Wednesday 18 December 2013

ನೀನಿರದ ಬಾಳೇಕೆ..? Part-2



ಅಷ್ಟರೊಳಗೆ ಒಳಗೆ ಒಬ್ಬ ವ್ಯಕ್ತಿ ಬಂದರು

ಯಾಕೆ ಎಲ್ಲಾ  ಹಿಂಗೆ ನಿಂತು ಬಿಟ್ಟಿದೀರಿ  ,,,

ಗೌಡ್ರೇ  ಏನಾಯ್ತು ....

ಬನ್ನಿ  ಬನ್ನಿ ಸ್ಮಶಾನಕ್ಕೆ  ಹೊರಡೋ ಟೈಮ್ ಆಯಿತು  ಎಂದು ಎಚ್ಚರಿಸುತ್ತಾರೆ

ಎಲ್ಲರ ನಡೆ ಸ್ಮಶಾನದತ್ತ ಹೊರಡುತ್ತದೆ

ಸ್ವಾತಿಯನ್ನು ಅವರ ತಂದೆ ಬಿಗಿಯಾಗಿ ಹಿಡಿದು ಕರೆದುಕೊಂಡು ಹೋಗುತ್ತಿರುತ್ತಾರೆ

ಎಲ್ಲಿ ಅನಾಹುತ ಮಾಡಿಕೊಂಡು ಬಿಡುತ್ತಾಳೋ ಎಂದು ಅತ್ತೆ, ಮಾವ  ಅಮ್ಮ,. ಎಲ್ಲರು ಅವಳನ್ನೇ ಸುತ್ತು ವರಿದು ಸ್ಮಶಾನದತ್ತ ನಡೆಯುತ್ತಿರುತ್ತಾರೆ ...

ಸ್ಮಶಾನದಲ್ಲಿ ಶವವನ್ನು ಸುಡುವ ಕ್ರಿಯೆ ನದೆದಿರುತ್ತದೆ..

ಎಲ್ಲರು ಮೌನವಾಗಿ ನಿಂತು ಸತ್ತವನ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತಿರುತ್ತಾರೆ
ಶವವನ್ನು ಚಿತೆಯ ಮೇಲೆ ಮಲಗಿಸಿ ದೇಹವನ್ನೆಲ್ಲಾ ಪೂರ್ತಿಯಾಗಿ ಕಟ್ಟಿಗೆಗಳಿಂದ  ಮುಚ್ಚುತ್ತಾರೆ

ಗೌಡರು  ಅಗ್ನಿ ಸ್ಪರ್ಶ ಮಾಡಲು ಕೊಲ್ಲಿ ಯನ್ನು ಕೈಗೆ ಎತ್ತಿಕೊಳ್ಳುತ್ತಿದ್ದಂತೆ  ಎಲ್ಲರೂ ಜೋರಾಗಿ ಹೊ ಎಂದು ಕಿರುಚಿಕೊಳ್ಳಲು ಶುರು ಮಾಡುತ್ತಾರೆ .... ಗೌಡರು ಭಾವುಕರಾಗಿ ಕಣ್ಣೀರು ಸುರಿಸುತ್ತಾ ನೆಲಕ್ಕೆ ಮಂಡಿಯೂರಿ ಕುಳಿತು ಬಿಡುತ್ತಾರೆ ..



ತಿಮ್ಮಣ್ಣ  ಹತ್ತಿರ ಬಂದು
ಗೌಡರನ್ನು ಸಮಾಧಾನ ಮಾಡಿ 
ಚಿತೆಗೆ ಅಗ್ನಿ ಸ್ಪರ್ಶ ಮಾಡಿಸುತ್ತಾರೆ



ಮಗನಿಗೆ ಕೊಲ್ಲಿ ಇಡುವಂತ ಸ್ಥಿತಿ ಬಂತಲ್ಲಪ್ಪ ಎಂದು ರುದ್ರೆ ಗೌಡರು ಕಣೀರು ಹರಿಸುತ್ತಾನಿಂತಿರಬೇಕಾರೆ
ಇತ್ತ ಸ್ವಾತಿ ಎಲ್ಲರನ್ನು ತಳ್ಳಿ ಚಿತೆಗೆ ಹಾರಲು ಓಡೋಡಿ ಬರುತ್ತಾಳೆ

ಅವಳ ಸ್ತಿತಿ ಯನ್ನು ಕಂಡಿದ್ದ ಅವಳ ಅತ್ತೆ ..

ಅಯ್ಯಯ್ಯೋ ಯಾರಾದ್ರೂ ಹಿಡಿದು ಕೊಳ್ಳೀರಪ್ಪ ಬೆಂಕಿಗೆ ಹಾರಕ್ಕೆ ಹೋಗ್ತಾ ಇದಾಳೆ
ಎಂದು  ಕಿರುಚುತ್ತಾ ಬಾಯಿ ಬಡಿದು ಕೊಳ್ಳುತ್ತಿರುತ್ತಾರೆ

ರುದ್ರೆ ಗೌಡರು ಗಾಬರಿಯಂದ ಎದ್ದು ಸ್ವಾತಿಯನ್ನು ತಡೆಯುತ್ತಾರೆ 
ಜನರೆಲ್ಲರೂ ಓಡಿ  ಬಂದು ಸ್ವಾತಿಯನ್ನು ಸುತ್ತುವರೆದು  ನಿಲ್ಲುತ್ತಾರೆ

ಅವಳನ್ನು ಅಲುಗಾಡಲು ಆಗದಂತೆ ಹಿಡಿದು ಕೊಂಡಿರುತ್ತಾರೆ.. ಆದರೂ


ಇವಳು
ಬಿಡಿ ನಾನು ಸಾಯಬೇಕು ಬಿಡಿ ಅಯ್ಯೋ ಬಿಡಿ ಅವರು ಹೋಗ್ತಾ ಇದಾರೆ ಬಿಡಿ ನಾನು ಹೋಗಬೇಕು ಬಿಡಿ ಎಂದು ಕಿರುಚಿಕೊಳ್ಳುತ್ತಾ ಅಳತೊಡಗುತ್ತಾಳೆ 


ನೆರೆದಿದ್ದ ಜನರೆಲ್ಲಾ ಆಶ್ಚರ್ಯ ದಿಂದ ಸ್ವಾತಿಯನ್ನು ನೋಡುತ್ತಿರುತ್ತಾರೆ ....  ಎಲ್ಲರ ಮನದಲ್ಲೂ ತರ ತರದ  ಪ್ರಶ್ನೆ ಗಳು! ಏನಿದು ವಿಚಿತ್ರ ಎಂದು ಬೆರಗಾಗಿ ನಿಂತಿರುತ್ತಾರೆ.


ಜನರ ಗುಂಪಿನಲ್ಲಿ ನಿಂತಿದ್ದ ರಂಗ .....
ಮಗ ಈ ಕಲಿಯುಗದಲ್ಲೂ ಚಿತೆಗೆ ಹಾರುವ ಪದ್ಧತಿ ಇದೆಯಾ
ಇದೇನೋ ಯಮ್ಮ ಬಿಡಿ ಚಿತೆಗೆ ಹಾರಬೇಕು


ಅದೇ ಅರ್ಥ ಆಗ್ತಿಲ್ಲ ಮಗ... ಆದರೆ
ಅವರ ಪ್ರೀತಿ ಹಾಗೆ ಇತ್ತು ಮಗ .... ದೇವರು ನಾವೆಲ್ಲಾ ಹೊಟ್ಟೆ ಕಿಚ್ಚು ಪಡೋ ತರ  ಅವರಿಗೆ ಪ್ರೀತಿ ಕೊಟ್ಟ
ಆದ್ರೆ ಇವತ್ತು ಅದೇ ದೇವ್ರು ನಾವೆಲ್ಲೇ ದುಖ ಪಡೋ ತರ  ಕಿತ್ ಕೊಂಡ ಬಿಟ್ಟ


ಹೌದ ಅದೇನು ಅಂತ ವಿವರವಾಗಿ ಹೇಳು ಮಗ

ಕೇಳೋ ತಾಳ್ಮೆ ನಿನಗೆ ಇದ್ರೆ ಹೇಳೋ ಶಕ್ತಿ ನನದು….


ಪ್ರೀತಿ ಎಲ್ಲಿ ಯಾವಾಗ ಯಾರ ಜೊತೆ ಗಂಟು ಹಾಕಿಕೊಳ್ಳುತ್ತೆ ಅಂತ ಹೇಳೋಕೆ ಆಗಲ್ಲ !
ಹರೆಯದ ವಯಸ್ಸಿನಲ್ಲಿ..
ಹರಿಯವ ಹಾವಿನ ಹಾಗೆ ಚಲಿಸುವ ಮನಸ್ಸು
ಮುಸುಕಿನ ಮತ್ತಿನಲ್ಲಿ ಮೆರೆಯುವ ಹೃದಯ
ಮೋಡಕ್ಕೆ ಮೋಡ ಡಿಕ್ಕಿ ಹೊಡೆದು ಸುರಿಯ ಮಳೆಯ ರಭಸಂತೆ ಪ್ರೀತಿ
ಕೆಲವರಿಗೆ ಕಾವೇರಿ - ಕೆಲವರಿ ರುದ್ರ "ನಾರಿ"

ಕೆಲವರು ಆನಂದದಿಂದ ತೇಲಾಡುತ್ತಾರೆ . ಕೆಲವರು  ಕಾಪಾಡಿಕೊಳ್ಳಲಾರದೆ  ಕೊಚ್ಚಿ ಹೋಗುತ್ತಾರೆ !

ಇಬ್ಬರೂ ಮೆಚ್ಚಿ ಮೂರನೆಯವರು ಮೆಚ್ಚಿದರೆ ... ಪ್ರೀತಿಗೆ ಪುರಸ್ಕಾರ
ಇಲ್ಲದಿದ್ದರೆ ಬಹಿಸ್ಕಾರ!

ಇಂತ ಪ್ರೀತಿಯನ್ನ ಗೆದ್ದು ಗೆಲುವಿನ ಶಿಖರಕ್ಕೇರಿದವ ಗುಂಪಿನಲ್ಲಿ   ನಮ್ಮ ಕಾಂತೇಶ್   ಕೂಡ ಒಬ್ಬ

ಪ್ರೀತಿ ಹುಟ್ಟಿದ್ದು ರೈಲಿನಲ್ಲಿ ... ತಳ್ಳಾಟದ  ನೋವಿನ ಜೊತೆಗೆ .. 

ಗಟ್ಟಿಯಾಗಿ ಅಪ್ಪಿಕೊಂಡದ್ದು... ಕಾಂತೇಶ ಪ್ರೀತಿಗಾಗಿ ಅಲೆದಲೆದು ಸುಸ್ತಾದ ಮೇಲೆ,..



....



ಇಬ್ಬರು ಪ್ರೀತಿಯಲ್ಲಿ ಗಾಡವಾಗಿ ಬೆರೆತು ಹೋಗಿದ್ರು.. ಮನೆಯವರನ್ನೆಲ್ಲಾ ಮೆಚ್ಚಿಸಿ ಮದುವೆನೂ ಆದ್ರೂ..

ಯಾವುದೇ ತೊಂದರೆ ಇಲ್ಲದ ಹಾಗೆ ಕಾಂತೇಶ ಸ್ವಾತಿಯನ್ನ ತನ್ನವಳನ್ನಾಗಿ ಮಾಡಿಕೊಂಡ್ ಬಿಟ್ಟ



ಇವರ ಸಂಸಾರ ಕೂಡ ಚೆನ್ನಾಗಿ ಸಾಗ್ತಾ ಇತ್ತು, ಒಬ್ಬರೊನ್ನಬಾರು ಅರಿತು ಹೇಗೆ ಬಾಳಬೇಕೆಂದು ಇಡೀ ಊರಿಗೆ ತೋರಿಸಿಕೊಟ್ಟಿದ್ದರು..

ಒಂದು ದಿನ ಸ್ವಾತಿ ಕಾಂತೇಶನ ಜೊತೆ ಮಾತಾಡ್ತಾ ಮಾತಾಡ್ತಾ ಹೀಗೆ ತಮಾಷೆ ಮಾಡಿದ್ರಂತೆ



ಕಾಂತೇಶ್ ನನ್ನ ಜೀವನದ ದೊಡ್ಡ ಆಸೆ ಏನು ಗೊತ್ತಾ?

ಏನು

ಸುಮಂಗಲಿಯಾಗಿ ಸಾಯೋದು...

ಅದು ಸಾದ್ಯ ಇಲ್ಲ ಬಿಡು

ಏಕೆ

ನಾನಿರುವ ವರೆಗೂ ನಿನ್ನ ಸಾಯೋಕ್ ಬಿಡ್ತೀನಾ!

ಹ್ಮ್ ನಾನು ಅಷ್ಟೇ ನೀನೇನಾದ್ರೂ ನನ್ನ ಬಿಟ್ಟೋದ್ರೆ ನಿನ್ನ ಹಿಂದೇನೆ ಬಂದು ಬಿಡ್ತೀನಿ!

ಅದು ಎಲ್ಲಿಗಾದ್ರೂ ಸರಿ..




ಎಲ್ಲಿಗಾದ್ರೂ.. ಭೂಮಿನೇ ಬಿಟ್ಟು ಹೋಗೋ ಪರಿಸ್ಥಿತಿ ಬಂದ್ರು.. ಬರ್ತೀಯಾ

ಒಮ್ಮೆ ಶಾಕ್ ಆದವಳೇ



ಕಾಂತೇಶ್ ... ನೀನೇ ಇಲ್ಲದ ಭೂಮಿಯಲ್ಲಿ ನಾನಿದ್ದು ಏನ್ ಮಾಡಬೇಕು... :)

ದೇವರ ಮೇಲೆ ಆಣೆ ಇಟ್ಟು ಹೇಳ್ತೀನಿ ಖಂಡಿತ ನೀನೆಲ್ಲೋ ನಾನಲ್ಲೆ!



ಹೇ ಹುಚ್ಚಿ ತಮಾಷೆ ಮಾಡಿದ್ದು ಸಾಕು ಬಾ ಊಟ ಬಡಿಸು ಬಾ!



ತರ ಸೀರಿಯಸ್ ವಿಷ್ಯಗಳನ್ನ ತಮಾಷೆಯಾಗಿ ಹೇಳಿಕೊಂಡು ಮಜಾ ತಗೊಳ್ಟ್ತಿದ್ರು ಮಗ!



ಮಗ ತಮಾಷೆಯಲ್ಲ ಸೀರಿಯಸ್ ... ಅಲ್ಲಿ ನೋಡೋ ಸ್ವಾತಿ ಸತ್ತು ಹೋದಳು

ಹೇಗೋ

ಅಷ್ಟು ಜನ ಬಿಡದ ಹಾಗೆ ಹಿಡ್ಕೊಂಡಿದ್ರು...



ಅವರು ಹಿಡಿದು ಕೊಂಡಿದ್ದು ಅವಳ ದೇಹ ಮಾತ್ರ ಮನಸ್ಸನ್ನಲ್ಲ

ಬಿಡಿಸಿಕೊಳ್ಳಕ್ಕೆ ಸಾಕಷ್ಟು ಪ್ರಯತ್ನ ಪಟ್ಟಳು ಮಗ ಆದ್ರೆ... ಆಗಲಿಲ್ಲ... ಅವಳಿಗೆ ಏನು ಅನಿಸಿತೋ ಏನೋ

ಉಸಿರು ಬಿಗಿ ಹಿಡಿದುಕೊಂಡು ಪ್ರಾಣ ಬಿಟ್ಟೆ ಬಿಟ್ಟಳು!



ಛೆ, ಹೀಗಾಗಬಾರದಿತ್ತು



ಕೊನೆಗೂ ನೀನೆಲ್ಲೋ ನಾನಲ್ಲೆ  ಅನ್ನೋದನ್ನ ಪ್ರೂ ಮಾಡಿಬಿಟ್ಟಳು

..



ಅವಳ ಆಸೆಯಂತೆಯೇ ಅವಳ ಶವವನ್ನು ಅದೇ ಚಿತೆಯಲ್ಲಿ ಸುಡಲಾಯಿತು.. ಅಂದುಕೊಂಡಂತೆ ಮಣ್ಣಲ್ಲಿ ಮಣ್ಣಾಗಿ ಹೋದವು ಜೀವಗಳು!



ಉಳಿಸಿಕೊಳ್ಳಲಂತೂ ಆಗಲಿಲ್ಲ ..

Happy Journey ಅಂತ ನಾದ್ರೂ ವಿಶ್ ಮಾಡುವ



ಹ್ಯಾಪೀ ಜರ್ನೀ ಫ್ರೆಂಡ್ಸ್ !



ಬೈ ಬೈ ಬೈ :(



ಇಂತಹ ಪ್ರೀತಿಗಳು ಪ್ರಪಂಚದಲ್ಲಿ ತುಂಬಾನೇ  ಇವೆ,, ಆದರೆ ನಮ್ಮ ಕಣ್ಣಿಗೆ ಕಾಣೋದು ಕೆಲವು ಮಾತ್ರ!

Somesh N Gowda