಹೋಗಿದೆ..

ಇನ್ನೇನಿದ್ರೂ "ಮಾತಾಡೋನೆ ಮಹಾಶೂರ"J





 @@@@@@@@@@





PART - 4

ಹೀಗೆ ಶುರುವಾದ ಇವರ ಪ್ರೀತಿ ನಾನ್ ಸ್ಟಾಪ್ ಇಲ್ಲದೆ ಓಡ್ತಾ ಇರುತ್ತೆ.. ನಿತೀಶ್ ಕೂಡ ನಂದಿನಯನ್ನ ತುಂಬಾನೇ ಗೌರವಿಸುತ್ತಿರುತ್ತಾನೆ.. ಅಷ್ಟೇ ಪ್ರೀತಿಸುತ್ತಿರುತ್ತಾನೆ

ಸಂಜೆ ನಿನಗಾಗೆ ಬದಲಾಗಿದೆ
ತಂಗಾಳಿ ಮೈಗಂಟಿ ಜೊತೆಗೂಡಿದೆ
ನಾನಿರಲು ಸನಿಹ ಬೇರೇನು ಬೇಕಿದೆ
ಜೀವ ನಿನಗಾಗೆ ಮುಡುಪಾಗಿದೆ

ನನ್ನೆಲ್ಲ ಬರಹಕ್ಕೂ ನೀನೇನೆ ಪ್ರೇರಣೆ
ಕಣ್ಣ ನೋಟ ಬೇರೆಲ್ಲೂ ಕಾಣೆನೆ
ಪ್ರೇಮ ಪುಟದಲ್ಲಿ ನಿನ್ನೆಜ್ಜೆ ಸಾಧನೆ
ನಾ ಬರೆದ ಕೃತಿಯು ನಿನಗಾಗೆ ಅರ್ಪಣೆ!    ಎನ್ನುತ್ತಾ ನಿತೀಶ ನಂದಿನಿಯ ಪ್ರೀತಿಯನ್ನು ಹೀಗೆ ವರ್ಣಿಸುತ್ತಾನೆ


ಈಗೆ ಇವರ ಪ್ರೀತಿ ಸಮೃದ್ದವಾಗಿತ್ತು.. ಇವರ ಪ್ರೀತಿಯಲ್ಲಿ ಖುಷಿಗೆ ಪಾರವೇ ಇರಲಿಲ್ಲ ... ಕವನಗಳಿಗೆ ಬರವೇ ಇರಲಿಲ್ಲ

ದಿನಾ ಹರಟೆ, ಅವಳಿಗೆಂದೆ ಬರೆದ ದಿನಕ್ಕೆರಡು ಕವನ, ಊರು ಕೇರಿ ಸುತ್ತಾಟ, ಟಾಕೀಸ್ ನಲ್ಲಿ ಮೂವಿ ನೋಟ,ಲಾಲ್‌ಬಾಗ್ ನಲ್ಲಿ ಲವ್. ಕಬ್ಬನ್ ಪಾರ್ಕ್ ನಲ್ಲಿ ಕಲರವ, ಮೈಸೂರ್ಟ್ರಿಪ್, ಶಾಪಿಂಗ್ ಮಾಲ್ ತರ ತರ ಸ್ಲಿಪ್.

ಟೋಟಲಿ ಇವರ ಪ್ರೀತಿಯಲ್ಲಿ ಸಿಹಿಯೋ ಸಿಹಿ.  ಒಬ್ಬರ ಮನಸ್ಸಲ್ಲೊಬ್ಬರು ಗೀಚಿಕೊಂಡಿದ್ದರು ಮುದ್ದು ಮುದ್ದಾದ ಸಹಿ.

ನಿತೀಶ ಅವಳಿಗೆ ನೋವಾಗುವಂತೆ ಒಂದು ದಿನವೂ ನಡೆದುಕೊಳ್ಳುತ್ತಿರಲಿಲ್ಲ. ಅವಳು ಕೇಳಿದ ಯಾವುದಕ್ಕೂ ಇಲ್ಲ ಎನ್ನಬಾರದು ಎಂದು ಪಾರ್ಟ್ ಟೈಮ್ ಜಾಬ್  ಮಾಡ್ಕೊಂಡು ಅದರಲ್ಲಿ ಬಂದಿದ್ದನೆಲ್ಲವನ್ನ ಅವಳ ಖುಷಿಗೆ ಅಂತಾನೆ ಎತ್ತಿ ಇಡುತ್ತಿದ್ದ..  ಅವಳ ನಗುವಲ್ಲಿ ಇವನು ಖುಷಿ ಪಡ್ತಿದ್ದ.

ಒಂದು ದಿನವೂ ಮುನಿಸಿಕೊಳ್ಳಲಿಲ್ಲ
ಒಂದು ದಿನವೂ ನೋಡದೆ ಇರುತ್ತಿರಲಿಲ್ಲ
ಒಂದು ದಿನವೂ ಫೋನ್ ಕಾಲ್ ತಪ್ಪಿಸುತ್ತಿರಲಿಲ್ಲ
ಸಂತೋಷಕ್ಕೆ ಪಾರವೇ ಇರಲಿಲ್ಲ..
ಪ್ರೀತಿ ಹಸಿರಾಗಿತ್ತು... ಅಂದವಾಗಿತ್ತು,, ಮತ್ತು ಮಾದರಿಯಾಗಿತ್ತು....!!!

ಆದರೆ ಹೊಸ ಜೋಡಿ ಮೇಲೆ ನೂರಾರು ಕಣ್ಣು ಅನ್ನೋ ಹಾಗೆ.. ಇವರ ಪ್ರೀತಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ..

ನಂದಿನಿಗೆ ಇದ್ದಕ್ಕಿದ ಹಾಗೆ ನಿತೀಶನ ಮೇಲೆ ಆಸಕ್ತಿ ಕಡಿಮೆಯಾಗುತ್ತಾ ಹೋಯಿತು
ಅವನು ಜೊತೆಯಲ್ಲಿದ್ರೆ ಸ್ಟಾಪ್ ಇಲ್ಲದೆ ಮಾತನಾಡುತ್ತಿದ್ದವಳು. ಇಗೀಗ ಮೌನವಾಗೆ ಇರುತ್ತಾಳೆ.. ಮೆಸೇಜ್ ಮಾಡಿದ್ರೆ No Reply. ಫೋನ್ ಮಾಡಿದ್ರೆ ರಿಸಿವ್ ಮಾಡಲ್ಲ.. ನೋಡಿದ್ರು ಪರಿಚಯ ಇಲ್ಲವೇನೋ ಎಂಬಂತೆ ನಡೆದು ಕೊಳ್ಳುತ್ತಾಳೆ.   ಏನಾಯ್ತು?????. |


ಫೋನ್ ಗೆ ಮೆಸೇಜ್ ಗೆ ಸಿಗದೆ ಕಾಟಕೊಡುತ್ತಿದ್ದ ನಂದಿನಿ ಇದ್ದಕ್ಕಿದಂತೆ ಕಾಲೇಜಿಗೆ ಬರೋದನ್ನ ನಿಲ್ಲಿಸಿ ಬಿಡ್ತಾಳೆ..ನಿತೀಶನಿಗೆ ಈಗ ಏನು ಮಾಡಬೇಕು ಅನ್ನೋದೇ ಗೊತ್ತಾಗುವುದಿಲ್ಲ..ಮನೆಯವರ ಬಗ್ಗೆ ಕೇಳಿದ್ರೆ ಸಮಯ ಬಂದಾಗ ಹೇಳ್ತೀನಿ ಅಂತಿದ್ಲು... ಅವಳ ಮನೆ ಅಡ್ರೆಸ್ಸ್ ಕೂಡ ಗೊತ್ತಿಲ್ಲ, ಕಾಲೇಜ್ ಗೆ ಕೊಟ್ಟಿದ್ದ ಅಡ್ರೆಸ್ಸ್ ಗೆ ಹೋಗಿ ವಿಚಾರಿಸಿದರೆ... ಅವರು ಮನೆ ಖಾಲಿ ಮಾಡಿ 3- 4 ತಿಂಗಳು ಆಯ್ತು ಅಂತ ಹೇಳ್ತಾರೆ... ಹೊಸ ಮನೆ ಬಗ್ಗೆ ಗೊತ್ತಿಲ್ಲ...ಮತ್ತೇಗೆ ಅವಳ ಹುಡುಕುವುದು??? ಅವಳ ಒಂದು ನಂಬರ್ ಬಿಟ್ಟರೆ ಬೇರೆ ಯಾವ ನಂಬರ್ ಕೂಡ ಗೊತ್ತಿಲ್ಲ... ಹಾಗಂತ ಇಷ್ಟು ದಿನದ ಪ್ರೀತಿನಾ ಬಿಟ್ಟು ಬಿಡಕ್ಕೆ ಆಗಲ್ಲ.... ಹುಡುಕಲೇಬೇಕು!

Yes

ಅವಳ ಕಾಲೇಜ್ ಫ್ರೆಂಡ್ಸ್ ನೇ ಕೇಳಬೇಕು.. ಎಂದುಕೊಂಡು ನಂದಿನಿಗೆ ಹತ್ತಿರವಾದ ಎಲ್ಲ ಫ್ರೆಂಡ್ಸ್ ಗಳನ್ನು ವಿಚಾರಿಸುತ್ತಾನೆ.

ಆದರೆ ಅವರು ಹೇಳೋದಿಷ್ಟು
ಇಲ್ಲ ನಮಗೆ ಅವಳ ಅಡ್ರೆಸ್ಸ್ ಏನು ಗೊತ್ತಿಲ್ಲ ಹೇಳಬೇಕಂದ್ರೆ ಅವಳು ನಮ್ಮ ಜೊತೆ ಅಷ್ಟಾಗಿ ಸೇರುತ್ತಿರಲಿಲ್ಲ.
ಮೊದಲಿನಿಂದಲೂ ಒಬ್ಬಳೇ ಇರುತ್ತಿದ್ದಳು, ನೀವು ಸಿಕ್ಕಿದ ಮೇಲೇನೆ ಅವಳು ಎಲ್ಲರ ಜೊತೆ ಬೇರೆಯೋಕೆ ಶುರು ಮಾಡಿದ್ದು ಮತ್ತು ಅವಳ ಮುಖದಲ್ಲಿ ನಗು ಕಂಡಿದ್ದು. ಯಾವತ್ತೂ ಅವಳು ತನ್ನ ಮನೆಯ ಬಗ್ಗೆಯಾಗಲಿ ಮನೆಯವರ ಬಗ್ಗೆಯಾಗಲಿ ಹೇಳಿದವಳಲ್ಲ ಕೇಳಿದರೆ ಉತ್ತರ ಕೊಡುತ್ತಿರಲಿಲ್ಲ .. ಅವಳು ಒಂತರಾ ಡಿಫರೆಂಟ್ ಗರ್ಲ್.. ಸಾರೀ ನೀವು ಬೇರೆ ಯಾರನ್ನಾದರೂ ವಿಚಾರಿಸಿ ನೋಡಿ.!  ಎಂದು ಹೇಳಿ ತಮ್ಮ ಪಾಡಿ ತಾವು ಹೊರಟು ಹೋಗುತ್ತಾರೆ

ಇದೆಲ್ಲ ಕೇಳಿದ ಮೇಲೆ ನಿತೀಶನಿಗೆ ಬೇಸರವಾಗುತ್ತೆ.. ಬೇರೆ ಯಾವ ಉಪಾಯಗಳು ಹೊಳೆಯುವುದಿಲ್ಲ..
ತುಂಬಾ ಬೇಜಾರಾಗಿ ತಲೆ ಮೇಲೆ ಕೈ ಹೊತ್ತುಕೊಂಡು ಒಮ್ಮೆ ಆಕಾಶದ ಕಡೆ ಮುಖ ಮಾಡಿ ಅವಳ ಚಿಂತೆಯಲ್ಲೇ ಒಂದು ಏದುಸಿರು ಬಿಟ್ಟ ನಿತೀಶನಿಗೆ ನೆನಪಾಗೋದು ಅವನ ಗೆಳೆಯ ಸತೀಶ... ಅವನಿಂದ ಏನಾದ್ರೂ ಸಹಾಯ ಆಗಬಹುದು ಎಂದು ಅವನಿಗೆ ಅವನೇ ಸಮಾಧಾನ ಹೇಳಿಕೊಂಡು..ಹೊರಟ ನಿತೀಶನಿಗೆ ಸತೀಶ ಸಿಗೋದು..


ಬಾರಿನಲ್ಲಿ.!!  …

 @@@@@@@@@@ 




PART - 5

ಅವನ ಮೂವರು ಗೆಳೆಯರ ಜೊತೆ ಸೇರಿಕೊಂಡು ಬಿಯರ್ ಅನ್ನು ನಿಧಾನವಾಗಿ ಇಳಿಸುತ್ತಿದ್ದ ಸತೀಶನ ಕಣ್ಣಿಗೆ ಬಾರ್ ಬಾಗಿಲಲ್ಲೇ ನಿಂತಿದ್ದ ನಿತೀಶ ಕಾಣಿಸಿಕೊಂಡ.

ಓ ಓ ಓ ಕವಿರಾಜರು ... ಒಳಗೆ ಬನ್ನಿ ಯಾಕೆ ಅಲ್ಲೇ ನಿಂತುಕೊಂಡಿದೀರಾ... ಸಾರಿ ಪ್ರೇಮಕವಿಗಳೇ.
ಏನು ಇವತ್ತು ಈ ಪೋಲಿ ನೆನಪು ಮಾಡಿಕೊಂಡು ಬಾರ್ ವರೆಗೂ ಹುಡುಕಿಕೊಂಡು ಬಂದುಬಿಟ್ಟಿದೀರಾ. ಅದು ತುಂಬಾ ದಿನಗಳ ಬಳಿಕ
ಹುಡ್ಗಿ ಸಿಕ್ಕಿದ ಮೇಲೆ ಮರೆತೇ ಬಿಟ್ಟಿದ್ರಿ... ಏನಮ್ಮ ಸಮಾಚಾರ. ಸ್ವರ್ಗ ಕಂಡುಕೊಂಡ್ರ.

ಸತೀಶ್ ನಿನ್ನ ಹತ್ರ ಸ್ವಲ್ಪ ಮಾತಾಡಬೇಕು.. ಒಂದು ಅರ್ಧ ಗಂಟೆ ನನಗಾಗಿ ಸ್ಪೆಂಡ್ ಮಾಡಕ್ಕೆ ಆಗುತ್ತಾ

ಏನಮ್ಮ ಅಂತ ಮ್ಯಾಟರ್....ಅದು ನನ್ನ ಜೊತೆ ..ಸರಿ ಕುಳಿತಿಕೊ ಮಾತಾಡುವ

ಈ ಜಾಗದಲ್ಲಿ ಚರ್ಚೆ ಮಾಡುವ ವಿಷಯ ಅಲ್ಲ ಮಗ ಅದು... ಹೊರಗಡೆ ಎಲ್ಲಾದ್ರೂ ಹೋಗೋಣ.

ಅಯ್ಯೋ ನಿನ್ನ ಕುತ್ಕೊಳಲೇ.. ಎಷ್ಟೋ ಸಂಸಾರದ Problem Solve ಆಗಿರೋದೇ ಇಲ್ಲಿ.. ಇನ್ನ ನಿನ್ನ ವಿಷಯ ಏನು ಮಹಾ..
ಇದು ಒಂಥರಾ ಕೋರ್ಟ್ ಇದ್ದಂಗೆ ಮಗಾ, ಎರಡು ನಿಮಿಷಕ್ಕೊಬ್ಬರು ಲಾಯರ್ ಹುಟ್ಟಿಕೊಂಡು ಬಿಡ್ತಾರೆ...ಕೂತ್ಕೊ ಎರಡು ನಿಮಿಷ ನೀನೇ ನೋಡುವಂತೆ.

ಏನು ಹೇಳ್ತೀರಾ ಫ್ರೆಂಡ್ಸ್..

ಸತೀಶನ ಗೆಳೆಯರೆಲ್ಲರೂ ( ಹೌದು ಹೌದು ನೀವು ಕುಳಿತುಕೊಳ್ಳಿ ಬಾಸ್ ಏನ್ ಇದ್ದರು ತಲೆ ಕೆಡಿಸಿಕೊಳ್ಳಬೇಡಿ.)

ಆದರೂ ಇಲ್ಲಿ ಬೇಡ ಅಂತ.

ಹೇ ಏನೋ ನಿನ್ನ ತಲೆಹರಟೆ,, ಇಲ್ಲಿ ಹೇಳುವುದಾದರೆ ಹೇಳು ಇಲ್ಲ ಅಂದ್ರೆ ಜಾಗ ಖಾಲಿ ಮಾಡು. ನಾವು ಇವಾಗ ಎಲ್ಲಿಗೂ ಬಾರೋ ಮೂಡ್ ನಲ್ಲಿ ಇಲ್ಲ.

(ಇನ್ನೇನು ಮಾಡಲಾಗದೆ ನಿತೀಶ ಅಲ್ಲೇ ಕುಳಿತುಕೊಳ್ಳುತ್ತಾನೆ)

ಬಾಸು ಇನ್ನೊಂದ್ Extra ಬಿಯರ್ ಕೊಡಿ

ಅದೆಲ್ಲ ಏನು ಬೇಡವೋ

ಹೇ ತಗೊಳೋ ನಾಲಿಗೆ ಚೆನ್ನಾಗಿ ಓಡುತ್ತೆ.. ಅರ್ಧ ಗಂಟೆ ಅಂತ ಹೇಳಿದೀಯ.. 10 ನಿಮಿಷದಲ್ಲಿ ಎಲ್ಲ ಹೇಳಿ ಮುಗಿಸಿ ಬಿಡ್ತೀಯ.

ಬೇಡ ಅಂತ ಹೇಳಿದ್ನಲ್ಲ,  ಕೋಪ ಮಾಡಿಕೊಂಡವನಂತೆ ಹೇಳಿದ

ಓ ಆಯ್ತು ಬಿಡಪ್ಪ.. ನಿಮ್ಮ ಧ್ಯಾನಕ್ಕೇಕೆ ನಾನು ಭಂಗ ಮಾಡ್ಲಿ.  ನಾನೇ ಕುಡ್ಕೋತೀನಿ ನೀನು ಶುರು ಮಾಡು

ತುಂಬಾ ಸಂಕಟ ಆಗ್ತಾ ಇದೆ ಕಣೋ

ಯಾಕೋ

ಅವಳು ಕಾಣ್ತಾ ಇಲ್ಲ

ಹೌದಾ .. ಎಲ್ಲಿ . ಯೆಸ್ ಮಗ ನನಗೂ ಯಾರು ಕಾಣ್ತಾ ಇಲ್ಲ ಎಂದು ಯಾರನ್ನೋ ಹುಡುಕುವ ಹಾಗೆ ಹೊರಗಡೆ ನೋಡಿ ನಗುತ್ತಾನೆ

ಕಾಮೆಡಿ ಬೇಡ್ವೋ.. ಇದು ತುಂಬಾ ಸೀರಿಯಸ್ ವಿಷ್ಯ

ಶ್! ಸೀರಿಯಸ್! ಓಕೇ ನೀ ಮುಂದುವರೆಸು ಶಿಷ್ಯ.


ಇಷ್ಟು ದಿವಸ ಚೆನ್ನಾಗೇ ಇದ್ವಿ.  ಒಂದು ದಿನ ಕೂಡ ಅವಳು ನನ್ನ ಮೇಲೆ ಕೋಪ ಮಾಡಿಕೊಳ್ಳುವುದಾಗಲಿ.. ಬೇಜಾರ್ ಮಾಡಿಕೊಳ್ಳುವುದಾಗಲಿ ಮಾಡಿರಲಿಲ್ಲ..ಅವಳ ಯಾವುದಕ್ಕೂ ನಾನು ಇಲ್ಲ ಅಂದಿರಲಿಲ್ಲ. ನೀನು ಹೇಳಿದ ಹಾಗೆ ನಮ್ಮ ಪ್ರೀತಿ ಪೂರ್ತಿ ಬಣ್ಣ ಬಣ್ಣದಿಂದ ಕೂಡಿತ್ತು.. ಸ್ವರ್ಗಕ್ಕೂ ಮಿಗಿಲಾದ ಸುಖ ಇತ್ತು.."ಅವಳು"  ಅವಳು ಅಂದ್ರೆ ನಾನು ಏನು ಹೇಳಲಿ ಮಗಾ, ಉಸಿರು ಹ್ಮ್ ಅದು ಒಂದು ದಿನ ನಿಂತುಹೋಗುತ್ತೆ.. ಆದರೆ ಅವಳ ಮೇಲಿನ ಪ್ರೀತಿ ಮಾತ್ರ ಯಾವತ್ತೂ ಕಡಿಮೆಯಗೋಲ್ಲ... ಅವಳಿಗೆ ನಾನು ಕೂಡ ಹಾಗೆ ಇದ್ದೆ
ಆದರೆ ಈಗ ಅವಳು ಫೋನ್ ಸ್ವಿಚ್ ಆಫ್ ಆಗಿದೆ, ದಿನಾ ಸಿಗುವ ಜಾಗಕ್ಕೂ ಬರ್ತಿಲ್ಲ...ಮನೆ ಹತ್ತಿರ ಹೋಗೋಣ ಅಂದ್ರೆ ಅವಳ ಅಡ್ರೆಸ್ಸ್ ಗೊತ್ತಿಲ್ಲ.. ಕಾಲೇಜ್ ಗೆ ಕೊಟ್ಟಿರೋ ಅಡ್ರೆಸ್ಸ್ ನಲ್ಲಿ ಅವಳಿಲ್ಲ..ಖಾಲಿ ಮಾಡ್ಕೊಂಡ್ ಹೋಗಿ ಮೂರ್ ತಿಂಗಳಾಯ್ತಂತೆ... ಈಗ ಅವಳ ಹೇಗೋ ಹುಡುಕೋದು.  ಛೇ ಅವಳು ಹೀಗೆ ಮಾಡ್ತಾಳೆ ಅಂತ ನಾನು ಅಂದುಕೊಂಡಿರಲಿಲ್ಲ .. ನನಗೆ ಏನು ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ ಮಗ.. ಅವಳ ಬಿಟ್ಟು ಹೊರಗೆ ಬರೋಕೆ ಆಗ್ತಾ ಇಲ್ಲ...

ನೀನು ಅವತ್ತು ಒಂದು ಒಳ್ಳೆ ಮಡಿಕೆ ಮಾಡುವುದನ್ನ ಹೇಳಿಕೊಟ್ಟೆ.. ಆ ಮಡಕೆ ನೀರು ಕೂಡಿದಾಗ ಸಿಗುವ ತೃಪ್ತಿ ತೋರಿಸಿ ಕೊಟ್ಟೆ.
ಆದರೆ ಇವತ್ತು ಆ ಮಡಿಕೆ ನೀರಲ್ಲಿ ಏನೋ ಮಿಸ್ ಹೊಡೀತಾ ಇದೆ ಮಗ.. ರುಚಿ ಸಿಗ್ತಿಲ್ಲ... ನಾನೇ ನೀರು ಸರಿಯಾಗಿ ಹಾಕಿಲ್ವೋ. ಇಲ್ಲ ಮಡಕೇನೇ ಸರಿ ಇಲ್ವೋ... ಗೊತ್ತಾಗ್ತಾ ಇಲ್ಲ.. ಕನ್ಫ್ಯೂಸ್ ನಲ್ಲಿ ಇದೀನಿ.

ತುಂಬಾ ಕಷ್ಟ ಆಗ್ತಾ ಇದೆ.. ಎಲ್ಲಿದ್ದಾಳೋ.. ಏನಾಯ್ತೋ..???

ಓ ಹಿಂಗೆ ಮ್ಯಾಟರ್ .... ಪ್ರೀತಿ ಪತ್ತೆ ಇಲ್ಲ. ಮಗ ಇಲ್ಲಿ ನೀನು ನೀರು ಸರಿಯಾಗಿ ಹಾಕಿದಿಯೋ ಇಲ್ವೋ ನನಗೆ ಗೊತ್ತಿಲ್ಲ.. ಆದರೆ ನನಗೆ ಒಂದು ಮಾತ್ರ ಸ್ಪಷ್ಟವಾಗಿ ಕಾಣ್ತಾ ಇದೆ. ಮಡಿಕೆ ಹೊಡೆದು ಹೋಗಿದೆ... ಯೆಸ್ ಅವಳು ನಿನಗೆ ಮೋಸ ಮಾಡಿ ಬಿಟ್ತಿದಾಳೋ... ಅಷ್ಟೇ ಇನ್ನ ಅವಳು ನಿನಗೆಲ್ಲಿ ಸಿಗ್ತಾಳೆ.

ಕಾಣ್ತಾ ಇಲ್ಲ ಅಂದ ಮಾತ್ರಕ್ಕೆ ಮೋಸ ಮಾಡಿದಾಳೆ ಅಂತ ಹೇಗೋ ಹೇಳ್ತೀಯ.

ಲೋ ಈ ಹುಡ್ಗೀರೆ ಇಷ್ಟು ಕಣೋ.. ಇರೋ ತನಕ ಚೆನ್ನಾಗಿ ತಿಂತಾರೆ, ತಲೆ ಸವರುತ್ತಾರೆ, ಕೈ ಕೊಟ್ಟು ಓಡಿ ಹೋಗ್ತಾರೆ...ಹಿಡಿತೀನಿ ಅಂತ ಹೋದವರೆಲ್ಲ ಜಾರಿ ಬಿದ್ದವ್ರೆ. ನಮ್ನ ಬಲಿ ಕೊಡಕ್ಕೆ ಅಂತ ದೇವರ ಹೆಸರೇಳಿ ಊರಲ್ಲಿ ಬಿಟ್ಟಿರುತ್ತಾರಲ್ಲ ಹೋತ ಹಾಗೆ ನಾವು ಇವರ ಹೆಸರ ಹೇಳಿಕೊಂಡು ಗಡ್ಡ ಬಿಟ್ಕೊಂಡು ಊರೆಲ್ಲ  ತಿರುಗಾಡ್ಲಿ ಅಂತ ಆಸೆ ಪಡ್ತಾರೆ.. ಆದರೆ ಅವರಿಗೆ ಗೊತ್ತಿಲ್ಲ ನಾವು ಹಗ್ಗ ಕಿತ್ತ ಮೇಲೆ ಸಿಕ್ಕ ಸಿಕ್ಕ ಕಡೆ ಮೆಯ್ಡುಕೊಂಡು ಓಡಾಡ್ತೀವಿ ಅಂತ.

ನೀನೇನೋ ಇಷ್ಟೊಂದ್ ತಲೆ ಕೆಡಿಸಿಕೊಂಡು ಬಿಟ್ಟಿದೀಯ.. ಅದು ಏನಾಯ್ತೋ.. ಎಲ್ಲಿದ್ದಾಳೋ ಅನ್ನೋ ರೇಂಜ್ ನಲ್ಲಿ.
ತೂ ನಿನ್ನ ಹೋಗಲೇ ಹುಡುಗಿಯರಿಗೋಸ್ಕರ ಕಣ್ಣೀರ್ ಹಾಕಬೇಡ.. ಅಕ್ಕ ಸಿಗದಿರೆ ತಂಗಿ ಸಿಗುವಳು ಹಾಡು ಕೇಳಿಲ್ಲವೇನೋ
ಅವಳಿಲ್ಲ ಅಂದ್ರೆ ಇನ್ನೊಬ್ಬಳು ಹೋಗೋ ಕಣ್ಣೀರ್ ಒರೆಸಿಕೊಂಡು ಹೊಸ ಕಾಗೆಗೆ ಕಲ್ಲು ಹೊಡಿಯೋಗೊ.

ನನ್ನ ಹತ್ತಿರ ಇರುವುದು ಒಂದೇ ಹೃದಯ ಮಗ ಅದು ಅವಳ ಹೆಸರಿಗೆ ರಿಜಿಸ್ಟರ್ ಆಗಿ ಹೋಗಿದೆ... ಎರಡನೆಯದು ಸೃಷ್ಟಿ ಆಗಲ್ಲ.

ನಿನಗೆ ಬುದ್ದಿ ಬರಲ್ಲ ಬಿಡು... ನಾನು ನಿನ್ನ ಲೋಕ ಬಿಟ್ಟು ಹೊರಗೆ ಬಾರೋ ಎಲ್ಲರ ತರ ಮಜಾ ಮಾಡೋ ಅಂದೆ...
ನೀನು ನೋಡಿದ್ರೆ ನನ್ನ ಮಾತ ಸರಿಯಾಗಿ ಅರ್ಥ ಮಾಡಿಕೊಳ್ಳದೆ... ಪ್ರೀತಿ ಪೇಮ ಪರ ಪರ ಅಂತ ಕೆರಕೊಂಡ್ ಬಿಟ್ಟಿದೀನಿ  ಅಂತ ಫಿಲಂ ಡಯಲಾಗ್ ಹೊಡಿತೀಯಲ್ಲ. ನಿನಗೆ ಅವಳು ಸಿಗಲ್ಲ ಮರೆತುಬಿಡು ಅಂದರೆ ಹೃದಯ ಗಿದಯ ಅಂತ ಹರಿಕತೆ ಹೇಳ್ತೀಯ...  ನೀನು ಬರೆಯೋ ಕವಿತೆ ತರನೇ ಅವಳನ್ನು ಲವ್ ಮಾಡಿದ್ಯಾ. ತೂ ನಿನ್ನ ಒಂದು ನೈಟ್ ಆದ್ರೂ ಅವಳ ಜೊತೆ ಮಲಗಿದ್ದಿಯೇನೋ...


ಸತೀಶಆಆ..... ಏನು ಮಾತಾಡ್ತಾ ಇದೀಯಾ.. ಛೆ ಛೆ

ಮುಚ್ಕೊಳೊ ಕಂಡಿದೀನಿ ಛೆ ಛೆ ಅಂತೆ...
ನೀನು ಏನು ಅಂತ ತೋರಿಸ್ಕೊಡಕ್ಕೆ ಇದ್ದ ಒಂದು ಒಳ್ಳೆ ಅವಕಾಶಾನ ಕೈ ಚೆಲ್ಲಿ ಬಿಟ್ಟಿದೀಯ.. ಅದಕ್ಕೆ ಅವಳು ನಿನ್ನ ಕೈ ಬಿಟ್ಟಿ ಬಿಟ್ಟಳು...
ಹೋಗಲೇ ನಿನ್ನ ಹತ್ರ ಏನು ಇಲ್ಲ ಅಂತ ಗೊತ್ತಾಗಿ ಅವಳು ಬೇಕಾಗಿರೋನ ಸೆಲೆಕ್ಟ್ ಮಾಡಿಕೊಂಡು ಮಜಾ ಮಾಡ್ತ ಇರ್ತಾಳೆ..

ಸ್ವಲ್ಪ ನಾಲಿಗೇನಾ ಹಿಡಿತದಲ್ಲಿ ಇಟ್ಟುಕೊ.. ಬಾಯಿಗೆ ಬಂದ ಹಾಗೆ ಮಾತಾಡಬೇಡ.
ನಿನ್ನ ಕೈಲಿ ಸಹಾಯ ಮಾಡಕ್ಕೆ ಆದರೆ ಹೇಳು ಹೀಗೆಲ್ಲ ಹೊಲಸು ಮಾತಾಡಿ ಅವಳನ್ನ ಅಪವಿತ್ರ ಮಾಡಬೇಡ..

ಯಪ್ಪಾ ನೀನು ಸ್ವಾಮೀಜಿ ಆಗಿಬಿಡೊ ಈ ಪಾಟಿ ಗೌರವ ಇಟ್ಟುಕೊಂಡಿದೀಯ ಹುಡ್ಗೀರ್ ಮೇಲೆ.
ಹೋಗ್ಲಿ ಸ್ವಲ್ಪ ಹತ್ತಿರ ಬಾಯಿ ನಿನ್ನ ಕೈಲಿ ಆಗಲ್ಲ ಅಂದ್ರೆ ನಾನು ಫಿಕ್ಸ್ ಮಾಡಿ ಕೊಡ್ತೀನಿ ಇಬ್ಬರೂ ಸೇರಿ ಮಜಾ ಮಾಡುವ.

ಸತೀಶಆಆಆಆಆ....... ತು ನಿನ್ನ ಜನ್ಮಕ್ಕಿಷ್ಟು ನಾನು ನಿನ್ನ ಬರೀ ಪೋಲಿ ಅಂದುಕೊಂಡಿದ್ದೆ ಆದರೆ ರಾಕ್ಷಸ ಅಂತ ಗೊತ್ತಿರಲಿಲ್ಲ.... ಛೇ ನೀನು ಬೇಡ ನಿನ್ನ ಸಹವಾಸನೂ ಬೇಡ, ನನ್ನ ಪ್ರೀತಿನಾ ಹೇಗೆ ಉಳಿಸಿಕೊಳ್ಳಬೇಕು ಅಂತ ನನಗೆ ಗೊತ್ತು... ಬರ್ತೀನೋ ನಿನಗೆ ಹೆಣ್ಣು ಅಂದ್ರೆ ಏನು ಅಂತ ತೋರಿಸಿಕೊಡ್ತೀನಿ

ಹೋಯ್ ಏನ್ ಬಾಸು ನೀವು ಒಂದಕ್ಕೆ ಇಷ್ಟೊಂದ್ ಬೇಜಾರ್ ಮಾಡ್ಕೋತೀರಾ..
ನಾನು ಊರಿಗೆ ಎಂಟ್ರೀ ಕೊಟ್ರೆ ಸಾಕು ಅಪ್ಪ ಅಪ್ಪ ಅಂತ ಎಷ್ಟೊಂದ್ ಮಕ್ಕು ತಬ್ಬಿಕೊಳ್ಳೋಕೆ ಓಡೋಡಿ ಬರ್ತಾರೆ...ಆದರೆ ನನಗೆ ಯಾರನ್ನ ತಬ್ಬಿಕೋಬೇಕು ಅಂತಾನೆ ಗೊತ್ತಾಗೋಲ್ಲ.... ಆದರೂ ನಾನು ಎಷ್ಟು ಕೂಲ್ ಆಗಿ ಇದೀನಿ ನೋಡಿ... (ಎಂದು ಅಲ್ಲೇ ಕುಳಿತ್ತಿದ್ದ ಸತೀಶ ಸ್ನೇಹಿತನೊಬ್ಬ ಗರ್ವದಿಂದ ಹೇಳಿದ

'ಲೋ ತೂಕಾಲಿ ಸ್ವಲ್ಪ ಮುಚ್ಕೊಂಡ್ ಕುಳಿತುಕೊಳ್ಳಪ್ಪ ನಮಗೆಲ್ಲ ಗೊತ್ತು ನೀನು ಊರ ತುಂಬಾ ಮಕ್ಳು ಹುಟ್ಟಿಸಿ ಬಿಟ್ಟಿದೀಯ ಅಂತ
ಯಾವ್ ಟೈಮ್ ನಲ್ಲಿ ಯಾವ ಜೋಕ್ ಮಾಡಬೇಕೋ ಗೊತ್ತಾಗಲ್ಲ   ( ಎಂದು ಮುಖಕ್ಕೆ ಹುಗಿದ ಪಕ್ಕದಲ್ಲಿದ್ದ ಇನ್ನೊಬ್ಬ )

ಏನೋ ನನ್ನ experience ಹೇಳಿ ಕೊಂಡನಪ್ಪ…  ಎಂದು ಕಾಲರ್ ಹಿಡಿದು ಗರ್ವ ಪಡುವ ಇವನ ನೋಡಿ ನಿತೀಶ್

ಹ ಹ ನೀನೋ ನಿನ್ನ ಫ್ರೆಂಡ್ಸ್ ಓ... ತೂ ನಿಮ್ಮ ಜನ್ಮಕ್ಕಿಷ್ಟು... ನೀವೆಲ್ಲ ಹುಡುಗೀರ್ ಅಂದರೆ ಬರಲ್ಲಿ ಕೂತ್ಕೊಂಡು ಖಾಲಿ ಮಾಡಿ ಬಿಸಾಕೋ ಖಾಲಿ ಬಾಟಲ್ ಅನ್ಕೊಂಡ್ ಬಿಟ್ಟಿದೀರಾ... ನಿಮಗೆಲ್ಲ ಅದೆಲ್ಲಿಂದ ಬುದ್ದಿ ಬರಬೇಕು.. ಪಾಪಿ ನನ್ನ ಮಕ್ಕಳ..ಲೆ ಸತೀಶ ನೀನು ನನ್ನ ಫ್ರೆಂಡ್ ಅಂತ ಹೇಳಿಕೊಳ್ಳೋಕೆ ನಾಚಿಕೆ ಆಗ್ತಾ ಇದೆ...  ಬರ್ತೀನೋ ನಿನಗೆ ನನ್ನ ಪ್ರೀತಿ ಪವರ್ ಏನು ಅಂತ ತೋರಿಸಿಕೊಡ್ತೀನಿ.

ಲೆ ಹೋಗಲೇ ಹೋಗೋ ಏನಾದ್ರೂ ಮಾಡಿಕೊಂಡು ಹಾಳಾಗಿ ಹೋಗೋ... ಓಹೋ ನಾನು ಪೋಲಿ ಇವನು ಪರಂದಾಮ ಹೋಗಲೇ ಹೋಗೋ..

ಲೋ ರಂಗ ನಾನು ಇವನಿಗೆ ಬಣ್ಣದ ಲೋಕಕ್ಕೆ ಎಂಟ್ರೀ ಕೊಟ್ಟು ಬಣ್ಣ ಬಣ್ಣದ ಚಿಟ್ಟೆ ಹಿಡಿ ಅಂದೆ... ಈ ನನ್ನ ಮಗ ಅಲ್ಲೂ ಅವನದೇ ಲೋಕ ಸೃಷ್ಟಿ ಮಾಡಿಕೊಂಡುಬಿಟ್ಟ... ಪೆದ್ದ ಮುಂಡೇದು.

ಹೋಗ್ಲಿ ಬಿಡಮ್ಮ ಮೊದಲೇ ಕವಿ ಅಲ್ಲವೇ... ಜಗತ್ತನ್ನೇ ಉಲ್ಟಾ ಬರೀತಾರೆ...
ಓ ಈ ನನ್ನ ಮಗ ಟೈಟ್ ಆಗಿರಬೇಕು ಅದಕ್ಕೆ ಈಗ ಇವನಿಗೆ ಎಲ್ಲ ಉಲ್ಟಾ ಕಾಣ್ತಾ ಇದೆ
ಆದರೂ… ಆ ನನ್ನ ಮಗ ನನ್ನ ಮಾತಿಗೆ ಬೆಲೆ ಕೊಡಲಿಲ್ಲ, ನನ್ನ ಮಾತಿಗೆ ಬೆಲೆ ಕೊಡಲಿಲ್ಲ....
 ಎನ್ನುತ್ತಾ ಫುಲ್ ಟೈಟ್ ಆಗಿದ್ದ ಸತೀಶ ಚೇರ್ ಇಂದ ಕೆಳಗೆ ಬೀಳ್ತಾನೆ

ಅಷ್ಟರಲ್ಲಿ ನಿತೀಶ ಅಲ್ಲಿಂದ ಹೊರನಡೆದಿದ್ದ

               @@@@@@ 
  




PART – 6
ಕೋಪಗೊಂಡು ಅಲ್ಲಿಂದ ಹೊರನಡೆದ ನಿತೀಶ,
ಎಷ್ಟೇ ಕಷ್ಟ ಆದರೂ ಸರಿ ಪರವಾಗಿಲ್ಲ ಅವಳು ಎಲ್ಲಿದ್ದರೂ ಸರಿಯೆ ಹುಡುಕಲೇಬೇಕು, ನನ್ನ ಪ್ರೀತಿ ಏನು ಅಂತ ಅವನಿಗೆ ತೋರಿಸಲೇಬೇಕು ಎಂಬ ಛಲದಿಂದ
ಇಲ್ಲ ಅವನು ಹೇಳಿದ ಹಾಗೆ ಅವಳು ನನಗೆ ಮೋಸ ಮಾಡಿರಬಹುದೇ.. ನೋ ಚಾನ್ಸ್ ಇಲ್ಲ ನನ್ನ ಪ್ರೀತಿ ಮೇಲೆ ನನಗೆ ನಂಬಿಕೆ ಇದೆ.. ಆಕಸ್ಮಾತ್ ಆಗಿದ್ರೆ ಅದಕ್ಕೆ ಕಾರಣನಾದ್ರೂ ಕೇಳಬಾರದೆ... ಅನ್ನುವ ಹಠ.. ಅವನನ್ನು ನಂದಿನಿಯ ಹುಡುಕುವ ಪ್ರಯತ್ನಕ್ಕೆ ಹುರುಪು ತುಂಬಿತು.

ಆದರೆ ಅವಳ ನೆನಪು ಸದಾ ಕಾಡುತ್ತಿತ್ತು... ತುಂಬಾ ಬೇಸರ ತರಿಸಿತ್ತು.  ಅದೇ ಫೀಲಿಂಗ್ ನಲ್ಲಿ ಅಣ್ಣಾವ್ರ ಕಸ್ತೂರಿ ನಿವಾಸ ಚಿತ್ರದಲ್ಲಿ ಬರುವ ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ" ಹಾಡನ್ನು ಅದೇ ಟ್ಯೂನ್ ನಲ್ಲಿ ಇವನ ಲಿರಿಕ್ಸ್ ಸೇರಿಸಿಕೊಂಡು ಹಾಡಿಕೊಂಡು ಹೊರಟ.. ಅದೇ ಅಣ್ಣಾವ್ರ ಸ್ಟೈಲ್ ನಲ್ಲಿ….    

ಪ್ರೀತಿಯ ಮಾತು ಕೇಳದೆ ನಿನಗೆ ಎಲ್ಲಿ ಅಡಗಿಹೆ
ನಿನ್ನನು ಕಾಣದೆ ಈ ಮನ ಬೆಂದಿದೆ ದೇಹ ಸೊರಗಿದೆ
ಪ್ರೀತಿಯ ಮಾತು ಕೇಳದೆ ನಿನಗೆ ಎಲ್ಲಿ ಅಡಗಿಹೆ
ನಿನ್ನನು ಕಾಣದೆ ಈ ಮನ ಬೆಂದಿದೆ ದೇಹ ಸೊರಗಿದೆ
ಅಗಲಿಕೆಯನ್ನು ಸಹಿಸಲಾಗದೆ ಕುಗ್ಗಿ ಹೋಗಿದೆ ಪ್ರೀತಿ ಕುಗ್ಗಿ ಹೋಗಿದೆ
ಜೀವವು ನೀನೇ ಜೀವನ ನೀನೇ  ಕೇಳೆ ಗೆಳತಿಯೇ...
ನಿನ್ನ ಆ ನೋಟ ನನ್ನನು ಕಾಡಿ ಕಟ್ಟಿ ಹಾಕಿದೆ
ಜೀವವು ನೀನೇ ಜೀವನ ನೀನೇ  ಕೇಳೆ ಗೆಳತಿಯೇ...
ನಿನ್ನ ಆ ನೋಟ ನನ್ನನು ಕಾಡಿ ಕಟ್ಟಿ ಹಾಕಿದೆ
ಹುಡುಕುತ ನಿನ್ನ ಅಲೆಯುವ ನನಗೆ ಮುಕ್ತಿ ದೊರಕದೆ ಇಂದೇ ಮುಕ್ತಿ ದೊರಕದೆ

ಈ ಪ್ರೀತಿನೇ ಹೀಗೆ ಅಳಿಸಿ ಅಳಿಸಿ ಒಲಿಯುತ್ತೆ ಅದಕ್ಕೆ ಅದರ ಬೆಲೆ ಯಾವಾಗಲೂ ಜಾಸ್ತಿನೇ .. ಒಂದು ಒಳ್ಳೆದರ ಬಗ್ಗೆ ಹೇಳಬೇಕಾದರೆ ಎರಡು ಕೆಟ್ಟ ಉದಾ ಕೊಡ್ಬೇಕು ಇಲ್ಲದೆ ಇದ್ರೆ ಅದರ ಅರ್ಥ ಗೊತ್ತಾಗೋದಾದ್ರೂ ಹೇಗೆ.

ಕ್ಷಣ ಕ್ಷಣ ಕ್ಕೂ  ಅವಳ ಚಿಂತೆಯಲ್ಲೇ ಮುಳುಗಿದ್ದ ನಿತೀಶನಿಗೆ ಅವಳ ಬಗ್ಗೆ ಸ್ವಲ್ಪವೂ ಸುಳಿವೇ ಸಿಗುವುದಿಲ್ಲ ಸುಮಾರು ಜನರನ್ನ ವಿಚಾರಿಸಿದರೂ ಯಾವುದೇ ಪ್ರಯೋಚನ ವಾಗುವುದಿಲ್ಲ... ತುಂಬಾ ತಲೆ ಕೆಡಿಸಿಕೊಂಡು ಕುಂತಾಗ ಒಂದು ಐಡಿಯಾ ಟಕ್ಕನೇ ಹೊಳೆಯುತ್ತದೆ..
ಅದುವೇ ಇವನು ಲೇಖನಗಳನ್ನು ಬರೆದು ಕೊಡುತ್ತಿದ್ದ "ಪ್ರೇಮ ಪತ್ರ" ಮ್ಯಾಗಜ್ಜಿನ್ನಿಗೇ ಅವಳು ಚಂದದಾರಳಾಗಿದ್ದಳು.. ಅಂದರೆ ಅವಳ ಮನೆಯ ಅಡ್ರೆಸ್ಸ್ ಪ್ರೇಮ ಪತ್ರ ಮಾಸ ಪತ್ರಿಕೆ ಸಂಸ್ಥೆ ಯಲ್ಲಿ Add ಆಗಿರುತ್ತೆ.... Yes... ಊ ಅಂತೂ ಸಿಗ್ತು.. ಚೆ ಕಂಕುಳಲ್ಲೇ ಮಗು ಇಡ್ಕೊಂಡ್ ಊರೆಲ್ಲ ಹುಡುಕಿದ ಹಾಗಾಯ್ತು..ಅಂತೂ ಪ್ರೇಮ ಪತ್ರ ಮ್ಯಾಗ ಜಿನ್ ಮೂಲಕ ಇವರ ಪ್ರೇಮ ಮತ್ತೆ ಒಂದಾಗುವ ಕ್ಷಣ ಬಂತು.


ಅಲ್ಲಿ ಸಿಕ್ಕ ವಿಳಾಸವೇ    ಮನೆ ನಂಬರ್ ೫೮/೪,
                            ೨ನೇ ಅಡ್ಡ ರಸ್ತೆ,
                            ಗಣಪತಿ ದೇವಸ್ಥಾನದ ಹತ್ತಿರ,
                            ಶಾಂತಿನಗರ ಬೆಂಗಳೂರು..

ಇನ್ನ ಅದೆಷ್ಟು ಬೇಗ ಅವಳನ್ನ ನೋಡ್ತೀನೋ ಅಂತ ಬೈಕ್ ತೆಗೆದುಕೊಂಡು ನಂದಿನಿಯ ಮನೆಯ ಕಡೆಗೆ ಹೊರಟ ನಿತೀಶನಿಗೆ ನಂದಿನಿ ಸಿಕ್ಕೇ ಬಿಟ್ಟಳು.. ಏನೋ ಕಳೆದುಕೊಂಡ ಹಾಗೆ ಸಪ್ಪೆ ಮೊರೆ ಹಾಕಿಕೊಂಡು ಒಂದೇ ಕಡೆ ನೋಡುತ್ತಾ ಯಾವುದೋ ಚಿಂತೆಯಲ್ಲಿ ಪೈಪ್ ಹಿಡಿದು ನೀರು ಹಾಯಿಸುತ್ತಿದ್ದಳು ಅದೂ ಒಂದೇ ಗಿಡಕ್ಕೆ...

ಸ್ವಲ್ಪ ಹೊತ್ತು ಅವಳನ್ನೇ ನೋಡುತ್ತಾ ನಿಂತು ನಂತರ ಅವಳ ಮುಂದೆ ಬಂದ
ನಂದಿನಿಗೆ ಯಾವುದರ ಪರಿವೆ ಇಲ್ಲ

ಸಿಕ್ಕಿದ ಕಡಿಮೆ ದಿನದಲ್ಲಿ ಅತೀ ಹೆಚ್ಚು ಪ್ರೀತಿ ಕೊಟ್ಟು ನನ್ನ ಹುಚ್ಚನ ಮಾಡಿದಾಯ್ತು
ಇನ್ನೂಒಂದೇ ಗಿಡಕ್ಕೆ ಎಲ್ಲಾ ನೀರು ಹಾಕಿ ಆ ಗಿಡಾನಾ ಇವತ್ತೇ ಒಣಗಿಸಿ ಬಿಡೋ ಹಾಗೆ ಕಾಣ್ತಿದೆ.

ಅವಳು ಅವನನ್ನ ನೋಡಿದಾರಾದರೂ ಯಾವುದೇ ಖುಷಿ ಆಗಿರಲಿಲ್ಲ... ಮೇಲಾಗಿ ಶಾಕ್ ನಿಂದ ನೋಡುತ್ತಿದ್ದಳು

ನೀವ್ಯಾಕೆ ಇಲ್ಲಿಗೆ ಬಂದ್ರಿ!

ಈಗ ಶಾಕ್ ಆಗಿದ್ದು ಮಾತ್ರ ನಿತೀಶನಿಗೆ

ಯಾಕೆ ಬಂದೆ? ಓ ನಾನು ಬಂದದ್ದು ನಿನಗೆ ಬೇಡವಾಯ್ತೇನೋ
ಏನಾಗಿದೆ ನಿನಗೆ ಮೊಬೈಲ್ ಸ್ವಿಚ್ ಆಫ್, ಕಾಲೇಜ್ ಗೆ ಚಕ್ಕರ್.. ನನ್ನ ನೋಡಿದ್ರು ಇವನಾರೋ ಎಂಬಾ ತಿರಸ್ಕಾರದ ನೋಟ.
ಇಷ್ಟ್ ಬೇಗ ನಾನು ನಿನಗೆ ಬೇಜಾರ್ ಆಗಿ ಬಿಟ್ಟನಾ.

ಮಾತಾಡು ನಂದಿನಿ ಏನಾಯ್ತು ನಿನಗೆ..

ಉತ್ತರವಿಲ್ಲ... ಆವರಿಸಿತು ಮೌನ! ಅವಳೀಗ ಮೌನಿ!

ನಂದಿನಿ ನಾನು ನಿನ್ನ ಜೊತೇನೇ ಮಾತಾಡ್ತಾ ಇರೋದು ನೀನು ನೀರ್ ಹಾಕ್ತಾ ಇರೋ ಆ ಗಿಡ ಮರಗಳ ಜೊತೆಯಲ್ಲ!!

ನಮ್ಮ ಮನೇಲಿ ಈ ಪ್ರೀತಿ ಗೀತಿ ಎಲ್ಲ ಒಪ್ಪಲ್ಲ ನಿತೀಶ್

ಒಪ್ಪಿಸೋಣ... ಅವರ ಒಪ್ಪಂದ ಕೇಳಿನಾ ನಮ್ಮ ಪ್ರೀತಿ ಶುರುವಾಗಿದ್ದು

ಅಯ್ಯೋ ನಿಮಗೆ ಇದೆಲ್ಲ ಅರ್ಥ ಆಗಲ್ಲ

ಅರ್ಥ ಆಗೋ ಹಾಗೆ ಹೇಳು

ನನಗಾಗಲೇ ಮದ್ವೆ ಫಿಕ್ಸ್ ಆಗಿದೆ

ಓಹ್ ಓಹ್... ಮದುವೆ!  ನನ್ನ ಪ್ರೀತಿ ಮಾಡ್ತಿದ್ರು ಮದುವೆಗೆ ಒಪ್ಪಿದ್ಯಾ?
ಇಲ್ಲ ಅವನ ಜೊತೆ ಮದುವೆ ಫಿಕ್ಸ್ ಆದಮೇಲೆ ನನ್ನ ಪ್ರೀತಿ ಮಾಡಿದ್ಯಾ?

ನಿತೀಶ್ ಪ್ಲೀಸ್ ಮಾತು ಬೆಳೆಸಿ ಪ್ರಯೋಚನ ಇಲ್ಲ
ದಯವಿಟ್ಟು ನನ್ನ ಮರೆತುಬಿಡಿ!

ಮರೆತುಬಿಡು..WOW ಚೆನ್ನಾಗಿ ಮಾತಾಡುತೀಯ..ಇದೆಲ್ಲ ಯಾವಾಗಿಂದ ಕಲಿತೆ

ಅಯ್ಯೋ ನಿಮಗೆ ಹೇಗೆ ಹೇಳಲಿ ನಾನು..

ಅಷ್ಟು ಅದೇಗೆ ಹೇಳಿದೆಯೋ ಹಾಗೆ ಹೇಳು

ನೀವು ನನಗೆ ಇಷ್ಟ ಇಲ್ಲ ಅದಕ್ಕೆ

ಶಬ್ಬಾಸ್ ಅಂತೂ ನಿನ್ನ ಬುದ್ದಿ ತೋರಿಸಿಬಿಟ್ಟೆಯಲ್ಲಾ
ಛೇ ನೀನು ಆ ಸತೀಶ್ ಹೇಳೋ ತರ ಹುಡುಗಿ ಆಗಿಬಿಟ್ಟೆಯಲ್ಲ.... ಈ ಬಾಳಿಗೇಕೆ ಪ್ರೀತಿ ಅನ್ನೋ ನಾಟಕ ಮಾಡ್ತೀರಾ... ನಮ್ಮನ್ನೇನು ಕ್ರಿಕೆಟ್ ಬಾಲ್ ಅಂದುಕೊಂಡು ಬಿಟ್ಟಿದೀರಾ.. ಬೇಕಂದ ಕಡೆಯೆಲ್ಲ ಹೊಡೆದು ಆಟ ಆಡಕ್ಕೆ.
ನಂದಿನಿ ಅನ್ನುವ ಹೆಸರು ಕರ್ನಾಟಕ ದಲ್ಲಿ ಹಾಲಿನ ಮೂಲಕ ಜನಪ್ರಿಯವಾಯಿತು.. ಆ ಹಾಲಿನಂತೆ ನಿನ್ನ ಮನಸ್ಸು ಶುದ್ದ. ಅನ್ಕೊಂಡಿದ್ದೆ
ಆದರೆ
ಛೇ ಅಂತೂ ನೀನು ಆ ಕೆಟಗರಿಗೆ ಸೇರಿಬಿಟ್ಟೆ

ನಿತೀಶ್ ಹೀಗೆ ಮನಸ್ಸಿಗೆ ಬಂದಂತೆ ನಿಂದಿಸುತ್ತಾ ಇರಬೇಕಾದರೆ ,,,, ನಂದಿನಿ ಕಣ್ಣೀರ ಧಾರೆ ಹರಿಸುತ್ತಾ ಇರುತ್ತಾಳೆ
... ದುಃಖ ಗಂಟಲನ್ನು ಕಟ್ಟಿ ಬಿಟ್ಟಿರುತ್ತದೆ...

ಮಾತನಾಡದ ಸ್ಥಿತಿಯಲ್ಲಿ... ದಯವಿಟ್ಟು ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ ನಿತೀಶ್.. ನನಗೆ ಯಾರು ಬೇಡ.. ಒಂಟಿ ಯಾಗಿ ಇರೋಕೆ ಬಿಟ್ಟು ಬಿಡಿ.. ಎಂದು ಅಳುತ್ತಾ ಗೋಗರೆಯುತ್ತಾಳೆ!

ಅವಳ ಈ ವರ್ತನೆ ನೋಡಿ ನಿತೀಶನಿಗೂ ಬೇಸರವಾಗುತ್ತೆ.. ಇವಳು ನನ್ನಿಂದ ಏನೋ ಮುಚ್ಚಿ ಇಡುತ್ತಿದ್ದಾಳೆ ಎನ್ನುವ ಸಂದೇಹ ಬರುತ್ತೆ..ಏನಾಗಿದೆ ಇವಳಿಗೆ ಒಂದೊಂದು ಸಾರಿ ಒಂದೊಂದು ಮಾತನಾಡ್ತಾಳೆ! ಮದುವೆ ಫಿಕ್ಸ್ ಆಗಿದೆ ಅಂತಾಳೆ.. ಮನೆಯವರಿಗೆ ಪ್ರೀತಿ ಗೀತಿ ಇಷ್ಟ ಆಗಲ್ಲ ಅಂತಾಳೆ ನೀವ್ ಇಷ್ಟ ಇಲ್ಲ ಅಂತ ಖಡಕ್ ಆಗಿ ಹೇಳ್ತಾಳೆ.... ಏನೋ ಮಿಸ್ ಹೊಡೀತಾ ಇದೆಯಲ್ಲ

ಗೊತ್ತು ಮಾಡಿಕೊಳ್ಳಲೇ ಬೇಕು ಎಂಬ ಕುತೂಹಲ ಇವನಿಗೆ ಜಾಸ್ತಿ ಯಾಗುತ್ತೆ

ನಿಜ ಹೇಳು ನಂದಿನಿ.. ನೀನೇನೋ ಮುಚ್ಚಿಡ್ತಾ ಇದೀಯಾ... ನಿನ್ನ ನೋಡಿದ್ರೆ ಯಾವುದೋ ಸಂಕಟ ದಲ್ಲಿ ಸಿಕ್ಕಿ ಹಾಕಿಕೊಂಡ ಹಾಗಿದೆ...ಅದೇನು ಅಂತ ನನಗಾದರೂ ಹೇಳಬಾರದೆ..

ಇಲ್ಲಿ ನೋಡು ನನ್ನ ನೋಡು ಅದೇನು ಅಂತ ಹೇಳು...
..
ಹೇಳಲಿಲ್ಲ ಅಂದ್ರೆ ನನ್ನ ಮೇಲೆ ಆಣೆ

ಉತ್ತರವಿಲ್ಲ..

ಸರಿ ಬಿಡು ನನಗೇನಾದ್ರೆ ನಿನಗೇನು.. ನಾನ್ಯಾರು ನಿನಗೆ ... ಓಕೆ ನಿನ್ನ ಹಠ ನೀನು ಬಿಡಲ್ಲ, ಸರಿ ಹಾಗಾದ್ರೆ ನಾನು ಬರ್ತೀನಿ...
ನೀನು ಚೆನ್ನಾಗಿದ್ರೆ ಅದೇ ಖುಷಿ.

ಎಂದು ಹೇಳಿ ಹೊರಡಲು ಸಿದ್ದನಾದ

ಹಿಂದಿನಿಂದ ನಿತೀಶನ ಕಾಲನ್ನ ಹಿಡಿದು ಅಳುತ್ತಾ...
ನಿತೀಶ್ ನಿತೀಶ್ ಯಾಕೀಗೆ ಕಾಡ್ತಾ ಇದೀರಾ..
ನಾನು ನಿಮಗೆ ಸರಿ ಬರೋಲ್ಲ.... ನನ್ನ ಮರೆತು ಬಿಡಿ.!
                               
                        @@@@@                      



PART - 7

ನಾನು ನಾಯಿ ಮುಟ್ಟಿದ ಮಡಕೆ, ನೀವು ದೇವಸ್ಥಾನದಲ್ಲಿರೋ ಮೂರ್ತಿ...  ಅದೇಗೆ ನಾನು ನಿಮಗೆ ಸರಿಯಾಗಬಲ್ಲೆ

ಈ ಮಾತನ್ನು ಕೇಳಿದ ತಕ್ಷಣ ನಿತೀಶ್ ಬೆಚ್ಚಿ ಬೀಳುತ್ತಾನೆ.

ಏನು ಹೇಳ್ತಾ ಇದೀಯಾ ನಂದಿನಿ.. ನನಗೇನು ಅರ್ಥ ಆಗ್ತಿಲ.. ಸ್ವಲ್ಪ ಬಿಡಿಸಿ ಹೇಳಬಾರದ

ಏನಂತ ಬಿಡಿಸಿ ಹೇಳಲಿ ನಿತೀಶ್ .. ಹೇಗೆ ಹೇಳಲಿ
ನಿಮ್ಮ ನಂದಿನಿ ಹರಿದ ಬಾಳೆ ಎಲೆ ಎಂದೆ.. ಹೊಡೆದ ಬಳೆ ಚೂರು ಎಂದೇ.

ಅಯ್ಯೋ ಆ ದೇವರು ನನಗೆ ಏಕೆ ಈ ಶಿಕ್ಷೆ ಕೊಟ್ಟ... ನಾನು ಅಪವಿತ್ರಳು ನಿತೀಶ್.. ನಾನು ಅಪವಿತ್ರಳು...ಶೀಲಾ ಕಳೆದುಕೊಂಡ ಹೆಣ್ಣು, ಕಾಮುಕನ ತೀಟೆಗೆ ಬಲಿಯಾದ ದುರ್ದೈವಿ.

ನಿತೀಶನ ಎದೆಯಲ್ಲಿ ಸಿಡಿಲು ಬಡಿದಂತಾಯಿತು.. ಮಾತೆ ಬರದಂತಾಯಿತು..
ಆದರೂ ತನ್ನನ್ನು ತಾನೇ ಸಮಾದಾನ ಮಾಡಿಕೊಂಡ
ನಂದಿಯನ್ನು ಸಮಾಧಾನ ಪಡಿಸಿ ನಡೆದ ವಿಷಯವನ್ನೆಲ್ಲ ವಿವರವಾಗಿ ತಿಳಿಸುವಂತೆ ಹೇಳಿದ.

ನಂದಿನಿ ಈಗ ಫ್ಲ್ಯಾಶ್ ಬ್ಯಾಕ್ ಹೇಳಲು ಶುರು ಮಾಡಿದಳು

ನಮ್ಮದೊಂದು ಪುಟ್ಟ ಸಂಸಾರ ನಾನು ಅಮ್ಮ ಅಪ್ಪ ಮೂವರೇ ನಮ್ಮನೆಯಲ್ಲಿ.. ಅಪ್ಪ ಎಲೆಕ್ಟ್ರಿಕಲ್ ಕೆಲಸ ಮಾಡ್ತಾರೆ... ಅಮ್ಮ ಕೂಡ ಗಾರ್ಮೆಂಟ್ಸ್ ಗೆ ಹೋಗ್ತಾರೆ ಇಬ್ಬರೂ ದುಡಿಯೋದರಿಂದಾಗಿ ನಾವು ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡ್ವಿ.. ಅವರು ಹೊರಗಡೆ ಎಷ್ಟು ದುಡಿದು ಬಂದರು ಮನೆಯಲ್ಲಿ ಮಾತ್ರ ಖುಷಿ ಖುಷಿಯಾಗಿ
ಇರುತ್ತಿದ್ದೆವು.. ಯಾವುದಕ್ಕೂ ಕಡಿಮೆ ಇರಲಿಲ್ಲ...ಯಾವ ಶ್ರೀಮಂತರ ಮಕ್ಕಳಿಗೂ ಕಡಿಮೆ ಇಲ್ಲದಂತೆ ನನ್ನನ್ನು ಬೆಳೆಸಿದ್ದರು ಎಷ್ಟೇ ಕಷ್ಟ ಬಂದರು ಇಬ್ಬರೂ ನಗು ನಗುತ್ತಲೇ  ಪರಿಹಾರ ಮಾಡಿಕೊಳ್ಳುತ್ತಿದ್ದರು... ಯಾವ ತೊಂದರೇನೂ ಇರಲಿಲ್ಲ ಯಾರ ತಂಟೇನು ಇರಲಿಲ್ಲ..... ಇಂತ ಸಮಯದಲ್ಲಿ ಶನಿ ಬಂದಂಗೆ ಬಂದು ಬಿಟ್ಟ ಆ ಮಾದೇವ!

ಅವನು ನಮ್ಮ ರೀಲೇಶನ್ ಅಂತೇ .. ಸ್ವಲ್ಪ ದೂರ ಸಂಬಂಧದವನು .. ನನಗೆ ಸಂಬಂಧದಲ್ಲಿ ಅಣ್ಣಾ ಆಗಬೇಕಂತೆ.. ಬೆಂಗಳೂರಲ್ಲಿ ಇಂಜಿನಿಯರಿಂಗ್ ಗೆ ಸೇರಿಕೊಂಡಿದ್ದ.. ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದ .. ಭಾನುವಾರ ಆದ್ರೆ ನಮ್ಮ ಮನೆಗೆ ಬರುತ್ತಿದ್ದ....  ಮನೆಯವರ ಜೊತೆಯಲ್ಲ ಚೆನ್ನಾಗಿ ಹೊಂದುಕೊಂಡಿದ್ದ...
ಒಂದು ದಿನ ಏನಾಯ್ತೋ ಏನೋ ಹಾಸ್ಟೆಲ್ ಖಾಲಿ ಮಾಡಿ ಮನೆಗೆ ಬಂದು ಬಿಟ್ಟ... ನಮ್ಮಪ್ಪ ಕೇಳಿದ್ರೆ ಹಾಸ್ಟೆಲ್ ಸೆಟ್ ಆಗ್ತಾ ಇಲ್ಲ... ಅಲ್ಲೆಲ್ಲ ಕೆಟ್ಟ ಕೆಟ್ಟ ಹುಡುಗರೇ ಇದಾರೆ ನನಗೆ ಓದಲು ಡಿಸ್ಟರ್ಬ್ ಆಗುತ್ತೆ ಅಂತ ಸುಳ್ಳು ಹೇಳಿ ನಮ್ಮಪ್ಪನ ಒಪ್ಪಿಸಿಬಿಟ್ಟ...ನಮ್ಮ ಅಪ್ಪ ಕೂಡ ಅವನಿಗೂ ಬೆಂಗಳೂರಲ್ಲಿ ತಮ್ಮೋರು ಅಂತ ಯಾರು ಇಲ್ಲ ನಮ್ಮ ಮನೆಯಲ್ಲೇ ಉಳಿದುಕೊಂಡು ಓದಿಕೊಳ್ಳಲಿ ಬಿಡು...ಹೆಂಗೂ ಬುದ್ದಿವಂತ ಹುಡುಗ ,,, ನಮ್ಮ ಮಗಳಿಗೂ ಓದಿನಲ್ಲಿ ಸ್ವಲ್ಪ ಸಹಾಯ ಮಾಡ್ತಾನೆ ಅಂತ ಇರಿಸಿಕೊಂಡರು.
ಸ್ವಲ್ಪ ದಿನ ಚೆನ್ನಾಗೇ ಇದ್ದ.. ಆದರೆ ಬರ್ತಾ ಬರ್ತಾ ಅವನು ನನ್ನ ಕಡೆ ಕೆಟ್ಟ ದೃಷ್ಟಿಯಲ್ಲಿ ನೋಡೋಕೆ ಶುರು ಮಾಡಿದ... ಯಾವಾಗಲೂ ನನ್ನ ರೂಮ್ ನಲ್ಲೇ ಇರೋಕೆ ಟ್ರೈ ಮಾಡ್ತಿದ್ದ... ನನಗೆ ಲೈಂಕಿಗವಾಗಿ ಹಿಂಸೆ ಕೊಡ್ತಾ ಇದ್ದ. ನನ್ನ ಬುದ್ದಿ ನನ್ನ ಕೈಲಿ ಇದ್ದುದರಿಂದ ಹತೋಟಿಯಲ್ಲಿ ಇಟ್ಟುಕೊಂಡಿದ್ದೆ...ಅಪ್ಪ ಅಮ್ಮನಿಗೂ ವಿಷಯ ತಿಳಿಸಿಸಲಿಲ್ಲ..  ಹೇಗಾದ್ರೂ ಮಾಡಿ ನನ್ನ ಅನುಭವಿಸಬೇಕು ಅಂತ ಹೊಂಚು ಹಾಕ್ತಾ ಇದ್ದ...  ಅದು ಅವನಿಂದ ಸಾಧ್ಯವಾಗಿರಲಿಲ್ಲ ಆದರೆ ನಾವಿಬ್ಬರೂ ಲವ್ ಮಾಡೋ ವಿಷ್ಯ ಅವನಿಗೆ ಹೇಗೋ ಒಂದು ದಿನ ಗೊತ್ತಾಗಿ... ಅವತ್ತಿಂದ ನನಗೆ ಪೂರ್ತಿ ಟಾರ್ಚರ್ ಮಾಡೋಕೆ ಶುರು ಮಾಡಿದ..ನೀನು ನಾ ಹೇಳಿದ ಹಾಗೆ ಕೇಳಿಲ್ಲ ಅಂದ್ರೆ ನಿಮ್ಮ ಮನೇಲಿ ನಿನ್ನ ವಿಷ್ಯ ಎಲ್ಲ ಹೇಳಿ ಬಿಡ್ತೀನಿ ಅಂತ ಬ್ಲ್ಯಾಕ್ ಮೇಲ್ ಮಾಡ್ತಿದ್ದ .ಆದರೂ ನಾನು ಯಾವುದಕ್ಕೂ ಬಗ್ಗಿರಲಿಲ್ಲ... ಅವನಿಗೆ ನಾನೇ ಸರಿಯಾದ ಬುದ್ದಿ ಕಲಿಸಬೇಕು ಅಂತ ಹೊಂಚು ಹಾಕ್ತಾ ಇದ್ದೇ..ನೀನು ನನಗೆ ಪರಿಚಯ ಆಗೋಕೆ ಮುಂಚೆಯಿಂದಾನೆ ಇದೆಲ್ಲ ನಡೀತಾ ಇತ್ತು... ಈ ಹಿಂಸೆಯಿಂದ ಬೇಸತ್ತಿದ್ದ ನನಗೆ ನೀನು ಸಿಕ್ಕು ಎಲ್ಲ ಬೇಸರವನ್ನು ದೂರ ಮಾಡಿ ಬಿಟ್ಟಿದ್ದೆ.. 

ಆ ನಂತರ ನಿನ್ನ ಪ್ರೀತಿಯ ಮಾತುಗಳೇ ನನ್ನೆದೆಯಲ್ಲಿ ಗುನುಗುಟ್ಟುತ್ತಿದವು... ಇವನ ಬೆದರಿಕೆ ನನ್ನಿಂದ ಚದುರಿ ಹೋಗಿದ್ದವು...
ಖುಷಿಯಾಗಿದ್ದೆ... ಒಂದು ದಿನ ಈ ವಿಷಯನ್ನೆಲ್ಲಾ ನಿನಗೆ ಹೇಳಿ ಇದಕ್ಕೊಂದು ಫುಲ್ ಸ್ಟಾಪ್ ಇಡಬೇಕೆಂದು ನಿರ್ಧರಿಸಿದ್ದೆ..
ಆದರೆ ಆ ಒಂದು ದಿನ ನನ್ನ ಜೀವನದ ಆಸೆಗಳನ್ನೆಲ್ಲಾ ಚೂರು ಮಾಡಿ ಬಿಟ್ಟಿತು.
ಅಪ್ಪ ಅಮ್ಮ ಇಬ್ಬರೂ ಮನೆಯಲ್ಲಿ ಇರಲಿಲ್ಲ.. ನಾನು ತಲೆನೋವು ಎಂದು ಮನೆಗೆ ಬೇಗ ಬಂದು ಮಲಗಿ ಬಿಟ್ಟಿದ್ದ...ಅದೇ ಸಮಯನ ಉಪಯೋಗಿಸಿಕೊಂಡುಅವನು ನನ್ನ....... ಹ ಹ ಹ ನಿತೀಶ್...... !  ನಾನು ನಿನ್ನವಳಾಗುವ ಭಾಗ್ಯ ಪಡೆದುಕೊಂಡು ಬಂದಿಲ್ಲ .. ಹಾ..
ಇಷ್ಟಾದರೂ ಅದೇಗೆ ನಾ ನಿನ್ನ ಜೊತೆ ಸೇರಲಿ, ಅದೇಗೆ ನಿನ್ನ ನೋಡಿ ಮಾತಾಡಲಿ...ಅದೇಗೆ ನಾ ನಿನಗೆ ಮೋಸ ಮಾಡಲಿ... ಎಂದು ಗಟ್ಟಿಯಾಗಿ ಅಳುತ್ತಾಳೆ.

ಕಾಲೇಜಿಗೆ ಬಂದ್ರೆ ಇದೆಲ್ಲ ಗೊತ್ತಾಗಿ ಎಲ್ಲಿ ಗೊತ್ತಾಗುತ್ತೋ ಅಂತ ಕಾಲೇಜ್ ಬಿಟ್ಟೆ, ಸಿಮ್ ಮುರಿದು ಹಾಕಿದೆ.. ಹೇಗೂ ನಿನಗೆ ನಮ್ಮ ಮನೆ ಅಡ್ರೆಸ್ಸ್ ಗೊತ್ತಿಲ್ಲ ಅಂತ ನೆಮ್ಮದಿಯಾಗಿದ್ದೆ.. ಆದರೆ ಏನು ಪ್ರಯೋಚನ ನೀನು ಇಲ್ಲಿಗೂ ಹುಡುಕಿಕೊಂಡು ಬಂದೆ....

ಅಣ್ಣಾ ಅನ್ಕೊಂಡು ಬಂದು ಕಂತ್ರಿ ಬಣ್ಣ ತೋರಿಸಿಬಿಟ್ಟ... ಇಂಜಿನಿಯರಿಂಗ್ ಮಾಡ್ತೀನಿ ಅಂತ ಬಂದು ಎಂಜಲು ತಿನ್ನೋ ಕೆಲ್ಸ ಮಾಡ್ದ.. ಬಡ್ಡಿ ಮಗ! ಛೇ (ಎಂದು ಅವನನ್ನು ಮನಸ್ಸಲ್ಲೇ ಬೈದುಕೊಂಡ)

ಅದಕ್ಕೆ ನೀನೇಕೆ ಅಳ್ತೀಯ ನಂದಿನಿ..  ನೀನೇಗೆ ಅಪವಿತ್ರಳಾಗ್ತೀಯ... ಪಾಪ ಮಾಡಿದ್ದು ಅವನು.. ಅಪವಿತ್ರನಾದವನು ಅವನು. ಅವನ ಕೆಟ್ಟ ಯೋಚನೆಗಳು..

ಎಲ್ಲ ಸರಿ ಈಗ ಅವನ್ನೆಲ್ಲಿ

ಅದಾದ ಮೇಲೆ ನಮ್ಮ ತಂದೆ ಅವನಿಗೆ ಸರಿಯಾಗಿ ಹೊಡೆದು ಊರಿಗೆ ಓಡ್ಸಿದ್ರು.. ಪೊಲೀಸ್ ಕಂಪ್ಲೇಂಟ್ ಕೂಡ ಕೊಡಲಿಲ್ಲ.. ನಮ್ಮ ಮನೆ ಮರ್ಯಾದೇನೇ ಹೋಗೋದು ಅಂತ ಸುಮ್ಮನಾದರು..




ಹ್ಮ್ ಅವನನ್ನೇನೋ ಹೊಡೆದು ಓಡಿಸಿ ಬಿಟ್ರು...
ನಿನ್ನ?
ನಿನ್ನ ಬಗ್ಗೆ ಏನು ಯೋಚನೆ ಮಾಡಿದ್ದಾರೆ..
ನನ್ನ ಬಗ್ಗೆ ಯೋಚನೆ ಮಾಡೋಕೆ ಬೇರೆ ಏನಿದೆ  ನಿತೀಶ್. ನನಗೆ ಸಾವೇ ಗತಿ!
ಏಕೆ ನಾನಿಲ್ಲವ
ಏನು ಹೇಳ್ತಾ ಇದೀರಾ!
ನೀ ನನ್ನವಳು ಅಂತ ಯಾವಾಗಲೋ ಡಿಸೈಡ್ ಮಾಡಿ ಆಗಿದೆ.. ನನ್ನವಾಳಾಗೆ ಇರಬೇಕು ಅಂತ ಮತ್ತೆ ಹೇಳಬೇಕಾ..
ನಿನಗೆ ತಲೆ ಕೆಟ್ಟಿದೆ ನಿತೀಶ್
ಹೌದು ನನಗೆ ತಲೆನೂ ಕೆಟ್ಟಿದೆ ಹುಚ್ಚು ಹಿಡಿದಿದೆ..
ನೀವ್ಯಾಕೆ ಅದೊಂದು ಘಟನೆಯಿಂದ ಜೇವನವೇ ಮುಗಿದುಹೋದ ಹಾಗೆ ಆಡ್ತೀರಾ..
ಅದನ್ನು ದಾಟಿ ಜೀವನ ಕಟ್ಟಿಕೊಳ್ಳುವ ಯೋಚನೆ ಮಾಡಬಾರದೆ...
ನೀನೇನು ಬೇಕು ಅಂತ ಅವನ ಜೊತೆ ಹೋಗಿ ಮಲಗಿ ಬಂದಿಲ್ಲವಲ್ಲ... ಆಕಸ್ಮಿಕವಾಗಿ ನಡೆದಿದ್ದು...
ಇಲ್ಲಿ ಕೊರಗಬೇಕಾದವನು ಅವನು.. ನೀನಲ್ಲ
ಅವನು ಜೀವನ ಪೂರ್ತಿ ಅಲ್ಲ ಜನುಮ ಜನುಮ ಕೊರಗಲಿ.....
ಅವನನ್ನ ಸುಟ್ಟು ಹಾಕಿದ್ರು ನನ್ನ ಕೋಪ ನಿಲ್ಲಲ್ಲ.. ಹಾಗೆ ನಿನ್ನ ಎಂದಿಗೂ ನಾ ಕೈ ಬಿಡಲ್ಲ..
ನೀ ಎಂದೆದಿಗೂ ನನ್ನವಳು
ಹೇಗಿದ್ದರೂ ನನ್ನವಳು

ಅಯ್ಯೋ ನಿತೀಶ್. ಇದು ಪುಸ್ತಕ ಅಲ್ಲ ಜೀವನ.
ಮಾತನಾಡಿದಷ್ಟು ಸುಲಭವಲ್ಲ ಈ ಸಮಾಜದಲ್ಲಿ ಬಾಳುವುದು
ಜನ ನಿನ್ನನ್ನ ಕೆಟ್ಟದಾಗಿ ನೋಡ್ತಾರೆ.. ನನ್ನನ್ನೂ..
ನನ್ನಿದಾಗಿ ನೀನೇಕೆ ಆ ಅವಮಾನ ಹೀಡಾಗಬೇಕು

ನನ್ನ ಮರೆತುಬಿಡು ನಿತೀಶ್ ನಿನ್ನದೇ ಆದ ಹೊಸ ಜೀವನ ಪ್ರಾರಂಭಿಸು.. ನಿನಗಾಗಿ ಎಷ್ಟೋ ಹೃದಯಗಳು ಕಾಯ್ತಾ ಇವೆ.

ನಿನ್ನ ಹೊರತು ಜೀವನವಿಲ್ಲ ಎಂದ ನನಗೆ ಹೊಸ ಜೀವನ ಪ್ರಾರಂಭವಾಗುವುದಾದರೂ ಎಲ್ಲಿ ?
ಕೊನೆಯಾದರೂ ನಿನ್ನೊಂದಿಗೆ- ಕೊಹಿನೂರು ವಜ್ರವಾದರೂ ನಿನ್ನೊಂದಿಗೆ

ಹೊಸಕಿದ ಹೂವಿಂದ ಪರಿಮಳ ಸೂಸುವುದಿಲ್ಲ

ದುಂಬಿ ಹೂವಿಂದ ರಸ ಹೀರಿದ ಮಾತ್ರಕ್ಕೆ ಹೂ ತನ್ನ ಪೂರ್ತಿ ಸತ್ವ ಕಳೆದುಕೊಳ್ಳುವುದಿಲ್ಲ..

ನೀರು ಒಂದ್ಸಲ ಗಲೀಜಾದ್ರೆ ಸರಿ ಮಾಡಕ್ಕೆ ಆಗಲ್ಲ

ಆಕ್ವ ಗಾರ್ಡ್ ಬಂದಿದೆ.. ಕೆಂಗೇರಿ ನೀರನ್ನ ಬೇಕಾದ್ರೂ ಸ್ವಚ್ಛ ಮಾಡಬಹುದು

ನಾನು ಚೂರಾದ ಮಡಕೆ..

ಪರವಾಗಿಲ್ಲ ಫೆವಿಕ್ವಿಕ್ ಹಾಕಿ ಅಂಟಿಸಿ ಕೊಳ್ತೀನಿ


ನಿತೀಶ್…. ಇಲ್ಲೂ ಕಾಮೆಡಿನ...

ಇಲ್ಲ ಅಂದ್ರೆ ನೀನು ಒಲಿಯಬೇಕಲ್ಲ.

ನನ್ನಿಂದ ಆಗೋಲ್ಲ ನಿತೀಶ್... ಈ ಕೆಲಸ ನಿನ್ನಿಂದ ಆಗೋಲ್ಲ

ಆಗೋಲ್ಲ ಅಂತ ಸುಮ್ನೆ ಇದ್ದಿದ್ರೆ ತಿಮ್ಮಕ್ಕ ಇವತ್ತು ಸಾಲುಮರದ ತಿಮ್ಮಕ್ಕಳಾಗಿ ಕರ್ನಾಟಕದಲ್ಲಿ ಹೆಸರು ಮಾಡ್ತಿರಲಿಲ್ಲ
ಅದನ್ನೆಲ್ಲ ಬಿಟ್ಟು ಬಿಡು ನಂದಿನಿ... ನಾನು ಅಪವಿತ್ರಳು, ಕೆಟ್ಟು ಹೋದವಳು, ನನ್ನಿಂದ ಏನೋ ಆಗಲ್ಲ, ನನ್ನ ಲೈಫ್ ಇಷ್ಟೇ.
ಈಗೆ ನಿನ್ನನ್ನ ನೀನೇ ಏಕೆ ಡಿ-ಮೋಟೀವೇಟ್ ಮಾಡಿಕೊಳ್ತೀಯಾ...

ಕೇವಲ 21 ದಿನದ ಪ್ರೀತಿಲಿ 21 ವರ್ಷಕ್ಕೆ ಆಗುವಷ್ಟು ಪ್ರೀತಿ ಸಂಪಾದಿಸಿದಿವಲ್ಲ.. ಇಷ್ಟೇನಾ ನಮ್ಮ ಪ್ರೀತಿ ಬೆಲೆ...

ಹೆಣ್ಣು ಬರಿ ಹೊಲೆ ಮುಂದೆ ಮಾತ್ರ ಬೆಂಕಿ ಹಚ್ಚುವಳು ಆಗಬಾರದು... ಎಲ್ಲೆಲ್ಲ್ಲೂ ಹಚ್ಚಬೇಕು ದುಷ್ಟತನ ಸುಟ್ಟು ಬೂದಿಯಾಗುವ ಹಾಗೆ.. ಸಮಾಜದ ಕೆಟ್ಟ ಹುಳಗಳು ನಾಶವಾಗುವ ಹಾಗೆ

ನಿನಗೆ ಈ ಸ್ಥಿತಿ  ತಂದವನಿಗೆ ಏನು ಶಿಕ್ಷೆ ಕೊಡಬೇಕು ಅಂತ ನೀನೇ ತೀರ್ಮಾನ ತೆಗೆದುಕೋ ನಿನ್ನ ಜೊತೆ ನಾನಿರ್ತೀನಿ..

ನೀನು ಏನು ಅಂತ ನಾನು ಅರ್ಥಮಾಡಿಕೊಂಡರೆ ಸಾಕು ಇಡೀ ಸಮಾಜಕ್ಕೆ ತೋರಿಸುವ ಪ್ರಯತ್ನ ಬೇಡ..
ನನ್ನ ನೀನು ನಿನ್ನ ನಾನು ಅರ್ಥ ಮಾಡಿಕೊಂಡು ಬಾಳಿದ್ರೆ ಸಮಾಜ ನಮ್ಮ ಸರಿಯಾಗೇ ನೋಡುತ್ತೆ..
ಯಾರೋ ನೂರರಲ್ಲಿ ನಾಲ್ಕು ಜನ ನಾಲ್ಕು ತರ ಮಾತಾಡಬಹುದು.. ಅದರಿಂದ ನಮ್ಮ ಜೀವನ ಸಾಗಲ್ಲ, ನಾನು ನಾವಗಿದ್ರೆ ಅವರಿಗೂ ಅರಿವಾಗುತ್ತೆ..

ಬೆಕ್ಕು ಕದ್ದು ಹಾಲು ಕುಡಿದು ಬಿಡ್ತು ಅಂತ ಯಾರಾದ್ರೂ ಹಾಲು ತರೋದನ್ನೇ ನಿಲ್ಲಿಸಿಬಿಡ್ತಾರ.. ಇಲ್ಲ ಕುಡಿಯೋದೆ ಬಿಟ್ಟು ಬಿಡ್ತಾರಾ
ಆ ಬೆಕ್ಕಿಂದ ಹಾಲನ್ನ ಹೇಗೆ ರಕ್ಷಣೆ ಮಾಡ್ಕೊಬೇಕು ಅಂತ ಉಪಾಯ ಮಾಡ್ತಾರೆ.. ಇಲ್ಲ ಆ ಬೆಕ್ಕನ್ನೇ ಬಡಿದಾಕೋ ಸ್ಕೆಚ್ ಹಾಕ್ತಾರೆ.

ಹಾಗೆ ಅವನೇನೋ ಮಾಡ್ಬಿಟ್ಟ ಅಂತ ನೀನು ಸತ್ತು ಹೋಗ್ಬಿಟ್ರೆ ಅವನು ಸರಿ ಹೋಗಿ ಬಿಡ್ತಾನ..
ಬದುಕಬೇಕು ಬದುಕಿ ಬುದ್ದಿ ಕಲಿಸಬೇಕು.

ಈ ಮಾತುಗಳೆನ್ನೆಲ್ಲ ಕೇಳಿ ನಂದಿನಿ ಸ್ವಲ್ಪ ಧೈರ್ಯ ಬರುತ್ತೆ... ನಾನ್ಯಾಕೆ ಮತ್ತೆ ಮೊದಲಿನ ತರ ಇರಬಾರದು ಅದು ಇಂತ ಒಬ್ಬ ಸಂಗಾತಿ ಸಿಗುವಾಗ ಎಂದು ಮನಸ್ಸಲ್ಲೇ ನಿರ್ಧರಿಸುತ್ತಾಳೆ

ನಿತೀಶ್ ನಿತೀಶ್ ಅನ್ನುತ್ತಾ ಅವನನ್ನ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾಳೆ
ನಂದಿನಿಯನ್ನು ತನ್ನ ಭುಜಗಳಿಂದ ಸೆರೆ ಹಿಡಿದು ನಿತೀಶ್

ಅಂತೂ ಈ ಬಡಪಾಯಿ ಮೇಲೆ ಕರುಣೆ ಬಂತಲ್ಲ...

ನೀವು ಬಡಪಾಯಿ ಅಲ್ಲ ನನ್ನ ದೇವರು

ಹ... ಈ ದೇವರು ಚೆನ್ನಾಗಿ ಕಾಣಬೇಕಂದ್ರೇ ಈ ಹೂ ಮುಖ್ಯ ಎಂದು ಅವಳತ್ತ ಕೈ ತೋರಿಸುತ್ತಾನೆ

ಅವಳು ಮುಗುಳುನಗುತ್ತಾಳೆ..

ಹೂವಿಲ್ಲದ ದೇವರು ನೀನಿಲ್ಲದ ನಿತೀಶ್ ಎರಡು ಒಂದೇ
ಹೌದಾ
ಮತ್ತೆ ಸುಮ್ನೆನಾ.... ಎಷ್ಟ್ ಕಷ್ಟ ಪಟ್ಟು ಮತ್ತೆ ನಿನ್ನ ಹುಡುಕಿದೀನಿ
ನನ್ನ ಫ್ರೆಂಡ್ ನೀನು ಮೋಸ ಮಾಡಿ ಬಿಟ್ಟಿದೀಯ. ನೀನು ಇನ್ನ ನನಗೆ ಸಿಗಲ್ಲ ಹಾಗೆ ಈಗೆ ಏನೇನೋ ಹೇಳಿದ್ದ


ಅವನಿಗೆ ಗೊತ್ತಿಲ್ಲ 90% ಮೋಸ ಮಾಡೋದು ಹುಡುಗರೇ ಅಂತ.
ಹುಡುಗೀರು ಮನೆಯವರ ಒಪ್ಪಂದಕ್ಕೋ , ಯಾವುದೋ ಸಂಧರ್ಭಕ್ಕೋ ಕಟ್ಟು ಬಿದ್ದು ಪ್ರೀತಿನಾ ಡಿಸ್ ಕಂಟಿನ್ಯೂ ಮಾಡ್ತಾರೆ.. ಶಿಕ್ಷೆ ಕೂಡ ಒಬ್ಬರೇ ಅನುಭವಿಸುತ್ತಾರೆ..  ಎಲ್ಲೋ ಕೆಲ ಹುಡುಗೀರು ಮಾತ್ರ ಷೋಕಿಗಾಗಿ ಲವ್ ಮಾಡೋರು ಲೈಫ್ Careless ಮಾಡೋರು.. ಆದರೆ ಎಲ್ಲ ಹುಡುಗಿಯರು ಆಗಲ್ಲ

ನಮ್ಮ ಹುಡುಗರಿಗೆ ಅದು ಅರ್ಥ ಆಗಲ್ಲ... ಕೈ ಕೊಟ್ಟು ಬಿಟ್ಟಾಳಪ್ಪೋ ಅಂತ ಗಡ್ಡ ಬಿಟ್ಕೊಂಡ್ ಸಾಯ್ತವೆ.
ಇವರು ಅವರ ಜೊತೆ ಚೆನ್ನಾಗಿದ್ರೆ ಅಲ್ವಾ ಎಲ್ಲ ನೆಟ್ಟಗಿರೋದು.. ಅರ್ಥ ಮಾಡಿಕೊಂಡವರು ಮಿಂಚ್ತಾರೆ.. ಅರಿವಾಗದವರು ಅಳ್ತಾರೆ
ಹೀಗೆ ಪ್ರೀತಿ ಒಬ್ಬರಿಗೆ ಒಂದೊಂದು ತರ ನೋವು ಕೊಡುತ್ತೆ... ಖುಷಿನೂ ಕೊಡ ಅಷ್ಟೇ ಕೊಡುತ್ತೆ

ಕಾರಿನಲ್ಲಿ ಓಡಾಡಿದ ಮಾತ್ರಕ್ಕೆ ಕರೋಡ್ ಪತಿ ಅಲ್ಲ
ಕಾರಿಡಾರ್ ನಲ್ಲಿ ಮಲಗಿದ ಮಾತ್ರಕ್ಕೆ ಬಿಕ್ಷುಕ ಅಲ್ಲ ಅದೆಲ್ಲ ಸಮಯ ಆಡಿಸುವ ಬೊಂಬೆ ಆಟ
ಕಾಲದ ಆಟಕ್ಕೆ ಅಲುಗಾಡದವರಿಲ್ಲ
ನಡಿ ನಡಿ
ಎಲ್ಲ ಮರೆತು ಬೆಲ್ಲ ಸವಿಯುವ.. ಜೊತೆಯಾಗಿ ನೂರ್ಕಾಲ ಬಾಳುವ!

ಮತ್ತೆ ಹೀಗೆ ಒಂದಾದ ನಿತೀಶ್ ಅಂಡ್ ನಂದಿನಿ ಮದುವೆಯಾಗಿ ಆನಂದದಿಂದ ಬಾಳ್ತ ಇದಾರೆ..

ಇವರ ಪ್ರೀತಿ ನೋಡಿ.. ಬೆಚ್ಚಿ ಮೆಚ್ಚಿದ ಸತೀಶ ರಾಕ್ಷಸತನವನ್ನಲ್ಲ ತನ್ನ ಪೋಲಿ ತನವನ್ನು ಬಿಟ್ಟು ಬಿಟ್ಟಿದಾನೆ
ನಂದಿನಿ ಮೇಲೆ ಕೃತ್ಯ ಎಸಗಿದ ಮಾದೇವ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಟ್ಟಿದ್ದಾನೆ..
ನಂದಿನಿ ಮತ್ತು ನಿತೀಶ್ ಸುಖವಾಗಿ ಬಾಳುತ್ತಿದ್ದಾರೆ..ಕಹಿ ಘಟನೆಗಳ ಸುಟ್ಟು ಹಾಕಿ ಸಿಹಿ ಘಟನೆಗಳ ಮೆಲುಕು ಹಾಕಿ... ಸಮಾಜಕ್ಕೆ ಮಾದರಿಯಾಗುವಂತೆ ಬದುಕುತ್ತಿದ್ದಾರೆ...
ಇನ್ನು ಸಂಬಂಧದಲ್ಲಿ ಅಣ್ಣನಾದರೂ ಒಂದು ಹೆಣ್ಣನು  ಕೆಟ್ಟ ದೃಷ್ಟಿಯಿಂದ ನೋಡುವ ಮಾದೇವನಂತವರು
ಒಬ್ಬ ಒಳ್ಳೆ ಗೆಳೆಯನನ್ನು ದಾರಿ ತಪ್ಪಿಸಲು ಪ್ರಯತ್ನಿಸುವ ಸತೀಶನಂತವರು
ಇನ್ನೂ ಇದಾರೆ ಎಲ್ಲೆಲ್ಲೂ ಇದಾರೆ.. ಶಿಕ್ಷೆ ಅವರಿಗೆಲ್ಲರಿಗೂ ಆಗಬೇಕಿದೆ. ತಪ್ಪಿನ ಅರಿವಾಗಬೇಕಿದೆ
ನಮ್ಮ ನಿತೀಶನ ತರ ಇರುವವರು ಕಡಿಮೆ,  ಇದ್ದರೆ ಅವರಿಗೊಂದು ನನ್ನ ಸಲಾಮು!

ಜೀವನ ಜೋಕಾಲಿ ಸರಿ ಆ ಜೋಕಾಲೀನ ತಳ್ಳಕ್ಕೆ ಒಬ್ಬರು ಜೊತೆಗಿದ್ದರೆ ಚೆನ್ನಾಗಿರುತ್ತೆ ಅಲ್ವಾ.... ನೀವು ಒಬ್ಬ ಸಂಗಾತಿನ ಹುಡುಕಿಕೊಳ್ಳಿ...
ಆನಂದದಿಂದ ತೇಲಾಡಿ
                                 
                                                          ಶು ಭ ವಾ ಗ ಲಿ

ಈ ಕಥೆಗೆ ಹಿನ್ನುಡಿ ಇಲ್ಲ ಮುನ್ನುಡಿ ಇಲ್ಲ... ಥ್ಯಾಂಕ್ಸ್ ಹೇಳಬೇಕಂದ್ರೆ ಅದು ರವಿಕುಮಾರ ಯಡಗೊಂಡನಹಳ್ಳಿ ಯವರಿಗೆ

ಇದನ್ನು ಓದಿ ತಿದ್ದಿ, ಕ್ಲೈಮ್ಯಾಕ್ಸ್ ಹೀಗಿದ್ರೆ ಚೆನ್ನಾಗಿರುತ್ತೆ ಅಂತ ಸಲಹೆ ಕೊಟ್ಟು ಈ ಕಥೆಯನ್ನು ಶ್ರೀಮಂತಗೊಳಿಸಿದಕ್ಕೆ. ಧನ್ಯವಾದ ಸರ್

ಕಥೆ ಇಷ್ಟವಾಗಿದ್ರೆ ಕಾಮೆಂಟ್ ಮಾಡೋದನ್ನ ಮರೀಬೇಡಿ! 

ಈ ರೀತಿಯ ಇನ್ನಷ್ಟು ಕಥೆಗಳನ್ನು ಸವಿಯಲು - http://olavinakathegalu.blogspot.in/
ಪೋಲಿ ಪದ್ಯಗಳಿಗಾಗಿ - http://kavyasparsha.blogspot.in/
ಇನ್ನಷ್ಟು ಕವಿತೆಗಳಿಗಾಗಿhttp://makalisoma.blogspot.in/

ಗಳಿಗೆ ಭೇಟಿ ಕೊಡಿ..   ಕನ್ನಡವನ್ನು ಬೆಳೆಸಿ ಈ ಕನ್ನಡಿಗನನ್ನು ಹರಸಿ


ಧನ್ಯವಾದ
ನಿಮ್ಮ ಅಭಿಮಾನಿ “  ಸೋಮೇಶ “ 
ಮಾಕಳಿ
ಚನ್ನಪಟ್ಟಣ


                                                      *********************************