Monday 26 November 2012

ಸಮಾಜ ಮತ್ತು ಸಂಬಂಧ




ಅಂದು ಬೇಸರ ಕಳೆಯಲು ಜನರು ಒಂದೆಡೆ ಸೇರಿ ಹರಟೆ ಹೊಡೆದು ಕಾಲ ಕಳೆಯುತ್ತಿದ್ದರು.
ಕೆಲವೊಬ್ಬರು ಅದನ್ನು ಸೋಮಾರಿ ಕಟ್ಟೆ ಎಂದರು ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಏಕೆಂದರೆ ಅಲ್ಲಿ ಕೆಲವೊಮ್ಮೆ  ಮುಖ್ಯವಾದ ವಿಷಯಗಳ ಬಗ್ಗೆಯೂ ಚರ್ಚಿಸುತ್ತಿದ್ದರು ಮತ್ತು
ಏನಾದರೂ ಸಮಸ್ಯೆಗಳಿದ್ದರೆ ಅದಕ್ಕೆ ಅಲ್ಲೇ ಪರಿಹಾರವನ್ನು ಕೂಡ ಕಂಡುಕೊಳ್ಳುತ್ತಿದ್ದರು.
ಸಮಾಜದ ಗೌರವವನ್ನು ಕಾಪಾಡಿಕೊಂಡು ಬದುಕುದಿದ್ದರು.|

ಆದರೆ ಇಂದು  ಚರ್ಚೆ ಎಂಬುದು ಕಡಿಮೆಯಾದಂತಿದೆ, ಏನಾದರೂ ಬೇಸರವಾದರೆ ಸಾಕು..ಮೊಬೈಲ್, ಟಿ ವಿ , ಕಂಪ್ಯೂಟರ್ ಗಳ ಮೂಲಕವೇ
ಬೇಸರವನ್ನು ಮರೆಮಾಡುತ್ತಾರೆ. ಚರ್ಚಿಸಿದರು ಅದು ಬೇಡದ ವಿಷಯಗಳ ಬಗ್ಗೆ..

" ಏನಾಗಲಿ  ಮುಂದೆ ಸಾಗು ನೀ..
ಅವರು ಹೇಳಿದ್ದೆಲ್ಲ ನಮಗೆ ಅನ್ವಯಿಸೊಲ್ಲ...
ನನ್ನಾಣೆ ನಾನೆಂದೂ ಜನರ ನಂಬೊಲ್ಲ"

ಅನ್ನುವವರೇ ಜಾಸ್ತಿ ಈಗ. ನಂಬಿಕೆಗೆ ಇಂದು ಮಹತ್ವ ಕಡಿಮೆ..!
ಯಾಕಂದ್ರೆ ಎಲ್ಲರೂ ಬುದ್ದಿವಂತರಾಗಿದ್ದಾರಲ್ಲ..ಅದಕ್ಕೆ ಎಲ್ಲರೂ ಎಲ್ಲದಕ್ಕೂ ಅನುಮಾನ ಪಡುತ್ತಾರೆ .
ಇನ್ನೂ ಸಮಾಜದ ಬಗ್ಗೆ ಚಿಂತಿಸುವವರು ಯಾರಿದ್ದಾರೆ ಹೇಳಿ...

"ಹೆಂಡತಿ ಬಂದ ಮೇಲೆ ತಾಯಿಯನ್ನ ಮರೆಯುವ ಹಾಗೆ.. ಇಂಗ್ಲೀಷ್ ಕಲಿತ ಮೇಲೆ ತಾಯಿ ಭಾಷೆಯನ್ನೇ ಮರೆಯುತ್ತಾರೆ"  The great people

ಸಮಾಜದ ಬಗ್ಗೆಯು ಚಿಂತಿಸುವುದಿಲ್ಲ  ಸಂಬಂಧಗಳನ್ನಂತು ಲೆಕ್ಕಿಸುವುದೇ ಇಲ್ಲ ...
ಹೌದು ಕಾಲ ಬದಲಾಗಿದೆ ತಂತ್ರಜ್ಞಾನ ಮುಂದುವರೆದಿದೆ..ತಂತ್ರಜ್ಞಾನ ಮುಂದುವರೆದಂತೆಲ್ಲ ಸಮಾಜ ಹಾಳಾಗುತ್ತದೆ ಎನ್ನುವುದರಲ್ಲಿ ಎರಡನೆ ಮಾತೇ ಇಲ್ಲ... .
ಯಾರೆನಾದರೇನು ಇಲ್ಲಿ ನಾನೊಬ್ಬನೇ ಮುಖ್ಯ.. ನನ್ನ ಪಾಡಿಗೆ ನಾನಿದ್ದರಷ್ಟೇ ಇಲ್ಲಿ ಸೌಖ್ಯ”  ಎಂಬ ವಾಕ್ಯವನ್ನು ನಮ್ಮ ಜನರು ತುಂಬಾ ಚೆನ್ನಾಗಿ
ಬಳಸಿಕೊಳ್ಳುತ್ತಿದ್ದಾರೆ.|

ಸಮಾಜದಲ್ಲಿ ಸಂಬಂಧಗಳು ಎಷ್ಟು ಮುಖ್ಯ...ಅದರಲ್ಲೂ  ಅನೈತಿಕ ಸಂಬಂಧಗಳಿಂದ ಸಮಾಜ ಹೇಗೆ ಹಾಳಾಗುತ್ತಿದೆ.
ಎನ್ನುವುದೇ ಬರವಣಿಗೆಯ ಮುಖ್ಯ ಉದ್ದೇಶ
  
 ಇತ್ತೀಚಿನ ದಿನಗಳಲ್ಲಿ ಅನೈತಿಕತೆ ಎನ್ನುವುದು ಸಮಾಜದೊಳಗೆ ಬಿಗಿಯಾಗಿ ನೆಲೆಯೂರಿಬಿಟ್ಟಿದೆ.
ಸಂಬಂಧಗಳು ಮುರಿದು ಬೀಳುತ್ತಿವೆ. ಸಂಸ್ಕೃತಿ ಮಾಯವಾಗುತ್ತಿದೆ. ಸ್ವಾರ್ಥ ಎಲ್ಲೆಡೆ ಆವರಿಸುತ್ತಿದೆ…

ಇದಕ್ಕೆ ಉದಾಹರಣೆ ಯಂತೆ
ಅಮಲಾಪುರ ಎಂಬ ಊರಲ್ಲಿ ಅಮರೇಶ್ ಮತ್ತು ಅಮೃತ ಎಂಬ ದಂಪತಿಗಳಿದ್ದರು..ಇಬ್ಬರು ಉದ್ಯೋಗದಲ್ಲಿದ್ದರು, ಸಮಾಜದಲ್ಲಿ ಗುರುತಿಸಿಕೊಂಡಿದ್ದರು.
ಮದುವೆಯಾಗಿ ಕೆಲವು ವರ್ಷಗಳಾಗಿತ್ತು. ಒಂದು ಮಗು ಕೂಡ ಇತ್ತು ,ಚೆನ್ನಾಗಿಯೇ ಸಂಸಾರ ನಡೆಯುತ್ತಿತ್ತು..ಯಾವುದೇ ಮನಸ್ತಾಪಗಲಾಗಲಿ, ಜಗಳಗಳಾಗಲಿ ನಡೆದಿರಲಿಲ್ಲ
ಇಬ್ಬರಲ್ಲೂ ಪ್ರೀತಿ ಕುಗ್ಗಿರಲಿಲ್ಲ.|
ಅಮೃತ ಕೆಲಸ ಮಾಡುತ್ತಿದ್ದ ಆಫೀಸ್ ನಲ್ಲಿ ರಮೇಶ್ ಎಂಬ ಸಹ ಕೆಲಸಗಾರನಿದ್ದ..ಇವನಿಗೂ ಮದುವೆಯಾಗಿತ್ತು,,, ಅಮೃತ ಮತ್ತು ರಮೇಶ್ ನಡುವೆ ಒಳ್ಳೆಯ ಸ್ನೇಹವಿತ್ತು .
ಅದು ಸುಮಾರು 2 ವರ್ಷಗಳ ಸ್ನೇಹ, ಆ ಸ್ನೇಹ ದಿನೇ ದಿನೇ ಮಿತಿ ಮೀರಿತ್ತು. ಇಬ್ಬರು ಆಫೀಸ್ ಮುಗಿದರೂ ಮನೆಗೆ ಮಾತ್ರ 1-2 ಗಂಟೆ ಲೇಟಾಗಿ ಹೋಗುತ್ತಿದ್ದರು..
ಆ ಸಮಯ ಇಬ್ಬರಿಗೂ ಅತಿ ಪ್ರಿಯ.  ಮದುವೆಯಾಗಿದೆ ಎಂಬುದನ್ನು ಮರೆತು ಇಬ್ಬರು ಸಂಬಂಧ ಬೆಳೆಸಿಕೊಂಡರು.. ಅದೇನೂ ಪ್ರೇಮ ಸಂಬಂಧವೋ- ಕಾಮ ಸಂಬಂಧವೋ.?
ಗಂಡನಿಗೆ ಮೋಸ ಮಾಡಿ ಅವನ ಜೊತೆ ಸೇರುವ ಇವಳ ಉದ್ದೇಶವಾದರೂ ಏನಿತ್ತೋ...? ಆ ಸ್ನೇಹದಲ್ಲಿ ಪ್ರೀತಿ ಹುಡುಕಿದರೆ ಪರವಾಗಿಲ್ಲ
ಆದರೆ ಕೇವಲ ಸ್ವಾರ್ಥ ಸುಖಕ್ಕೋಸ್ಕರ ಇವಳು ಅವನ ಜೊತೆ ಬೆರೆಯುವುದು ಎಷ್ಟು ಸರಿ.
ಇಂತಹ ಒಂದು ಆಟಕ್ಕೆ  ಮದುವೆ ಯಾಕೆ ಆಗಬೇಕಿತ್ತು..?
ಇತ್ತ ಸಮಾಜದ ರಕ್ಷಣೆಗಾಗಿ ಗಂಡನೂ ಬೇಕು.. ಅತ್ತ ಸ್ವಾರ್ಥಕ್ಕಾಗಿ ಇನ್ನೊಬ್ಬನೂ ಬೇಕು. ಇದು ಯಾವ ನ್ಯಾಯ.!
ಹೀಗೆ ಮಾಡುವುದರಿಂದ ಇವರಿಗೆ ಸಿಗುವುದಾದರೂ ಏನು
ಇತ್ತ ಇವಳು ಹೀಗೆ ಮಾಡುತ್ತಿದ್ದಾರೆ ಅತ್ತ ಈಕೆ ಗಂಡ ಇವಳಿಗೇನು ಕಡಿಮೆಯಿಲ್ಲ ಅನ್ನುವ ಹಾಗೆ ಇನ್ಯಾರೋ ಹೆಣ್ಣಿನ ಜೊತೆ ಸಂಬಂಧ ಬೆಳೆಸಿಕೊಂಡಿರುತ್ತಾನೆ
ಆದರೆ ಹೆಂಡತಿಯ ವಿಷಯ ಗಂಡನಿಗಾಗಲಿ..ಗಂಡನ ವಿಷಯ ಹೆಂಡತಿಗಾಗಲಿ ಗೊತ್ತೇ ಇರುವುದಿಲ್ಲ... ಅದು ಇಬ್ಬರಿಗೂ ಗೊತ್ತಾದರೆ ವಿವಾಹ ವಿಚ್ಛೇದನ ಎಂಬ ಇನ್ನೊಂದು ನಾಟಕ.!!!
ಈ ಮೂವರ ನಾಟಕದಲ್ಲಿ  ರಮೇಶನ ಹೆಂಡತಿ ಗತಿ ಏನಾಗಬೇಕು...ಇಂತಹ ಪರಿಸ್ಥಿತಿಯಲ್ಲಿ ಅವಳು ಏನು ಮಾಡಬಹುದು?
ಆಗ ಇಲ್ಲಿ ಎರಡು ಕುಟುಂಬಗಳು ಒಡೆದು ಹೋಗುತ್ತವೆ, ಏನೂ ತಪ್ಪು ಮಾಡದ ರಮೇಶನ ಹೆಂಡತಿ ಕೂಡ ಇಲ್ಲಿ ಕಷ್ಟ ಪಡಬೇಕಾಗುತ್ತದೆ.ಇವರು ಸಮಾಜದಲ್ಲಿ ಹೆಸರನ್ನು ಹಾಳು ಮಾಡಿಕೊಳ್ಳುತ್ತಾರೆ, ಸಮಾಜವನ್ನು ಹಾಳು ಮಾಡುತ್ತಾರೆ...ಇವರಿಂದ ಅವರ ಸಮುದಾಯಕ್ಕೆ ಒಂದು ಕೆಟ್ಟ ಹೆಸರು ಬರುತ್ತೆ.ಅವರ ಜೀವನ ಅಲ್ಲಿಗೆ ಕತ್ತಲಾಗುತ್ತದೆ.
ಮಾಡಿದ್ದುಣ್ಣೋ ಮಹಾರಾಯ...ಅವರು ಮಾಡಿದ್ದು ಅವರಿಗೆ ಬಿಡಿ.


ನೋಡಿ ಈಗೂ ಒಂದು ಸಂಬಂಧ ಮಾಡಬಹುದೇ.  ಇಂಥ ಒಂದು ನಾಟಕಕ್ಕೆ ಮದುವೆ ಎಂಬ ಅಸ್ತ್ರವನ್ನೇಕೆ ಬಳೆಸಿಕೊಳ್ಳುತ್ತಾರೆ( ಇಂತಹ ಪ್ರಶ್ನೆಗಳು ನಮ್ಮಲ್ಲಿ ಸಾವಿರಾರು)
ಅನೈತಿಕ ಸಂಬಂಧಗಳನ್ನು ಸಮಾಜದಲ್ಲಿ ಎಷ್ಟು ದಿನ ಮುಚ್ಚಿಡಬಹುದು...ಒಂದಲ್ಲ ಒಂದು ದಿನ ಅದು ಗೊತ್ತಾಗಲೇಬೇಕು...
ಆಗ ಇವರ ಜೊತೆ ಸಮಾಜದ ಗೌರವವೂ ಕಡಿಮೆಯಾಗುತ್ತದೆ ಅಲ್ಲವೇ.|

ಹೀಗೆ ಮಾಡುವುದರಿಂದ ಸಮಾಜದ ಗೌರವ ಏನಾಗಬೇಕು?  ಸಂಸ್ಕೃತಿ ಏನಾಗಬೇಕು?... ಇವರನ್ನೇ ಇವರ ಮಕ್ಕಳು ಅನುಸರಿಸುವುದಿಲ್ಲವೇ?. ಮಕ್ಕಳ ಭವಿಷ್ಯದ ಬಗ್ಗೆಯಾದರೂ ಯೋಚಿಸಬೇಕಲ್ಲವೇ?.. ಇಂಥವರು ಮುಂದಿನ ಪೀಳಿಗೆಗೆ ಮಾದರಿಯಾಗಬಲ್ಲರೆ..?
ಒಮ್ಮೆ ಅವರನ್ನ ಅವರೇ ಪ್ರಶ್ನಿಸಿಕೊಂಡರೆ ಇದಕ್ಕೆ ಉತ್ತರಸಿಗಬಹುದೇನೋ...!!!
ಸಂಬಂಧಗಳು ಸಮಾಜದ ಗೌರವವನ್ನು ಹೆಚ್ಚಿಸಬೇಕೆ ಹೊರತು...ಹಾಳು ಮಾಡಬಾರದು
ಸಂಬಂಧ ಬಿಡಿಸಲಾಗದ ಅನುಬಂಧ.. ಸಮಾಜ ಸಂಸ್ಕೃತಿ,ಸಂಪ್ರದಾಯ, ಸಮೂಹಕ್ಕೇ ಅಂದ.
ಇವೆರಡು ಚೆನ್ನಾಗಿದ್ದರೆ ನಮಗೆ ಆನಂದ..

ಇವುಗಳನ್ನ ನಾವು ರಕ್ಷಿಸಿದರೆ ಅವು ನಮ್ಮನ್ನ ರಕ್ಷಿಸುತ್ತವೆ.
ಜೈ ಕರ್ನಾಟಕ ಮಾತೆ


ಮತ್ತೆ ಸಿಗೋಣ


ಧನ್ಯವಾದ.
ಸೋಮೇಶ್ ಎನ್ ಗೌಡ

ವಿಷಯವನ್ನು ಕೊಟ್ಟು ಇದರ ಬಗ್ಗೆ ಲೇಖನ ಬರೆಯಲು ಸಲಹೆ ನೀಡಿದ ..ನನಗೆ ಉತ್ತಮ ಸಲಹೆಗಾರರಾಗಿರುವ ಹೇಮಂತ್ ಸರ್ ಗೆ ಇಲ್ಲಿ ನಾನು ಧನ್ಯವಾದವನ್ನು ಹೇಳಲು ಇಚ್ಛಿಸುತ್ತೇನೆ.Thank u Sir

ದಯವಿಟ್ಟು ಶೇರ್ ಮಾಡಿ... ಸಮಾಜದ ರಕ್ಷಣೆಗೆ ಬದ್ದರಾಗಿ.|

ನಮ್ಮ ಸಮಾಜವನ್ನು ನಾವು ಬೆಳೆಸಬೇಕು. ಗೌರವಿಸಬೇಕು.
ಜೈ ಕರ್ನಾಟಕ ಮಾತೆ







Thursday 22 November 2012

ಪ್ರೀತಿ, ಆತ್ಮ ಸಂಬಂಧ

ನಮಸ್ಕಾರ
ಇತ್ತೀಚಿನ ದಿನಗಳಲ್ಲಿ ಲವ್ ಮಾಡಿ ಮದ್ವೆ ಆಗೋರೆ ಜಾಸ್ತಿ ನೋಡ್ರಪ್ಪ, ಅದೆಷ್ಟು ಜನ ಸುಖವಾಗಿ ಬಾಳ್ತಾ ಇದ್ದಾರೋ ಗೊತ್ತಿಲ್ಲ..
ಆದರೆ ಬೆಂಗಳೂರಿನ ಸದಾಶಿವನಗರದಲ್ಲಿ ವಾಸವಾಗಿದ್ದ ರಮೇಶ್ ಹಾಗೂ ರಮ್ಯ ದಂಪತಿಗಳು ಮಾತ್ರ ಬೇರೆಯವರಿಗೆ ಮಾದರಿಯಾಗುವಷ್ಟು
ಅನ್ಯೋನ್ಯವಾಗಿದ್ದರು.

ಈ ದಂಪತಿಗಳಿಗೆ ಮುದ್ದಾದ ಒಬ್ಬಳು ಮಗಳಿದ್ದಳು..ಹೆಸರು ಅನಿತಾ!!! ಒಬ್ಬಳೇ ಮಗಳಾದ್ದರಿಂದ ಇವಳ ಮೇಲೆ ಇವರಿಗೆ ಎಲ್ಲಿಲ್ಲದ ಪ್ರೀತಿ.
ಈ ಸ್ವೀಟೀ ತುಂಬಾ ನಾಟಿ ಎಷ್ಟೋಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಳು ಈ ಬ್ಯೂಟಿ..ಹಿರಿಯರೆಂದರೆ ತುಂಬಾ ಗೌರವ,
ತಂದೆ ತಾಯಿಗಳ ಮಾತಿಗೆ ಎಂದೂ ಪ್ರತ್ಯುತ್ತರ ಕೊಡುತ್ತಿರಲಿಲ್ಲ. ಒಟ್ಟಾರೆ ಒಳ್ಳೆಯ ಸಬ್ಯತೆಯನ್ನ ರೂಡಿಸಿಕೊಂಡಿದ್ದಳು..

ಕಾಲೇಜ್ ಮುಗಿದ ತಕ್ಷಣ ಮನೆ ಸೇರುತ್ತಿದ್ದ ಮುದ್ದು ಹುಡುಗಿ...ಅದೆಷ್ಟೋ ಹುಡುಗರು ಇವಳನ್ನ ಪ್ರೇಮಿಸಲು ಪ್ರಯತ್ನಿಸಿ ಕೈ ಸುಟ್ಟುಕೊಂಡಿದ್ದಾರೆ
ಆದರೆ ಇವಳ ಮನಸ್ಸನ್ನ ಯಾರು ಗೆಲ್ಲಲು ಆಗಿರಲಿಲ್ಲ...ಈ ಹುಡುಗಿಗೆ ಒಂದು ಹವ್ಯಾಸ ಇತ್ತು ಅದೇನಪ್ಪ ಅಂದ್ರೆ..ಕಾಲೇಜ್ ಮುಗಿಸಿ ಮಲ್ಲೇಶ್ವರಂ ನಲ್ಲಿ
ಮಸಾಲೆ ದೋಸೆ ತಿನ್ನೋದು..ಒಂದು ದಿನವೂ ಬಿಡದೆ ದಿನಾಲೂ ಮಸಾಲ ದೋಸೆ ತಿನ್ನಲು ಮಲ್ಲೇಶ್ವರಂಗೆ ಹೊರಟು ಬಿಡುತ್ತಿದ್ದಳು.
ಅದೆಷ್ಟು ಪ್ರೀತಿನೋ ನಾ ಕಾಣೆ ಇವಳಿಗೆ ಮಸಾಲ ದೋಸೆ ಮೇಲೆ.
ಈಗೆ ಇವಳ ದಿನಚರಿ ಸಾಗುತ್ತಿತ್ತು..

ಒಂದು ದಿನ ಅದೇ ಹೋಟೆಲ್ಗೆ ನನ್ನ ಗೆಳೆಯ ಸುದೀಪ ಹೋಗುತ್ತಾನೆ. ಅವಳ ನೋಡಲು ಅಲ್ಲ...ಹಸಿದ ಹೊಟ್ಟೆಯ ತಣ್ಣಾಗಾಗಿಸಲು!

ಆದರೆ ಅವನು ಅಲ್ಲಿಗೆ ಹೋದದ್ದೇ ತಡ . ಇಲ್ಲಿಗೆ ನಾನು ಏಕೆ ಬಂದಿದ್ದೇನೆ ಎಂಬುದನ್ನ ಮರೆತು ಒಂದು ಖುರ್ಚಿಯ ಮೇಲೆ ಕೂತು ಈ ಅನಿತಾಳನ್ನ
ನೋಡ್ತಾ ಕುಳಿತುಕೊಂಡು ಬಿಡ್ತಾನೆ . .ನೋಡ್ತಾ ನೋಡ್ತಾ..ಮನಸ್ಸಲ್ಲಿ ನೂರಾರು ಕನಸುಗಳನ್ನ ಬಿತ್ತನೆ ಮಾಡಿ ಬಿಡ್ತಾನೆ..ನಾನು ಮದ್ವೆ ಅಂತ ಆದ್ರೆ ಅದು ಇವಳನ್ನ ಮಾತ್ರ.
ಇಂತಹ ನೂರಾರು ಹುಚ್ಚು ಆಸೆಗಳಿಗೆ ಮನಸ್ಸಲ್ಲಿ ಜಾಗ ಕೊಡ್ತಾನೆ. ಇವನು ಅದೇ ಲೋಕದಲ್ಲಿ ತೇಲ್ತಾ ಇರ್ತಾನೆ...ಇತ್ತ ಇವಳು ತನ್ನ ಕೆಲ್ಸಾ ಮುಗಿಸಿಕೊಂಡು
ಮನೆಯ ದಾರಿ ಹಿಡಿಯುತ್ತಾಳೆ..ಇವನು ಮತ್ತೆ ಆ ಕಡೆ ಕಣ್ಣಾಯಿಸಿದರೆ ಅನಿತಾ ಅಲ್ಲಿ ಕಾಣುವುದಿಲ್ಲ ."ಒಹ್ ಗಾಡ್" ಬೇಜಾರಿನಿಂದ
ಇವನು ತನ್ನ ಕೆಲ್ಸದ ಕಡೆ ಗಮನ ಹರಿಸುತ್ತಾನೆ.. ನೋಡಿ ಇವನಿಗೆ ರಾತ್ರಿಯೆಲ್ಲ ನಿದ್ದೆ ಕೂಡ ಬರಲ್ಲ.. ಇಷ್ಟು ಬೇಗ ಇವನನ್ನ ಸೆಳೆದಿದ್ದಳು ಅಂದರೆ ಇನ್ನೆಂತ ಚೆಲುವಿರಬೇಕು ಅವಳದ್ದು..
ನಿಜಕ್ಕೂ ಆಶ್ಚರ್ಯ!!!.

ಅದೇ ಕೊರಗಿನಿಂದ ಮತ್ತೆ ಅದೇ ಸಮಯಕ್ಕೆ ಒಮ್ಮೆ ನೋಡೋಣ ಅಂತ ಆ ಹೊಟೆಲ್ ಬಳಿಗೆ ಬರ್ತಾನೆ..
ವಾಹ್ ಇವನ ಅದೃಷ್ಟವೆ ಇರಬೇಕು ಅನ್ನುವ ಹಾಗೆ.ಅನಿತಾ ಅದೇ ಖುರ್ಚಿಯ ಮೇಲೆ ಮಸಾಲ ದೋಸೆ ತಿನ್ನುತ್ತಾ ಕುಳಿತಿರುತ್ತಾಳೆ.
ಇನ್ನೂ ಇವನು ತಡ ಮಾಡುವುದಿಲ್ಲ. ಮನಸ್ಸಲ್ಲಿ ಮೂಡಿದ ನೂರಾರು ಆಸೆಗಳನ್ನ ಶಿಖರಕ್ಕೆ ಏರಿಸುವ ಹೆಜ್ಜೆ ಹಾಕಿ ಅವಳ ಮುಂದಿನ ಖುರ್ಚಿಯಲ್ಲಿ
ಕುಳಿತು ಅವಳನ್ನೇ ನೋಡುತ್ತಾ.."ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೆ ಕೊಡ್ತೀಯಾ, ನಿನ್ನೆ ಪ್ರೀತಿ ಮಾಡ್ತೀನಿ ನನ್ನ ಮದ್ವೆ ಆಗ್ತೀಯ"

ಅಂತ ನಗು ನಗುತ್ತಾ ಕಣ್ಣಲ್ಲಿ ಕಣ್ಣಿಟ್ಟು ಬಡಬಡಾಯಿಸುತ್ತಾನೆ..

-----------------------

ಪರಿಚಯವೇ ಇಲ್ಲದ ಒಬ್ಬ ಹುಡುಗ..ನೇರವಾಗಿ ಬಂದು ನನ್ನ ಮದ್ವೆ ಆಗು ಅಂದ್ರೆ ಯಾವ ಹುಡ್ಗಿ ತಾನೆ ಒಪ್ಪಿಕೊಳ್ತಾಳೆ ಹೇಳಿ.
ಇಲ್ಲಿ ಅನಿತಾ ಕೂಡ ಎಲ್ಲೋ ಲೂಸ್ ಇರ್ಬೇಕು ಅಂತ ಸುಮ್ನೇ ಎದ್ದು ಹೊರಟು ಹೋಗ್ತಾಳೆ.
ಅದಕ್ಕೆ ಸುದೀಪ ಏನು ಬೇಸರ ಮಾಡಿಕೊಂಡಿರಲಿಲ್ಲ..ಏಕೆಂದರೆ ಅವಳು ದಿನ ಇಲ್ಲಿಗೆ ಬರುತ್ತಾಳೆ ಎಂಬ ಮುಖ್ಯವಾದ ವಿಷಯ ಇವನಿಗೆ ತಿಳಿದಿತ್ತು..
ಅವಳು ಒಪ್ಪುತ್ತಾಳೆ ಎಂಬ ಅತಿಯಾದ ಭರವಸೆ ಕೂಡ ಇವನಲ್ಲಿತ್ತು .
 hmm ಇವನದು ಅದೆಂತಾ ಆತ್ಮ ವಿಶ್ವಾಸನೋ....ಇನ್ನೂ ಅವಳು ಹೇಗೆ ಒಪ್ಪುತ್ತಾಳೊ.!

ಮತ್ತೆ ಅವಳು ಬರುವ ದಾರಿಯನ್ನು ನೋಡುತ್ತಿದ್ದ ಸುದೀಪ ಎರಡನೇ ದಿನವೂ ನಿನ್ನೆ ಹೇಳಿದ್ದ ಮಾತನ್ನೇ ಮತ್ತೆ ಹೇಳುತ್ತಾನೆ.. ಅವಳಿಗೆ ಕೋಪ ಬಂದಿತ್ತೋ ಏನೋ ಆವನ ಮಾತನ್ನು ಕೇಳಿದ ಕೂಡಲೇ
ತಿನ್ನುತ್ತಿದ್ದ ಮಸಾಲ ದೋಸೆಯನ್ನು ಬಿಟ್ಟು! ಅರ್ಧಕ್ಕೆ ಎದ್ದು ಹೋಗ್ತಾಳೆ.. ಇವನು ಗಾಬರಿಯಿಂದ ಅವಳ ಹಿಂದೆನೆ ಸ್ವಲ್ಪ ದೂರ ಹೋದರು ಅವಳಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ... ಆ ಕ್ಷಣ ಮಾತ್ರ ಸುದೀಪ ಸ್ವಲ್ಪ ಬೇಸತ್ತು ಹೋಗಿರುತ್ತಾನೆ.
ನಾಳೆ ಏನಾಗುವುದೇನೋ ಎಂಬ ಕೊರಗು ಇವನಲ್ಲಿ ಜಾಸ್ತಿಯಾಗಿರುತ್ತೆ...

ಆದರೂ ಬಿಡಲ್ಲ  ಇದು ಮೂರನೇ ದಿನದ ಪ್ರಯತ್ನ..
ನೋಡಿ ಇಂದೂ ಕೂಡ ಅದೇ ವಾಕ್ಯ"ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೆ ಕೊಡ್ತೀಯಾ, ನಿನ್ನೆ ಪ್ರೀತಿ ಮಾಡ್ತೀನಿ ನನ್ನ ಮದ್ವೆ ಆಗ್ತೀಯ"
ನಿಜವಾದ ಪ್ರೇಮಿನಮ್ಮ ನಾನು!  ನಿನ್ನನ್ನು ಬಿಟ್ಟು ಬೇರೆ ಯಾವ ಹೆಣ್ಣನ್ನು ನೋಡೋದಿಲ್ಲ ನಿನ್ನಾಣೆ!!! ..ಅಂತ ಮತ್ತೆ ಗೋಗರೆಯುತ್ತಾನೆ

ಆದರೆ ಈ ಬಾರಿ ಮಾತ್ರ ಅವಳು ನಗು ನಗುತ್ತಾ. ನಾಚುತ್ತಾ. ಮೆಲ್ಲನೆ  ಮೆಲ್ಲನೆ ಉಗುಳು ನುಂಗಿ " ಚೆಲುವ ಒಂದು ಹೇಳ್ತೀನಿ ನನ್ನ ಮನಸ್ಸು ಕೊಡ್ತೀನಿ"
ಅಂತ ಹೇಳಿ ಓಡಿ ಹೊರಟೆ ಬಿಡೋದ.. ಹಬ್ಬನಿಜವಾಗಲು ಈ ಸುದೀಪನಿಗೆ ತಕ್ಕ ಜೋಡಿ ನೋಡಿ ಇವಳು .ಹೇಗೆ ಉತ್ತರ ಕೊಟ್ಟಳು ನೋಡ್ರಿ.:)
ಅಂತೂ ಒಪ್ಪಿಗೆ ಕೊಟ್ಟೆ ಬಿಟ್ಟಳು...ಕೊಡದೇ ಏನ್ ಮಾಡ್ತಾಳೆ ಸುದೀಪ ಯಾವುದರಲ್ಲಿ ಕಡಿಮೆ ಇದ್ದ ಹೇಳಿ.
ನೋಡಕ್ಕೆ ಸುಂದರ, ಮೇಲಾಗಿ ಸಾಫ್ಟ್‌ವೇರ್ ಉಧ್ಯೊಗಿ ,ಒಟ್ಟಿನಲ್ಲಿ ಅವಳು ಮೆಚ್ಚುವ ಗುಣ ಇವನ್ನಲ್ಲಿತ್ತು .

ಇನ್ನೂ ಇಬ್ಬರ ಪ್ರೀತಿ ಗಾಡವಾಗಿ ಬೆಳೆದು ಬಿಡುತ್ತೆ...ಯಾವ ರೀತಿ ಅಂದ್ರೆ ದಿನದ 24 ಗಂಟೆಗಳಲ್ಲಿ 7 ಗಂಟೆ ಫೋನ್ ನಲ್ಲಿ ಮಾತನಾಡುವಷ್ಟು..
7 ಗಂಟೆ ಮಾತನಾಡುವಷ್ಟು ವಿಷಯ ಏನಿರುತ್ತೋ..? ನನಗಂತು ನಿಜವಾಗಲೂ ಗೊಂದಲ ಹುಟ್ಟಿಸಿಬಿಟ್ಟಿದೆ.....
ಸುದೀಪ ಬರುವ ಸಂಬಳದಲ್ಲಿ ಅರ್ಧ ಕರೆನ್ಸಿಗೆ ಖರ್ಚು ಮಾಡುತ್ತಿದ್ದನೆನೋ.!!
ಅದು ಅಲ್ಲದೇ ತನ್ನ ಪ್ರೇಯಸಿಗೆ ಉಡುಗೊರೆಯಾಗಿ ಒಂದು ಮೊಬೈಲ್ ಕೊಟ್ಟಿರುತ್ತಾನೆ...
ಆಈ ಮೊಬೈಲ್ ಎಂದರೆ ಅನಿತಾಳಿಗೆ ಪಂಚ ಪ್ರಾಣ..!!!!!!!!!

ಈಗೆ ಇವರ ಪ್ರೀತಿ ಪ್ರಯಾಣ ಮುಂದುವರೆಯುತ್ತಿರಬೇಕಾದ್ರೆ ಎಲ್ಲಾ ಕಥೆಗಳಲ್ಲೂ ಇರುವ ಹಾಗೆ ಇಲ್ಲೂ ಪೋಷಕರಿಗೆ ವಿಷಯ ಗೊತ್ತಾಗಿ ಬಿಡುತ್ತದೆ, ಅದೂ ಮೊದಲು ಗೊತ್ತಾಗುವುದು ಅನಿತಾಳ ತಂದೆ-ತಾಯಿಗಳಿಗೆ. ಏನಾಗಬಹುದೋ ಎಂಬ ಭಯ ಇಬ್ಬರಿಗೂ ಆದರೆ ಇವರು ಅಂದುಕೊಂಡತೆ ಏನೂ ಆಗುವುದಿಲ್ಲ!!!...ಅನಿತಾ ಮೆಚ್ಚಿರುವ ಹುಡುಗ ಇವಳ ತಂದೆ ತಾಯಿಗಳಿಗೂ ಇಷ್ಟವಾಗುತ್ತಾನೆ...ಎರಡು ಮನೆಯವರು ಒಪ್ಪಿ ಇಬ್ಬರ ನಿಶ್ಚಿತಾರ್ಥವನ್ನು ಕೂಡ ಮಾಡಿ ಮುಗಿಸುತ್ತಾರೆ.

ಹ್ಮ್ ಹ್ಮ್ ಹ್ಮ್ :) ಅಂತೂ  ಮನೆಯವರೆ ಗ್ರೀನ್ ಸಿಗ್ನಲ್ ಕೊಟ್ಟಮೇಲೆ ಇವರು ಸುಮ್ನೇ ಇರ್ತಾರ . ದಿನಕ್ಕೆ 7  ಗಂಟೆ ಮಾತನಾಡುತ್ತಿದ್ದವರು .ಒಂದು ಗಂಟೆ ಜಾಸ್ತಿನೆ ಮಾತನಾಡಕ್ಕೆ ಶುರು ಮಾಡ್ತಾರೆ..ಅದರಲ್ಲೂ  ಆಗಾಗ SMS ಮಾಡುವುದು.

ಒಬ್ಬರನ್ನು ಒಬ್ಬರು ಬಿಟ್ಟಿ ಕೊಡದ ಪ್ರೇಮ. ಒಂದು ದಿನವೂ ಇವರು ಭೇಟಿ ಮಾಡದೇ ಇರುತ್ತಿರಲಿಲ್ಲ...ನಿಜವಾಗಲೂ ಇವರು ಪ್ರೇಮಸಾಗರದಲ್ಲಿ
ಮುಳುಗಿ ಹೋಗಿರುತ್ತಾರೆ ...
ಪ್ರೀತಿಯಲ್ಲಿ ಅದೆಷ್ಟು ಶಕ್ತಿ! Great

ಒಂದು ದಿನ ಸುದೀಪ್ ಕೆಲಸದ ವಿಷಯವಾಗಿ ಚೆನ್ನೈಗೆ ಹೋಗುವ ಪರಿಸ್ಥಿತಿ ಬರುತ್ತದೆ... ಮನಸ್ಸಿಲ್ಲದ ಮನಸ್ಸಿನ್ನಿಂದ
ಚೆನೈಗೆ ಹೋಗಲು ಸುದೀಪ್ ಸಜ್ಜಾಗುತ್ತಾನೆ. ಇತ್ತ ಅನಿತಾ  ಕೂಡ ತುಂಬಾ ಬೇಸರಗೊಂಡಿರುತ್ತಾಳೆ.

ಅವಳಿಗೆ ಸುದೀಪ್ ಹೀಗೆ ಸಮಾಧಾನ ಮಾಡುತ್ತಾನೆ
(ಚೆನ್ನೈ ಏನು ಬಹಳ ದೂರ ಇದೆಯಾ
ಈಗೆ ಹೋಗಿ ಹಾಗೆ ಬಂದು ಬಿಡುತ್ತೇನೆ..ಫೋನ್ ಇರ್ಬೇಕಾದ್ರೆ ಯಾಕೆ ಬೇಜಾರು, ಎಂತಹ ಕೆಲಸವಿದ್ದರು ನಾನು  ಹೇಗೆ ದಿನಾ ಕಾಲ್  ಮಾಡುತ್ತಿದ್ದನೋ ಹಾಗೆ ನಿನಗೆ ಕಾಲ್ ಮಾಡ್ತಾ ಇರ್ತೇನೆ. )
ಹಾಗೆ ಹೀಗೆ ಏನೇನೋ ಹೇಳಿ ಒಟ್ಟಿನಲ್ಲಿ ಸಮಾಧಾನ ಮಾಡಿ
ಚೆನ್ನೈ ದಾರಿಯನ್ನ ಸುದೀಪ ಹಿಡಿಯುತ್ತಾನೆ...

ಅಲ್ಲಿಗೆ ಹೋದಮೇಲೆ ಅವಳಿಗೆ ಕೊಟ್ಟ ಮಾತಿನಂತೆ ಎಂತಹ ಕೆಲಸವಿದ್ದರು ಅವಳಿಗೆ ಕಾಲ್ ಮಾಡ್ತಾ ಇರುತ್ತಾನೆ, ಅವಳ ಜೊತೆ ಗಂಟೆ ಗಂಟಲೇ ಹರಟೆ ಹೊಡೆಯುತ್ತಾ ಇರುತ್ತಾನೆ ಸುದೀಪ.

ಮೀಟಿಂಗ್ ನಲ್ಲಿ ಇದ್ದರು ಸಹ  SMS ಮಾಡುತ್ತಿದ್ದಾನೆಂದರೆ ಇನ್ನೆಂತ ಪ್ರೀತಿ ಇವರದು.
ಈಗೆ ಮೂರು ದಿನ ಕಳೆದೆ ಹೋಗುತ್ತೆ....
ನಾಲ್ಕನೇ ದಿನ ಸುದೀಪ್ ದಿನದ ಅಭ್ಯಾಸದಂತೆ ಮೊದಲು ಅವಳಿಗೆ ಗುಡ್ ಮಾರ್ನಿಂಗ್ ಹೇಳಲು ಕಾಲ್ ಮಾಡುತ್ತಾನೆ
ಆದರೆ ಇವನು ಎಷ್ಟೇ ಟ್ರೈ ಮಾಡಿದ್ರು ಅನಿತಾಳ ನ್ನು  ಸಂಪರ್ಕಿಸಲು ಆಗುವುದಿಲ್ಲ...ಎಷ್ಟ್ ಸಲ ಕಾಲ್ ಮಾಡಿದ್ರೂ ಆ ಕಡೆ ಇಂದ ಬರುತ್ತಿದ್ದ ಉತ್ತರ

"ನೀವು ಕರೆ ಮಾಡುತ್ತಿರುವ ನಂಬರ್ ಈ ಸಮಯದಲ್ಲಿ ಸ್ವಿಚ್ ಆಫ್ ಆಗಿದೆ ದಯವಿಟ್ಟು ಸ್ವಲ್ಪ ಸಮಯ್ದ ನಂತರ ಪ್ರಯತ್ನಿಸಿ"

Ohhh

ಇವನು ಆ ದಿನ ಆಪೀಸಿಗೂ ಹೋಗದೇ ಮನೆಯಲ್ಲೇ ಇದ್ದು  ಅವಳನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಿಸಿದರು ಅದು ಮಾತ್ರ ಇವನಿಗೆ ಸಾಧ್ಯವಾಗುವುದಿಲ್ಲ..ಕೇವಲ ಇವಳ ಫೋನ್ ಮಾತ್ರ ಅಲ್ಲ ಅವರ ಮನೆಯ ಎಲ್ಲಾ ಫೋನುಗಳು ಸ್ವಿಚ್ ಆಫ್ ಆಗಿರುತ್ತವೆ...ಮತ್ತೆ ಮರುದಿನದ ಪ್ರಯತ್ನದಲ್ಲೂ ಸುದೀಪನಿಗೆ ಜಯ ಸಿಗುವುದಿಲ್ಲ. ಇವನ ಹುಚ್ಚು ವರ್ತನೆ ನೋಡಿ ಅಕ್ಕ ಪಕ್ಕದವರೂ ಕಂಗಾಲಾಗಿರುತ್ತಾರೆ.


-----------------------

ಸುದೀಪ್ ಗೆ ಗೊಂದಲಗಳು ಜಾಸ್ತಿಯಾಗಿ, ತಲೆ ಕೆಟ್ಟು ಬೆಂಗಳೂರಿಗೆ ವಾಪಸ್ ಬರುವ ತೀರ್ಮಾನ ಮಾಡುತ್ತಾನೆ.
ಇನ್ನು ಇಲ್ಲಿ ಅನಿತಾಳ ಮೊಬೈಲ್  ಸ್ವಿಚ್ ಆಫ್ ಆಗಲು ಕಾರಣ ಏನೆಂದರೆ....!!!!!!!!
ಒಂದು ದಿನ ಅನಿತಾ ಕಾಲೇಜ್ ಮುಗಿಸಿ ಮನೆಗೆ ಬಂದು ಹಾರಾಮಾಗಿ TV ನೋಡ್ತಾ ಕುಳಿತ್ತಿರುತ್ತಾಳೆ..ಅದೇ ಸಮಯಕ್ಕೆ ಅವಳ ಗೆಳತಿ ಸುಷ್ಮ..
ಇವಳಿಗೆ ಕಾಲ್ ಮಾಡಿ.
"ಎಂ ಜಿ ರೋಡ್ ನಲ್ಲಿ ಬಟ್ಟೆಗಳು ತುಂಬಾ ಚೆನ್ನಾಗಿವೆಯಂತೆ...ಆಫರ್ ಕೂಡ ಇದೆಯಂತೆ ಬಾರೆ ಹೋಗೋಣ..ಬೇಗ ನೀನು ಎಂ ಜಿ ರೋಡ್ ಗೆ ಬಂದು ಬಿಡು ನಾನು ಅಲ್ಲೇ ಸಿಗ್ತೇನೆ" ಅಂತ ಅವಳನ್ನ ಶಾಪಿಂಗ್ ಗೆ ಕರೆಯುತ್ತಾಳೆ...
 

ಇವಳು ಮೊದ್ಲೆ ಕೇಳ್ಬೇಕಾ ಹೊಸ ಹೊಸ ಬಟ್ಟೆ ಅಂದ್ರೆ ಹುಚ್ಚು
ಹೋಗಿ ಬಂದ್ ಬಿಡೋಣ ಅಂತ..ಸುಮಾರು ಸಾಯಂಕಾಲ ೪ ಗಂಟೆ ಹೊತ್ತಿಗೆ ಅಪ್ಪ ಕೊಡಿಸಿದ್ದ ಬೈಕ್ ನ್ನು ತೆಗೆದುಕೊಂಡು ಹೊರಡುತ್ತಾಳೆ..

ಒಳ್ಳೆ ಒಳ್ಳೆಯ ಬಟ್ಟೆಗಳನ್ನು ಆರಿಸಿಕೊಂಡು ಶಾಪಿಂಗ್ ಮುಗಿಸಿ...ಖುಷಿ ಖುಷಿಯಾಗಿ ಮನೆಯ ದಾರಿಯನ್ನ ಹಿಡಿಯುತ್ತಾಳೆ..

ಆಗ ಸಾಯಂಕಾಲ 6.30ರ ಸಮಯ, ಅದೇನೋ ಖುಷಿ , ಹುಮ್ಮಸ್ಸು, ಹೊಸದಾಗಿ ಏನನ್ನೋ ಪಡೆದುಕೊಳ್ಳುತ್ತಿದ್ದೇನೆ
ಎಂಬ ಸಂಭ್ರಮ.. . ತಾನು ಬೈಕ್ ನಲ್ಲಿ ಚಲಿಸುತ್ತ್ತಿದ್ದೇನೆ ಎಂಬ ಪರಿವೆ ಅವಳಿಗೆ ಇರಲಿಲ್ಲ. ಯಾವುದೋ ಲೋಕದಲ್ಲಿ ತೇಲಾಡುತ್ತಿರುವ ಅನುಭವ.
ಪಾಪ ಇವಳ ಖುಷಿಯನ್ನು ನೋಡಿ ದೇವರಿಗೂ ಹೊಟ್ಟೆ ಕಿಚ್ಚು ಬಂದಿತ್ತು ಅನಿಸುತ್ತೆ.

ಮುಂದೆ ರಭಸವಾಗಿ ಬರುತ್ತಿದ್ದ ಸಿಮೆಂಟ್ ಲಾರಿಯೊಂದು..ಇವಳ ಬೈಕನ್ನು ಕ್ಷಣಾರ್ಧದಲ್ಲಿ ಪುಡಿ ಪುಡಿ ಮಾಡಿ ಬಿಡುತ್ತದೆ :(..
ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳು ಒಂದರ ಹಿಂದೆ ಒಂದು ಸಾಲು ಸಾಲಾಗಿ ನಿಂತು ಬಿಡುತ್ತವೆ. ಅಲ್ಲೇ ಕೆಲಸ ಮಾಡುತ್ತಿದ್ದ ಜನರೆಲ್ಲಾ
ಓಡೋಡಿ ಬಂದು ಅಲ್ಲಿಗೆ ಸೇರುತ್ತಾರೆ..ಅಂತಹ ಬೀಕಾರ ಅಫಗಾತ ಅದಾಗಿರುತ್ತದೆ.

ಆ ರಸ್ತೆಯಲ್ಲಿ ರಕ್ತ ನೀರು ಹರಿಯುವಂತೆ ಹರಿದು ಹೋಗುತ್ತದೆ... ಗಾಡಿಯೇ ಚೂರು ಚೂರಾಗಿತ್ತು ಅಂದರೆ ಇನ್ನೂ ಇವಳ ಸ್ಥಿತಿ ಏನಾಗಿರಬೇಡ.
ಹೌದು ಇಲ್ಲಿ ಅನಿತಾ ಕೂಡ ಕ್ಷಣಾರ್ಧದಲ್ಲೇ ಕೊನೆಯುಸಿರನ್ನು ಎಳೆದಿರುತ್ತಾಳೆ...ಮತ್ತೆ ಹಿಂತಿರುಗಿ ಬಾರದ ಯಾರಿಗೂ ಕಾಣದ ಲೋಕಕ್ಕೆ
ಹೆಜ್ಜೆ ಹಿಟ್ಟಿರುತ್ತಾಳೆ. ..!ಇವಳ ಎಲ್ಲಾ ಕನಸುಗಳು ನುಚ್ಚು ನೂರಾಗಿರುತ್ತವೆ.!

 ಅನಿತಾಳ ಬಗ್ಗೆ ತಿಳಿದುಕೊಂಡು ಸ್ಥಳೀಯರು..ಅವಳ ಶವವನ್ನ, ಅವರ ಹೆತ್ತವರ ಕೈಗೆ ಒಪ್ಪಿಸುತ್ತಾರೆ.
ಅಂದು ಅವರ ಮನೆಯಲ್ಲಿ ಮೋಡ ಕವಿದ ವಾತವಾರಣ ಸೃಷ್ಟಿಯಾಗಿರುತ್ತೆ.
ಹೆತ್ತವರ ರೋಧನೆ ಹೇಳತೀರದು..ಅವರ ಕೂಗು ಮುಗಿಲು ಮುಟ್ಟಿತ್ತು.

ಇಲ್ಲಿ ಇನ್ನೊಂದು ಮುಖ್ಯವಾದ ವಿಷಯ ಏನಪ್ಪಾ ಅಂದ್ರೆ...ಇವಳು ಸತ್ತಿರುವ ವಿಷಯವನ್ನ..ಅನಿತಾ ಮದುವೆಯಾಗಬೇಕಿದ್ದ
ಹುಡುಗನಿಗಾಗಲಿ ಅಥವಾ ಅವನ ಮನೆಯವರಿಗಾಗಲಿ ತಿಳಿಸುವುದೇ ಇಲ್ಲ.
ಧಾರ್ಮಿಕ ವಿದಿ ವಿಧಾನದಂತೆ  ಅನಿತಾಳ ಶವ ಸಂಸ್ಕಾರ  ಮುಗಿಸಿ ಬಿಡುತ್ತಾರೆ...ಹಾಗೂ ಅವಳು ಅತಿ ಹೆಚ್ಚಾಗಿ ಪ್ರೀತಿಸುತ್ತಿದ್ದ ಅವಳ ಮೊಬೈಲ್
ಅನ್ನು ಕೂಡ ಅವಳ ಜೊತೆಯಲ್ಲೇ ಹೂತು ಬಿಡುತ್ತಾರೆ.. ಏಕೆ ಗೊತ್ತಾ ಅನಿತಾ ಅವರ ಅಮ್ಮನಿಗೆ ಹೇಳಿರುತ್ತಾಳೆ..
"ಅಮ್ಮ ಈ ಮೊಬೈಲ್ ಅಂದ್ರೆ ನನಗೆ ಪ್ರಾಣ .ಅಕಸ್ಮಾತ್ ನಾನು ಸತ್ತರು ಇದು ಕೂಡ ನನ್ನ ಜೊತೆಯಲ್ಲೇ ಇರಬೇಕು ಎಂಬುದು.
ಆದರೆ ಅದು ಇಷ್ಟು ಬೇಗ ನೆರವೇರುತ್ತದೆ ಎಂದು ಯಾರು ಭಾವಿಸಿರಲಿಲ್ಲ...ಹ್ಮ್ ವಿದಿ ಅದೆಷ್ಟು ಘೋರ ಅಲ್ವಾ........


ಇತ್ತ ಸುದೀಪ್ ಬೆಂಗಳೂರಿಗೆ ಬರುತ್ತಿರುತ್ತಾನೆ ಅಷ್ಟು ದಿನದಿಂದ ಸ್ವಿಚ್ ಆಫ್ ಆಗಿದ್ದ ಮೊಬೈಲ್ ಅದು ಹೇಗೆ ಆನ್ ಆಗಿತ್ತೋ ಗೊತ್ತಿಲ್ಲ...ಅದು ಅಲ್ಲದೇ ಆ ಮೊಬೈಲ್
ಅನ್ನು ಅನಿತಾಳ ಜೊತೆಯಲ್ಲೇ ಹೂತಿದ್ದಾರೆ..ಆದರೆ ಇಲ್ಲಿ ಪವಾಡ ಎನ್ನುವ ಹಾಗೆ ಸುದೀಪ್ ಗೆ ಅನಿತಾಳ ನಂಬರ್ ನಿಂದ ಕಾಲ್ ಬಂದಿರುತ್ತೆ

" ಹೇ ಸುದೀಪ್ ಎಲ್ಲಿ ಇದ್ದೀಯಾ..ಇವತ್ತು ಬೆಂಗಳೂರಿಗೆ ಬರ್ತೀನಿ ಅಂತ ಹೇಳಿದ್ದಲ್ಲ .ಬರ್ತಾ ಇದ್ದೀಯಾ ಸಾಯಂಕಾಲ ನನ್ ಫ್ರೆಂಡ್ ಮನೆಯಲ್ಲಿ ಪಾರ್ಟೀ ಇದೆ
ನೀನು ಬರ್ತೀಯಾ ಅಂತ ಹೇಳಿದ್ದೀನಿ, ಬರ್ತೀಯಾ ತಾನೆ ಅಂತ ಕಾಲ್ ಮಾಡಿರುತ್ತಾಳೆ...

"ಸುದೀಪ್ ಮಾತ್ರ ಸದ್ಯ ಅಂತೂ ಕಾಲ್ ಬಂತಲ್ಲ ಅನ್ನೋ ಖುಷಿಯಲ್ಲಿ ಬೆಂಗಳೂರಿಗೆ ಬಂದದ್ದೆ ತಡ . ಅನಿತಾ ಮನೆಗೆ ಓಡೋಡಿ ಬರ್ತಾನೆ
ಅಲ್ಲಿನ ವಾತಾವರಣ ನೋಡಿ ಸ್ವಲ್ಪ ಹೊತ್ತು ಮೌನಿಯಾದರೂ... ಅದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಲಿಲ್ಲ ..ಏಕೆಂದರೆ ಅವನಿಗಿನ್ನೂ ಅಲ್ಲಿನ ವಿಷಯ
ಗೊತ್ತಿರಲಿಲ್ಲ... ಮನೆಗೆ ಹೋದದ್ದೇ ತಡ..
"ಆಂಟಿ  ಆಂಟಿ ಎಲ್ಲಿ ಅನಿತಾ ನನ್ನ ಬೇಗ ಬಾ ಅಂತ ಹೇಳಿ ಇನ್ನೂ ಎನ್ ಮಾಡ್ತಾ ಅವ್ಳೆ.. ಬೇಗ ಕರೆಯಿರಿ..
ಟೈಮ್ ಆಯ್ತು..ಹೀಗೆ ಫುಲ್ ಜಾಲಿ ಮೂಡಲ್ಲಿದ್ದ ಸುದೀಪ್ ಅತ್ತೆ ಕೊಟ್ಟ ಉತ್ತರಕ್ಕೆ....ತತ್ತರಿಸಿ ಹೋಗುತ್ತಾನೆ...ಆದರೂ ಅವನು ನಂಬುವುದಿಲ್ಲ
ನೀವ್ ಸುಳ್ಳು ಹೇಳ್ತಾ ಇದ್ದೀರ ನೋಡಿ ಅನಿತಾ ಈಗ ತಾನೆ ಕಾಲ್ ಮಾಡಿ ಕರೆದಿದ್ದಾಳೆ...ನೀವ್ಯಾಕೆ ಹೀಗೆ ಹೇಳ್ತೀರ....!!!ನಾಟಕ ಸಾಕು ಕರೆಯಿರಿ.

ಒಳ್ಳೇ ತಮಾಷೆ ಫ್ಯಾಮಿಲೀನಪ್ಪ ಇವರದು.
ಹೀಗೆ ಒಬ್ಬೊಬ್ಬನೇ ಮಾತನಾಡಿಕೊಂಡು ಅನಿತಾಳ ನಂಬರ್ ಗೆ ಕಾಲ್ ಮಾಡ್ತಾನೆ..ಅವಳ ಜೊತೆ ಮಾತು ಕೂಡ ಆಡ್ತಾನೆ, ಮೊದಲು ಅನಿತಾಳ ಜೊತೆ ಹೇಗೆ ಮಾತನಾಡುತ್ತಿದ್ದಾನೆ ಹಾಗೆ, ಅದು ಕೇವಲ 7 ಗಂಟೆಯಲ್ಲ ದಿನವಿಡೀ ಫೋನ್ ನ ಕಿವಿಯಲ್ಲೇ ಹಿಡಿದು ಕೊಂಡಿರುತ್ತಾನೆ.... ಆ ಫೋನ್ ನ ಯಾರಿಂದಲೂ ಕಸಿದುಕೊಳ್ಳಲು ಆಗದ ರೀತಿ. ... ಇವನ ಸ್ಥಿತಿ ನೋಡಿ ಪೋಷಕರು ಕಂಗಾಲಾಗುತ್ತಾರೆ...

ಇವನು ನಿಜವಾಗಲೂ ಅವಳ ಜೊತೆ ಮಾತನಾಡುತ್ತಾನೆ...ಅದು ಹೇಗೆ ಆ ಮೊಬೈಲ್ ನಿಂದ ಇವನಿಗೆ ಕಾಲ್ ಬರುತ್ತೆ...
ಇದು ನಿಜಾನ...ಹೌದು ಇದು ನಿಜ ಏಕೆಂದರೆ ಅವನದು "ಪ್ರೇಮ ಸಾಮ್ರಾಜ್ಯ" ಅಲ್ಲಿ ಏನು ಬೇಕಾದರೂ ನಡೆಯುತ್ತದೆ.!!!

ಇವನ ಸ್ಥಿತಿಯನ್ನು ಸರಿಪಡಿಸಲು...ಅದೆಷ್ಟು ಡಾಕ್ಟರ್ ಗೆ ತೋರಿಸಿದರೆ ಅದು ಮಾತ್ರ ಪ್ರಯೋಜನವಾಗಲಿಲ್ಲ...ಎಲ್ಲ ಡಾಕ್ಟರ್ ಗಳು ಹೇಳುವುದೊಂದೇ
ಇವನಿನ್ನೂ ಅವಳದೇ ಲೋಕದಲ್ಲಿದ್ದಾನೆ ಅದರಿಂದ ಹೊರತರಲು ನಮ್ಮಿಂದ ಆಗುವುದಿಲ್ಲ ಎಂದು. ಹೌದು ಅವನಿನ್ನೂ ತನ್ನ ಪ್ರೇಮಲೋಕದಲ್ಲಿ
ರಾಜನಾಗಿ ಮೆರೆಯಿತ್ತಿದ್ದಾನೆ. ಅವನ ಪ್ರೇಮ ಇನ್ನೂ ಗಟ್ಟಿಯಾಗೆ ಇದೆ.
ದೇಹವೇ ಇಲ್ಲದ ಒಂದು ಆತ್ಮವನ್ನು ಅವನು ಪ್ರೀತಿಸುತ್ತಿದ್ದಾನೆ....
 ಪ್ರೀತಿಯಲ್ಲಿ ಅದೆಂತ ಆಕರ್ಷಣೆಯಿದೆ!

 "ಪ್ರೀತಿಯೇ ದೇವರು ಪ್ರೆಯಸಿಯೆ ದೇವತೆ"!!!ಅನ್ನುತ್ತಾನೆ ನಮ್ಮ ಸುದೀಪ. ಇವನು ನಿಜವಾಗಲೂ ಪ್ರೇಮ ಸಾಮ್ರಾಜ್ಯದ ಅದಿಪತಿಯೆ ಬಿಡಿ... ಅದಕ್ಕೆ ಪ್ರೀತಿ ಆತ್ಮ ಸಂಬಂಧ ಅನ್ನೋದು..

ಪ್ರೇಮ ಎಂದರೆ ಒಂದು ಹುಡುಗಾಟ ಎಂದು ತಿಳಿದಿರುವ ಈ ಕಾಲದ ಹುಡುಗರ ಪೈಕಿ  .. ಇಂತಹ ಒಬ್ಬ ಪ್ರೇಮಿ ಇದ್ದಾನೆ ಎಂದರೆ ಗ್ರೇಟ್ !      
ಇಂತಹ ಪ್ರೇಮಿಗೆ ನನ್ನದೊಂದು ಸಲಾಮ್.

ಅವನ ಪ್ರೀತಿ ಸದಾ ಹಸಿರಾಗಲಿ ಎಂಬುದೇ ನನ್ನ ಆಶಯ


ಧನ್ಯವಾದ
ಸೋಮೇಶ್ ಎನ್ ಗೌಡ

 

ಕಪ್ಪು ಚುಕ್ಕೆ


ಒಮ್ಮೊಮ್ಮೆ ಈಗೂ ಆಗುವುದು...ಎಲ್ಲರ ಬಾಳಲ್ಲೂ ಒಂದು ಕಪ್ಪು ಚುಕ್ಕೆ ಬಿದ್ದೆ ಬೀಳುವುದು 


ಹೌದು ನಾವು ಅಂದುಕೊಂಡಂತೆ ಜೀವನ ಸಾಗುವುದಿಲ್ಲ
ಅದರ ವೈಶಿಷ್ಟ್ಯತೆನೇ ಬೇರೆ...ಆಕಷ್ಮಿಕವಾಗಿ ನಡೆಯುವ ಘಟನೆಗಳು ಒಬ್ಬ ಮನುಷ್ಯನ ಬದುಕಿನ ಬಣ್ಣವನ್ನೇ ಬದಲಿಸುತ್ತದೆ.

ಅದಕ್ಕೆ ಇದನ್ನ ಜೀವನ ಅನ್ನೋದು..! ಈ ಬದುಕೇ ಒಂದು ..?

ನೇಗಿಲಪುರ ಎಂಬ ಊರಲ್ಲಿ ಶಾಂತಮ್ಮ ಎಂಬ ಮಹಿಳೆ ಇದ್ದಳು.....ಬಡವೆ,ಸ್ವಲ್ಪ ಜಿಪುಣಿ,
ಮುಂಗೋಪಿ...ಕಷ್ಟ ಅನ್ನೋದು ಇವಳ ಬೆನ್ನು ಬಿಟ್ಟು ಹೋಗಲಾರೆ ಅನ್ನುವಷ್ಟು ಅಂಟಿಕೊಂಡು ಬಿಟ್ಟಿದೆ...
ಮದುವೆಯಾದ 2ನೇ ವರ್ಷಕ್ಕೆ ಆಕೆಯ ಗಂಡ ಮರಣ ಹೊಂದಿರುತ್ತಾನೆ
ಗಂಡನ ಜೊತೆ ಸಂತೋಷದಿಂದ ಸಂಸಾರ ನಡೆಸಬೇಕಾದವಳು ಒಬ್ಬಂಟಿಯಾಗಿ ತನ್ನ ಮಗನ ಭವಿಷ್ಯದ ಜವಬ್ದಾರಿಯನ್ನು ಹೊತ್ತು ಕೂಲಿ ಮಾಡುತ್ತಾ ಜೀವನ ನಡೆಸುತ್ತಿರುತ್ತಾಳೆ....ಮಹೇಶ ಈಕೆಯ ಮಗ ..ಈತ ಕೂಡ ತಾಯಿಗೆ ತಕ್ಕ ಮಗನೆ ಬಿಡಿ....ಪಾತ್ರೆ ಬೆಳಗುವುದು,ಅಡುಗೆ ಮಾಡುವುದು,ಹೀಗೆ ತನ್ನ ಅಮ್ಮನಿಗೆ ಕೆಲಸದಲ್ಲಿ ಸಹಾಯ ಮಾಡುತ್ತಾ ಬೆಳೆಯುತ್ತಿರುತ್ತಾನೆ..ಇವನು ಅಮ್ಮನಿಗೆ ಸಹಾಯ ಮಾಡುವ ರೀತಿ ಹೇಗಿತ್ತೆಂದರೆ..ಇನ್ನೊಬ್ಬರಿಗೆ ಮಾದರಿಯಾಗುವಷ್ಟು..
ಹೀಗೆ ಎಲ್ಲರ ಮೆಚ್ಚುಗೆಯನ್ನ ಇವನು ಚಿಕ್ಕ ವಯಸ್ಸಿನಲ್ಲೇ ಸಂಪಾದಿಸಿರುತ್ತಾನೆ.....ಆದರೆ ಓದಿನಲ್ಲಿ ಮಾತ್ರ ಇವನು ಸ್ವಲ್ಪ ಹಿಂದೆ....ಹೇಗೋ SSLC ವರೆಗೂ ಬಂದೆ ಬಿಟ್ಟ ಆದರೆ SSLC ಯಲ್ಲಿ Fail ಆಗೋಗ್ತಾನೆ...ಇನ್ನೂ ವಿಧ್ಯಾಬ್ಯಾಸ ಮುಂದುವರಿಸಲು ಇವನಿಗೂ ಇಷ್ಟವಿರಲಿಲ್ಲ....ಓದಿಸಲು ಅಮ್ಮನಿಗೂ ಬಲ ಸಾಕಾಗಲಿಲ್ಲ....

ಮತ್ತೆ ಮುಂದೇನು ಮಾಡ್ತಾನೆ ಹೀಗೆ ಅಮ್ಮನ ಜೊತೆ ಮನೆಗೆಲಸ ಮಾಡ್ಕೊಂಡು ಇರ್ತಾನೆ ಅಂದುಕೊಂಡ್ರಾ....ದುಡಿಯುವ ಬಲ ಇವನಲ್ಲಿ ಇರುವಾಗ ಸುಮ್ಮನೇ ಮನೆಯಲಿ ಕೂರುವನೇ...ಅದಕ್ಕೆ ಊರಲ್ಲೇ ಇರುವ ಇಟ್ಟಿಗೆ ಫ್ಯಾಕ್ಟರೀಯಲ್ಲಿ ಕೂಲಿ ಕೆಲ್ಸಾ ಆರಂಭಿಸುತ್ತಾನೆ. ಓದಿಕೊಂಡು ,ಆಟವಾಡಿಕೊಂಡು ಇರಬೇಕಾದವನು...ದುಡಿಮೆಗೆ ಕೈ ಹಾಕಿರುತ್ತಾನೆ. ದೊಡ್ಡವರ ಸಹವಾಸ ದುಡ್ಡಿಗಾಗಿ ದುಡಿಯುವ ಕೆಲಸ...ಒಂಥರ ಎಲ್ಲಾ ಹೊಸದು, ಅಲ್ಲಿನ ಕಾರ್ಮಿಕರು ಮಾಡುವ ಎಲ್ಲ ಕೆಲಸಗಳನ್ನು ಅನುಕರಣೆ ಮಾಡುತ್ತಾ ಕಲಿಯುತ್ತಾನೆ...ಏನೇನ್ ಕಲ್ತಿರ್ತಾನೆ ಅಂದರೆ ಮದ್ಯಪಾನ....ವಯಸ್ಸಿಗೆ ಮೀರಿ ಮಾತನಾಡುವುದು..ಸಿಗರೇಟ್ ಸೇದುವುದು ಇವೆಲ್ಲಾ...ದೊಡ್ಡವರು ಅನಿಸಿಕೊಂಡ ಆ ಮನುಷ್ಯರು ಅವನಿಗೆ ಒಳ್ಳೆಯದನ್ನ ಕಲಿಸುವುದ ಬಿಟ್ಟು ಅವನನ್ನು ಇವನ ದಾರಿಗೆ ಎಳೆದುಕೊಂಡಿರುತ್ತಾರೆ....ಹೀಗೆ ಇವನು ಇಟ್ಟಿಗೆ ಕೆಲಸ...ಗಾರೆ ಕೆಲಸ ..ಎಲ್ಲಾ ಕೆಲಸಗಳನ್ನು ಮಾಡಿಕೊಂಡು ತನ್ನ ಜೀವನವನ್ನು ನಡೆಸುತ್ತಿರುತ್ತಾನೆ...ಇವನು ಮದ್ಯಪಾನ ಮಾಡುವುದು ಇವನ ಅಮ್ಮನಿಗೂ ಗೊತ್ತಿರುವುದಿಲ್ಲ ಅಷ್ಟೇನಾಗಿ ಯಾರಿಗೂ ತೋರಿಸಿಕೊಂಡಿರುವುದಿಲ್ಲ...

ಇವನಿಗೆ ಇಲ್ಲಿನ ಕೆಲಸ ಬೇಸತ್ತು ಹೋಗಿರುತ್ತದೆ ಅದಕ್ಕೆ ಬೆಂಗಳೂರಿಗೆ ಹೋಗುವ ನಿರ್ಧಾರ ಮಾಡುತ್ತಾನೆ..ಹಾಗೆಯೇ ಅವರ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಅವನ ಸಾಮರ್ಥ್ಯಕ್ಕೆ ಹೋಲುವ ಕೆಲಸಗಳನ್ನು ಬೆಂಗಳೂರಿನಲ್ಲಿ ಪ್ರಾರಂಬಿಸುತ್ತಾನೆ...ಒಂದು ರೀತಿ ಎಲ್ಲವನ್ನು ಮರೆತು ಹೊಸ ಬಾಳನ್ನೇ ನಡೆಸುತ್ತಾ ಇರುತ್ತಾನೆ...ಎಲ್ಲರ ದೃಷ್ಟಿಯಲ್ಲಿ ಒಳ್ಳೆಯ ಹುಡುಗನೇ ಹಾಗಿರುತ್ತಾನೆ....
ಹಬ್ಬದ ಸಮಯ ಎಲ್ಲ ಬಂದು ಬಾಂಧವರೂ ಸೇರಿ ಮಾಡುವ ಕಾರ್ಯ ...ಇವನು ತನ್ನ ಊರಿಗೆ ಹಬ್ಬ ಆಚರಿಸಲು ಬರುತ್ತಾನೆ,,.,ಹಳೆಯ ಗೆಳೆಯರು ತನ್ನ ಊರು ಅಂದು ಇವನ ಖುಷಿಗೆ ಮಿತಿಯೇ ಇರಲಿಲ್ಲ....ಮತ್ತೆ ಏನೋ ಸಿಕ್ಕಿದಂತಾಗಿತ್ತು....ಅದೇ ಖುಷಿಯಲ್ಲಿ ಎಣ್ಣೆ ಪಾರ್ಟಿನೂ ಶುರುವಾಯ್ತು ಚೆನ್ನಾಗಿ ಗಂಟಲವರೆಗೂ ತುಂಬಿಸಿಕೊಂಡ...ಅಂತೂ ಫುಲ್ಲ್ ಟೈಟ್ ಆದ.. ಬೀದಿಯಲ್ಲಿ ಹೋಗೋ ಬಾರೋರ್ನೆಲ್ಲಾ ಬಯ್ಯ ತೊಡಗಿದ..ಆ ರಾತ್ರಿ ಅಕ್ಕ ಪಕ್ಕದ ಮನೆಯವರಿಗೆ ನಿದ್ದೆಯೇ ಇಲ್ಲ.....ಅವರ ಅಮ್ಮನಂತೂ ರಾತ್ರಿಯೆಲ್ಲ ಕಣ್ಣೀರು ಸುರಿಸುತ್ತಿದ್ದರು..ಎಷ್ಟು ದಿನ ಅಂತ ಕಲಿತ ಚಟವನ್ನು ಮುಚ್ಚಿಕೊಂಡಿರಲು ಆಗುತ್ತದೆ ಹಾಗೆ ಇವನಿಗೆ ಈ ದಿನ ಕರಾಳ ದಿನ. ಅಂತೂ ಹೇಗೋ ರಾತ್ರಿ ಕಳೆಯಿತು

ಬೆಳಗ್ಗೆ ಮಹೇಶನಿಗೆ ಪೂಜ ಕಾರ್ಯಕ್ರಮ ನಿನ್ನೆ ರಾತ್ರಿ ಅವನ ಬೈಗುಳಕ್ಕೆ ಸಿಕ್ಕಿದ್ದವರೆಲ್ಲಾ...ಬೆಳಗ್ಗೆ ಇವನಿಗೆ ಶುರು ಮಾಡಿಕೊಂಡಿದ್ದರು,..ಇಷ್ಟು ದಿನ
ಕಾಪಾಡಿಕೊಂಡು ಬಂದಿದ್ದ ಮರ್ಯಾದೆಯನ್ನ ಒಂದೇ ರಾತ್ರಿಗೆ ಕಳೆದು ಕೊಂಡುಬಿಟ್ಟಿದ್ದ....ಅವರ ಅಮ್ಮ ಇವನ ಮೇಲೆ ಇಟ್ಟಿದ್ದ ನಂಬಿಕೆಯನ್ನೇ ಹಾಳು ಮಾಡಿಕೊಂಡಿದ್ದ.ಎಲ್ಲರೂ ಈ ವಯಸ್ಸಿಗೆ ಏನ್ ಬುದ್ದಿ ನೋಡು ಅಂತ ಬೈದು ಮಾತನಾಡಿಕೊಳ್ಳುತ್ತಿದ್ದರು..
ಈ ಅವಮಾನವಾದ ಮೇಲೆ ಜೀವನವೇ ಬೇಡ ಎನಿಸುವಷ್ಟು ಬೇಸರವಾಗಿತ್ತು....ಆತ್ಮಹತ್ಯೆಗೂ ಪ್ರಯತ್ನ ಪಟ್ಟ .ಆದರೆ ಅಮ್ಮನನ್ನ ಒಂಟಿ ಮಾಡಲು ಅವನಿಗೆ ಇಷ್ಟವಾಗಲಿಲ್ಲ,
ಅಮ್ಮನಿಗೋಸ್ಕರ ನಾದರೂ ಬದುಕಬೇಕೆಂದು ಮತ್ತೆ ಬೆಂಗಳೂರ ದಾರಿ ಹಿಡಿದ..ಆ ಒಂದು ಕಪ್ಪು ಚುಕ್ಕೆ ಅವನನ್ನು ಹೀಯಾಳಿಸುತ್ತಿದ್ದರು ಮತ್ತೆ ಏನಾದರೂ ಸಾದಿಸಬೇಕೆಂದೂ ಈಗ ಬೆಂಗಳೂರಲ್ಲಿ ಹೋರಾಟ ನಡೆಸುತ್ತಿದ್ದಾನೆ...ಆ ಕಪ್ಪು ಚುಕ್ಕೆಯನ್ನು ಅಳಿಸಿ ಹಾಕಲು ಪ್ರಯತ್ನ ಪಡುತ್ತಿದ್ದಾನೆ

ಸ್ನೇಹಿತರೆ..ಒಳ್ಳೆಯವನಾಗಲು ತುಂಬಾ ಸಾಹಸ ಮಾಡಬೇಕು ...ಆದರೆ ದುಷ್ಟ ಎನ್ನಿಸಿಕೊಳ್ಳಲು ಎರಡೇ ನಿಮಿಷ ಸಾಕು....ಆದ್ದರಿಂದ ನಿಮ್ಮ ಬುದ್ದಿಗೆ ಎಂದೂ ಮಂಕು ಬಡಿಯದಿರಲಿ.ಅರಿತು ಜೀವನ ನಡೆಸಿರಿ.

ಈ ಬದುಕೇ ಒಂದು ?

ಧನ್ಯವಾದ
ಸೋಮೇಶ್ ಗೌಡ Somesh N Gowda
ಮಾಕಳಿ
ಚನ್ನಪಟ್ಟಣ

Love Story ಆಗುತ್ತೆ Crime story


ಇದು ಶಕ್ಕು ಸುಕ್ಕು ಕ್ರೈಮ್ ಸ್ಟೋರಿ ನೀವು ಓದಲೇ ಬೇಕು ಒಂದ್ ಸಾರಿ


ಏನಪ್ಪಾ....ಇದು ಹೆಸರೇ ಒಂಥರ ವಿಚಿತ್ರವಾಗಿದೆ
ಪ್ರೀತಿ ಮಾಡೋದ್ ಬಿಟ್ಟು ಇವರೆಂತಾ ಕ್ರೈಂ ಮಾಡ್ತಾರೆ ,.ಏನಿರಬಹುದು
ಅಯ್ಯೋ ಎಷ್ಟು ಗೊಂದಲನಪ್ಪ ನಿಮ್ಮ ತಲೆಯಲ್ಲಿ
ಮೊದಲು ಕಥೆ ಓದಿ..ಆಮೇಲೆ ನಿಮ್ಗೆ ಗೊತ್ತಾಗುತ್ತೆ..............!!!

ಏನಂದ್ರೆ......................???

ತಿಮ್ಮ ತಿಮ್ಮ ನಮ್ಮ ಕಾಲೇಜ್ನಲ್ಲಿ ಇವನೇ ಸಿಂಹ
ತಿಮ್ಮ ತಿಮ್ಮ ನಮ್ಮ ಕಾಲೇಜ್ನಲ್ಲಿ ಇವನೇ ಸಿಂಹ
ಸಿಕ್ತೋರ್ಗೆಲ್ಲಾ ಕೊಡಕ್ಕೆ ಹೋಗ್ತಾನೇ ಉಮ್ಮ
ತಿರುಗಿ ಸರಿಯಾಗಿ ಕೊಟ್ರೆ ಇವನು ನಮ್ಮ "ತಮ್ಮ" ತಮ್ಮ"ತಮ್ಮ"

ಹೀಗೆ ಸಾಂಗ್ ಹಾಡ್ತಾ 4 ಜನ ಹುಡುಗರು ಒಬ್ಬ ದಡಿಯನ ಹೋತ್ಕೊಂಡ್ ಕಾಲೇಜ್ ಕ್ಯಾಂಪಾಸ್ನಲ್ಲಿ ಕುಣಿತ ಇರ್ತಾರೆ.....
ಆಗ ಹೊಸದಾಗಿ ಕಾಲೇಜ್ ಸೇರಿರೋ ನಮ್ ಹೀರೊ ಬರ್ತಾನೆ...
ಈ ದಡಿಯ ಅವ್ನ ಕಾರಿತಾನೆ ಹೇಗೆ ಗೊತ್ತಾ.....?
“ಲೇ ಬಾರೋ ಇಲ್ಲಿ, ಹೊಸಬನ ,reply ಇಲ್ಲ
ಎಲ್ಲಿಂದ ಬರೋದು...reply ಇಲ್ಲ ..ಏನೋ ಗುರಾಯಿಸ್ತೀಯ........ನೋಡು ಈ ಕಾಲೇಜ್ನಲ್ಲಿ ನಾನೇ ಸಿಂಹ....ನಾನಿರೊವರ್ಗೂ ನೀವೆಲ್ಲಾ ತಮ್ಮಂದಿರ ತರಾನೆ ಇರ್ಬೇಕು...ಅಣ್ಣ ಆಗೋಕೆ ಹೋದ್ರೆ..
ಅಮ್ಮ ಅಂತ ಕಿರುಚಬೇಕಾಗುತ್ತೆ...ಹುಷಾರ್...
ಈಗ ಹೀರೊ Time..ಅಮ್ಮಾಆಆಆಅ ನಾನ್ ಈವಾಗ್ಲೇ ಕಿರ್ಚ್ಬಿಟ್ಟೇ.ನನ್ ಮಗ್ನೆ ನೀನೆ ಇನ್ಮೇಲೆ ನನ್ ತಮ್ಮನಾಗಿ ಇರು ಇಲ್ಲ ಅಂದ್ರೆ ನೀನೆ ಕಿರುಚಬೇಕಾಗುತ್ತೆ
ಅಂತ ಹೇಳಿ ಹೀರೊ ಮುಂದೆ ಹೋಗ್‌ಬೇಕಾದ್ರೆ....
ಇವನು ...ಹೇ ಹೇ ಹೇ ಏನು
ಏನು ನಾನು......ಟಪ್ ಟಪ್ ಹ ಹ ಬಿತ್ತು ಕೆನ್ನೆಗೆ ಸರಿಯಾಗಿ..
ದಡಿಯ ಗಪ್-ಚಿಪ್...ಹೊಡೆದಿರೋ ಏಟಿಗೆ ಎದ್ದು ಅಣ್ಣ ನಿನ್ನ ಹೆಸರೇನಣ್ಣ ಅಂತಾನೆ......
ಹೆಸರಾ..... "ಸುಧಾಕರ್"
ಹ್ಮ್ ಅಂತೂ ನಮ್ ಹೀರೊ ಪರಿಚಯ ಆಯ್ತು...
ಇವನೇ ನೋಡ್ರಪ್ಪ ನಮ್ ಹೀರೊ ತುಂಬಾ ಒರಟ..ಹುಡ್ಗೀರ್ ಅಂದ್ರೇನೆ ಆಗಲ್ಲ....ಒಂಥರ ವಿಚಿತ್ರಿ...
ಆ ದಡಿಯಾ ಅಂತೂ ಏಟು ತಿಂದ ಮೇಲೆ...ಇವನ ಜೊತೇನೇ Dutyಗೆ Join ಆಗಿಬಿಡ್ತಾನೆ.....ಹ್ಮ್ ಇನ್ನೂ ಈ ಕಾಲೇಜ್ನಲ್ಲಿ ಸುಧಾಕರ್ ಗ್ಯಾಂಗ್ ರೆಡಿ...
ಸ್ನೇಹಿತರು ಅಂದ್ರೆ ತುಂಬಾ ಇಷ್ಟ..ಅವರಿಗೂ ಅಷ್ಟೇ ಇವನಂದ್ರೆ ಅಂದ್ರೆ
ಅಷ್ಟೇ ಪ್ರೀತಿ..ಆದ್ರೆ ಹುಡ್ಗೀರ್ ಜೊತೆ ಮಾತ್ರ ಜಾಸ್ತಿ ಸೇರಲ್ಲ..ಮಾತಡಲ್ಲ.......
ಯಾಕೆ ಅಂತ ನಂಗೂ ಗೊತ್ತಿಲ್ಲ....
ಹೀಗೆ ತರ್ಲೆ,.ಪೋಲಿ ಆಟ..ಕಿತ್ತಾಟ...ಎಲ್ಲದರ ಜೊತೆಗೆ ಇವರ ಕಾಲೇಜ್ ಜೀವನ ನಡೀತಾ ಇರುತ್ತೆ....
ಅಂತೂ ಇಂತು ಒಂದ್ ವರ್ಷ ಕಳೆದೆ ಹೋಗುತ್ತೆ.....
ಸುಧಾಕರ ಈಗ 2nd Year ಡಿಗ್ರೀ ಸ್ಟೂಡೆಂಟ್..ಹೀಗೆ ಕಾಲೇಜ್ನಲ್ಲಿ ಪಾಠ ಕೇಳ್ತಾ ಇರ್ತಾನೆ ಯಾಕೋ ತುಂಬಾ ಬೋರ್ ಆಗುತ್ತೆ..
ಛೇ ಯಾಕೋ ಇವತ್ತು ಒಳ್ಳೇ ಮೂಡೆ ಇಲ್ವಲ್ಲ ಅಂತ ಎದ್ದು ಹೊರ ಹೋಗುತ್ತಾನೆ......
ಎದ್ದು ಬಾಗಿಲು ದಾಟಿ.. "ಮೈಮರೆತು" ಮೆಟ್ಟಿಲು ಗಳನ್ನು ಇಳಿಯುತ್ತಿರುತ್ತಾನೆ…
ಏನಪ್ಪಾ ಅದು ಮೈ ಮರೆಯುವಂತ ವಿಷಯ...ಇನ್ನೇನಿರುತ್ತೆ ಕಾಲೇಜ್ ಹುಡ್ಗ ಮೈಮರೆಯುವಂತದ್ದು..
ಹೊಸದಾಗಿ ಕಾಲೇಜ್ ಸೇರಿ..ಮೊದಲ ದಿನದ ಡಿಗ್ರೀ ಕಾಲೇಜ್ ಮೆಟ್ಟಿಲು ಹತ್ತುತ್ತಾ ಇರ್ತಾಳೆ
ಹಾಲ್ಗೆನ್ನೆ ಚೆಲುವೆ,
ಸುಂದರ ಕೋಮಲೆ,
ಇವನ ಮನಸ್ಸನ್ನ ಗೆದ್ದ ನಲ್ಲೆ.....
ಇವಳೇ ಶಕುಂತಲೆ....!!!
ಹ್ಮ್ ಯಾರಿಗೂ ಸೋಲದವ ಇವನಿಗಿಂತ ಒಂದು ವರುಷ ಚಿಕ್ಕವಳಿಗೆ ಸೋಲಬೇಕಾ..ಇರ್ಲಿ ಬಿಡಿ ಅದೆ ಅಲ್ವಾ ಜೀವನ..!!!
ಹ್ಮ್ ಇನ್ನ ಇವನ ಎಲ್ಲಾಪ್ಪಾ ಹಿಡಿಯೋಕೆ ಆಗುತ್ತೆ ಇವನು ಆಗ್ಲೇ ಭಾವನಾತ್ಮಕ ಲೋಕಕ್ಕೆ Entry ಕೊಟ್ಟಿರ್ತಾನೆ....

ಅವಳು ಬಂದ ಮೇಲೆ ಇವನಿಗೆ ಏನೇನ್ ಆಗ್ತಾ ಇದೆ ಅಂತ ಹಾಡಿನ ರೂಪದಲ್ಲೇ ಹೇಳ್ತಾನೇ ನೋಡ್ರಪ್ಪ...Sorry ಕೇಳ್ರಾಪ್ಪ....

ನನ್ನ ಕಥೆಗೆ ನನ್ನದೇ ಹಾಡು...ನೀನು ಒಮ್ಮೆ ಕೇಳಿ ನೋಡು

ಪ್ರೇಮಿ ನಾನಲ್ಲ
ನಂಗೆ ಪ್ರೀತಿ ಮಾಡೋಕೆ ಬರಲ್ಲ
ಏನೋ ಗೊತ್ತಿಲ್ಲ
ನೀನು ಬಂದ ಮೇಲೆ ನಂಗೆ ಹೀಗೆಲ್ಲಾ..
ಒಂಥರ ಒಂಥರ
ಆಗುತ್ತಿದೆ ಏನೋ ಒಳಗೆ ಒಳಗೆ
ತರ ತರ ತರ ತರ
ಬಯಕೆಗಳು ನನ್ನ ಎದೆಯ ಒಳಗೆ

ಇದೇನಾ ಪ್ರೀತಿಯು ಇದೇನ್ ಇದರ ರೀತಿಯೂ
ಇದೇನಾ ಪ್ರೀತಿಯು ಇದೇನ್ ಇದರ ರೀತಿಯೂ

ಕನಸೊಳಗು ನೀನೆ ಬರುವೆ
ಎದೆಯ ಮೇಲೆ ನಡೆದೆ ಬಿಡುವೆ
ನನ್ನೊಳಗೆ ಏಕೆ ಕೂತು
ನನ್ನ ಹೀಗೆ… ಕಾಡುವೆ ..............
ಯಾರೇ ನೀನು ಹೇಳೆ....ಹೆಹೆಹೆ ಹೆ.

ಪ್ರೇಮಿ ನಾನಲ್ಲ
ನಂಗೆ ಪ್ರೀತಿ ಮಾಡೋಕೆ ಬರಲ್ಲ
ಏನೋ ಗೊತ್ತಿಲ್ಲ
ನೀನು ಬಂದ ಮೇಲೆ ನಂಗೆ ಹೀಗೆಲ್ಲ,..

ನಿದ್ದೇನೂ ಬರಲ್ಲ...ಕೂರಕ್ಕೂ ಆಗಲ್ಲ
ಎದ್ದೆದ್ದು ನಿಂತರೂ ನಿನ್ನದೆ ನೆನಪೆಲ್ಲಾ
ನನ್ನನ್ನು ನೀನು ಮೌನಿ ಮಾಡಿ ಏಕೆ ಹೀಗೆ
ಸುಮ್ಮನೆ ನಿಂತೆ ಮಾತಾಡೆ ನನ್ನ ಚೆಲುವೆಯೇ.....
ನಿನ್ನ ಪ್ರೇಮದಾಸ ನಾನು...............ಊಊಊಊ..

ಪ್ರೇಮಿ ನಾನಲ್ಲ
ನಂಗೆ ಪ್ರೀತಿ ಮಾಡೋಕೆ ಬರೋಲ್ಲ
ಏನೋ ಗೊತ್ತಿಲ್ಲ
ನೀನು ಬಂದ ಮೇಲೆ ನಂಗೆ ಹೀಗೆಲ್ಲಾ.....hmm m mm


ಅಂತೂ ಇಂತು ಸುಧಾಕರನ ತಲೆ ಕೆಡಿಸಿದಳು ಶಕುಂತಲೆ..!!!
ಹುಡ್ಗೀರಿಂದ ತುಂಬಾ ದೂರವಾಗಿದ್ದ ಇವನು ಇನ್ಮೇಲೆ ತುಂಬಾ ಹತ್ರ ಆಗೊಗ್ತನೆ ಬಿಡಿ....
ಅವಳ ನೋಡಿದಮೇಲೆ ಇವನಿಗೆ ಏನೇನ್ ಆಗ್ತಾ ಇದೆ ಅಂತ ಹಾಡಿನ ಮೂಲಕ ಹೇಲ್ಬಿಟ್ಟ ಸರಿ...ಆದರೆ ಆ ಕಡೆಯಿಂದ ಏನು ಪ್ರತಿಕ್ರಿಯೆ ಬರಲಿಲ್ವೆ..ಅವಳ ಪಾಡಿಗೆ ಅವಳು ಅವಳ ಕೆಲಸ ನೋಡ್ಕೊಂಡ್ ಬಿಡ್ತಾಳೆ. ಆದರೂ ಬಿಡುವುದಿಲ್ಲ ಇವನು, ಒಂದ್ ಸರಿ ಇಷ್ಟವಾದ ಮೇಲೆ ಕಷ್ಟ ಪಟ್ಟಾದರೂ ಪಡೆದುಕೊಳ್ಳಬೇಕು ಅಂತ....
ಅವಳ ಮನಸ್ಸನ್ನ ಗೆಲ್ಲಲು ಪ್ರಯೋಗ ಮಾಡ್ತಾ ಇರ್ತಾನೆ...ಕೊನೆಗೂ ಒಂದ್ ದಿನ ಗ್ರೀನ್ ಸಿಗ್ನಲ್ ಸಿಕ್ಕೇ ಬಿಡುತ್ತೆ.....ಏನಪ್ಪಾ ಇಷ್ಟೆಲ್ಲಾ ಕಷ್ಟ ಪಡ್ಬೇಕಾಯ್ತ ಇವನು ಒಂದು ಹುಡ್ಗಿ ಮನಸ್ಸನ್ನ ಗೆಲ್ಲಲು...ಹ್ಮ್ ಹ್ಮ್ ಇಲ್ಲ ಅವಳು ಕೂಡ ಇವನನ್ನ ಯಾವತ್ ನೋಡಿರ್ತಾಳೆ ಆಗ್ಲೇ ಲವ್ನಲ್ಲಿ ಬಿದ್ದಿರ್ತಾಳೆ ಆದರೆ ಹೇಳಿಕೊಳ್ಳಲ್ಲ ಸತಾಯಿಸ್ತಾಳೆ....ಈ ಹುಡ್ಗ್ ಮುಂಡೇದು ಆತುರ ಪಟ್ಟು ಸೋತೆ ಬಿಡ್ತಾನೆ ....ಅವಳ ಸೌಂದರ್ಯಕ್ಕೆ  !!.ಅಂತೂ ಒಪ್ಪಿಗೆ ಕೊಟ್ಟೇಬಿಟ್ಟಳು,ನಮ್ ಹುಡುಗನ ಮೆಚ್ಚಿ ಬಿಟ್ಟಳು..
ಏನ್ ಇಬ್ಬರು ಒಪ್ಪಿಕೊಂಡ್ ಮಾತ್ರಕ್ಕೆ ಲವ್ ಮುಂದುವರೆಯುತ್ತಾ....ಕಾಲು
ಎಳೆಯೋಕೆ ಅಂತ ಯಾರಾದರೂ ಇರ್ಬೇಕಲ್ವಾ...ಆಗ್ಲೇ ಇವನಿಗೊಬ್ಬ ದೊಡ್ಡ ಶತ್ರು ಹುಟ್ಟಿಕೊಂಡಿರ್ತಾನೆ…....ಅವನೇ ಮನೋಹರ...ಇವನ್ಯಾರು ಗೊತ್ತೇ...
ಶಕುಂತಲನ P U C ಇಂದ ಹುಚ್ಚನಂತೆ ಪ್ರೀತಿಸುತ್ತಿರುವ  ಪಾಗಲ್ ಪ್ರೇಮಿ...!!! ಎರಡು ವರ್ಷದಿಂದ ಇವನೇ ಹೇಳಕ್ಕೆ ಆಗ್ದೇ ಇರೋ
ಮೂರೇ ಮೂರು ಪದನ ಇವನ್ನ್ಯಾರೋ 2 ದಿನಕ್ಕೆ ಹೇಳಿ ಒಪ್ಪಿಸ್ಬಿಟ್ರೆ ಸುಮ್ನೇ ಇರ್ತಾನ. .ಮೊದಲೇ ಇವ ಕೂಡ ಇದೇ ಕಾಲೇಜ್ಗೆ ಬಂದು ಸೇರಿರ್ತಾನೆ
ಈಗಲಾದರೂ ಹೇಳೋಣ ಅಂತ, ಅಷ್ಟ್ರಲ್ಲಿ ಕಲ್ಲು ಹೊಡೆದು ಬಿಡುತ್ತಾನೆ ನೋಡಿ ನಮ್ ಹೀರೊ.....ಆದ್ರೂ ಸುಮ್ನೇ ಇರಲ್ಲ ಈ ಮನೋಹರ...ಅಷ್ಟು ದಿನದಿಂದ ಹೇಳಕ್ಕೆ ಆಗ್ದೇ ಇರೋದನ್ನ ಈಗ ಹುಚ್ಚನಂತೆ  ದಿನಕ್ಕೆ ನೂರು ಸರಿ ಹೇಳ್ತಾನೇ..ಆದರೆ ಅವಳಿಗೆ ಇವನು ಹುಚ್ಚು ಹುಚ್ಚನಂತೆ ಆಡೊದನ್ನ ನೋಡಿ
ಪಾಪ ಅನ್ಸುತ್ತೆ ಹೊರತು ಲವ್ ಅಂತೂ ಹುಟ್ಟಲ್ಲ.......ಇವನಂತೂ ಸುಮ್ನೇ ಇರಲ್ಲ ಅವರೂ ನೆಮ್ಮದಿಯಾಗಿ ಇರಕ್ಕೆ ಬಿಡಲ್ಲ....
ಯಪ್ಪ ಹೇಗೆ ಆಗಿರ್ತಾನೆ ಅಂದ್ರೆ ಹ್ಮ್ ಹ್ಮ್ ಹೇಳಕ್ಕೆ ಆಗಲ್ಲ ಅವನ ಪರಿಸ್ಥಿತಿ....ಪ್ರೀತೀಲಿ ಹೀಗೆಲ್ಲಾ ಆಗುತ್ತಾ ಛೇ......?
ದಿನ ಸುಧಾಕರನಿಗೂ ಮತ್ತು ಮನೋಹರನಿಗೂ  ಸಂಘರ್ಷ ನಡೀತಾನೇ ಇರುತ್ತೆ..ಗೆಲ್ಲೋದ್ ಮಾತ್ರ ಸುಧಾಕರನೆ ಇಡೀ ಕಾಲೇಜ್
ಇವನಿಗೆ ಬೆಂಬಲ ಕೊಡುವಾಗ ಈ ಪಾಗಲ್ ಒಬ್ನೆ ಏನ್ ಮಾಡಕ್ಕೆ ಆಗುತ್ತೆ ಹೇಳಿ..ಏನೇನೂ ಆಗಲ್ಲ ಇವನಿಂದ….
ಆ ಹುಡುಗಿಯಂತೂ ಇವನನ್ನು ಎಂತಹ ಪರಿಸ್ತಿತಿಯಲ್ಲೂ ಒಪ್ಪಲ್ಲ ಬಿಡಿ ಹಾಗೆ
ಇರ್ತಾನೆ ಆ ಮನೋಹರ ....ಸುಧಾಕರನನ್ನು ಬಿಟ್ಟು ಬದುಕಾಲರೆ ಎನ್ನುವಷ್ಟು ಈ ಇಬ್ಬರ ಪ್ರೀತಿ ಬೆಳೆದು ಹೋಗಿರುತ್ತೆ..!!!
ಏನೇ ಮಾಡಿದರು ಗೆಲುವು ಮಾತ್ರ ಮನೋಹರನಿಗೆ ದಕ್ಕಲ್ಲ..
ಯಾವಾಗ ಜಯ ನನ್ನದಾಗಲ್ಲ ಅಂತ ಗೊತ್ತಾಗುತ್ತೋ..ಆಗ ಒಂಟಿಯಾಗಿ ಹೋರಾಡೊದನ್ನ ಬಿಟ್ಟು ಅವನದೇ ಆದ ಒಂದು ಸೈನ್ಯ ಕಟ್ಟೆ ಬಿಡ್ತಾನೆ....ತುಂಬಾ ಬಡವ ಆದರೂ ಪ್ರೀತಿ ಮಾಯೆ ಇವನನ್ನ ಹೀಗೆಲ್ಲಾ ಮಾಡಿರುತ್ತೆ...ಹೊಸ ಹೊಸ ಕ್ರಿಮಿನಲ್ ಪ್ಲಾನ್ ರೆಡಿ ಮಾಡ್ಕೊಂಡ್ ಸುಧಾಕರನ ಮೇಲೆ ಪ್ರಯೋಗ ಮಾಡೋದೇ ಇವನ ಕೆಲಸ..
ಕಾಲೇಜ್ ಗೆ ಏಕೆ ಬರ್ತಾ ಇದ್ದೀನಿ
ಅನ್ನೋದನ್ನೇ ಮರೆತ್ತಿದ್ದಾನೆ ಅಂದ್ರೆ ಇವನು ಇನ್ನ್ಯಾವ ಮಟ್ಟಿಗೆ ಆಗಿರ್ಬೇಕು ಯೋಚನೆ ಮಾಡಿ..ಇವನ ಈ ರೀತಿಯ ವರ್ತನೆಯಿಂದಾಗಿ ಕಾಲೇಜ್ನ ನೆಮ್ಮದಿಯ ಹಾಳಾಗಿರುತ್ತೆ..
ಆದ್ದರಿಂದ ಕಾಲೇಜ್ ಆಡಳಿತ ಮಂಡಳಿಯವರು ಇವನನ್ನ ಕಾಲೇಜ್ ನಿಂದ ತೆಗೆದು ಹಾಕ್ತಾರೆ.. ಛೇ ಛೇ ಇತ್ತ ಪ್ರೀತಿಸಿದ ಪ್ರಿಯತಮೆಯಂತೂ ಸಿಗಲಿಲ್ಲ...ಒಂದು ಒಳ್ಳೇ ಜೀವನವನ್ನು ರೂಪಿಸಿ ಕೊಳ್ಳಲು ಆಗಲಿಲ್ಲ.. ಏಟು ತಿಂದ ಹಾವಿನಂತೆ ದ್ವೇಷ ಕಾಡುವುದನ್ನ ಮಾತ್ರ ಬಿಡಲಿಲ್ಲ....ಇನ್ನೂ ಇವನ ಗುರಿ ಏನೇ ಇದ್ದರು ಅವರನ್ನ ಬೇರೆ ಮಾಡುವುದು ಇಲ್ಲ, ಇವನ ಈ ಸ್ಥಿತಿಗೆ
ಕಾರಣವಾದ ಅವ್ರನ್ನೇ ಸಾಯಿಸುವುದು..ಇಂತಾ ಒಂದು ದೊಡ್ಡ ತೀರ್ಮಾನಕ್ಕೆ ಬಂದು ಬಿಡುತ್ತಾನೆ ಮನೋಹರ..ದಿನ ದಿನ ಕಳೆದಂತೆಲ್ಲಾ ಇವನು ದೊಡ್ಡ ಕ್ರಿಮಿನಲ್ ಹಾಗಿ ಬೆಳೆದು ಬಿಟ್ಟಿರ್ತಾನೆ .ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುವಷ್ಟು..ಇವನದೊಂದ್ ದೊಡ್ಡ ದಂಡೆ ಇರುತ್ತೆ...
ಇವನು ಬೆಳೆದು ಬೆಳೆದಂಗೆಲ್ಲಾ ಅವರ ಮೇಲೆ ಕತ್ತಿ ಮಸೆಯುತ್ತಲೇ ಇರುತ್ತಾನೆ. ಒಂದು ದಿನ ಸುಧಾಕರ್
ಮತ್ತು ಶಕುಂತಲ ಕಾಲೇಜ್ ಗೆ ಹೋಗ್ತಾ ಇರ್ತಾರೆ ಮಧ್ಯ ಒಂದು ದೇವಸ್ತಾನ ಸಿಗುತ್ತೆ ಹಾಗೆ ದೇವರಿಗೆ ನಮಸ್ಕಾರ ಮಾಡಿ ಹೊರಗಡೆ ಬಂದು ಬೈಕ್ ಹತ್ತುವಷ್ಟರಲ್ಲಿ ದೇವಸ್ತಾನದ ಮುಂದೆ ಇರುವ ಬಯಲೊಳಗೆ 10 ರಿಂದ 15 ಕಾರುಗಳು ಸರ್ರನೇ ಬಂದು ನಿಲ್ಲುತ್ತವೆ......ಮನೋಹರ ಹಸಿದ ಹೆಬ್ಬುಲಿಯಂತೆ ಕಾರಿಂದ ಇಳಿದು ಸುಧಾಕರನ ಮೇಲೆ
ಎಗಾರುತ್ತಾನೆ....ಆಗ ಆಗ ಸುಧಾಕರನಿಗೂ ಮತ್ತು ಮನೋಹರನ ಗುಂಪಿನೊಂದಿಗೂ ಒಂದು ದೊಡ್ಡ ಯುದ್ದ ಜರುಗುತ್ತದೆ...ಇನ್ನೇನು ನಮ್ ಹೀರೊ ಗೆಲ್ಲ ಬೇಕು ಎನ್ನುವಷ್ಟರಲ್ಲಿ.... ಮನೋಹರ ಸುಧಾಕರನ ಬೆನ್ನಿಗೆ ಚೂರಿ ಹಾಕೇ ಬಿಡ್ತಾನೆ. ಆಮೇಲೆ 10 ರಿಂದ 15 ಬಾರಿ ಚುಚ್ಚಿ ಎಳೆಯುತ್ತಾರೆ....ಇನ್ನೂ ಇವರೊಂದಿಗೆ ಅವನು ಹೋರಾಡಲು ಸಾದ್ಯವಿಲ್ಲ.....ಆದರೂ ಆಗ ಅವನಿಗೆ ನೆತ್ತಿಗೇರಿದ್ದ ಕೋಪಕ್ಕೆ ಮನೋಹರ ತನ್ನ ಒಂದು ಕೈ ಕಳೆದುಕೊಳ್ಳುತ್ತಾನೆ.....ಇತ್ತ ಸುಧಾಕರ ತನ್ನ ಪ್ರಾಣವನ್ನು ದೇವಿಯ ಸನ್ನಿದಿಯಲ್ಲಿ ಅರ್ಪಿಸುತ್ತಾನೆ...ಏನಪ್ಪಾ ಹೀರೊ ಸತ್ತೆ ಹೋದ.
ಹೀರೊಹಿನ್ ಎಲ್ಲಿ ಅಂತ ಯೋಚಿಸ್ತಾ ಇದ್ದೀರ.... ಅವಳು ನೆಲ ಸುಧಾಕರ್ ನೆಲಕಚ್ಚಿಡೊಡನೆ ಸುಧಾಕರ್ರ್ರ್ ಎಂದು ಚೀರುತ್ತಾ ಓಡಿ ಬರ ಬರುತ್ತಿದಂಗೆ ಮನೋಹರ್ ತುಟಿಯನ್ನು  ಕಚ್ಚುತ್ತಾ ಮದ ಹೇರಿದ ರಾಕ್ಷಸನಂತೆ ಅವಳ ಕತ್ತನ್ನು ಹಾರಿಸೇ ಬಿಡ್ತಾನೆ... ಪ್ರೀತಿಸಿದ ತಪ್ಪಿಗೆ ಇಂತ ನರಹಂತಕನಿಗೆ ಅವರು ಬಲಿಯಾಗುತ್ತಾರೆ............ಪ್ರೀತಿಸಿ ಸುಖವಾಗಿ ಬಾಳ ನಡೆಸಬೇಕಾದವರು..ಎಲ್ಲಾ ನ್ಯೂಸ್
ಚ್ಯಾನೆಲ್ ನಲ್ಲೂ ಕ್ರೈಮ್ ಸ್ಟೋರಿಯ ಪಾತ್ರದಾರಿಗಳಾಗಿ ಬರ್ತಾರೆ.....ಅಂತೂ ಕ್ರೈಮ್ ಸ್ಟೋರಿ ಸುದ್ದಿಯಾಗಿ ಹೋಗ್ತಾರೆ....
(ಒಳ್ಳೆಯ ಜೀವನವನ್ನ ಕಟ್ಟಿಕೊಳ್ಳಬೇಕಾದರೂ ಇಂದು ಕೊಲೆಯಾಗಿ ಬಿದ್ದಿದ್ದಾರೆ..ತಂದೆ ತಾಯಿಗಳಿಗೆ ಕೊನೆಗಾಲದಲ್ಲಿ ನೇರವಾಗಬೇಕಾದ ಮಕ್ಕಳೇ ಹೀಗೆ ಆದರೆ ಹೇಗೆ...ಪ್ರೀತಿಯಲ್ಲಿ ಹೀಗೆಲ್ಲಾ ಆಗುತ್ತಾ....!!!. ಕೊನೆಗೆ ನಮ್ಮಲ್ಲಿ ಮೂಡುವ ಪ್ರಶ್ನೆ...ಈ ಪ್ರೀತಿ, ಈ ಜಂಜಾಟ,ಈ ನೋವು ಇದೆಲ್ಲಾ ಬೇಕಾ...????
(ನೋಡಿ ಸ್ನೇಹಿತರೆ ಇಲ್ಲಿ ಸುಧಾಕರನಿಗೆ ಇಡೀ ಕಾಲೇಜ್ ಬೆಂಬಲವೆ ಇದ್ರು... ಇಂದು ಕೆಟ್ಟ ಹುಳು ಅವನ ಜೀವನವನ್ನೇ ಹಾಳು ಮಾಡಿ ಬಿಡುತ್ತೆ..
ಪ್ರೀತಿಯಲ್ಲೇ ಕಾಲೆಳೆಯುವವರು ಇರುವಾಗ ....ಇನ್ನೂ ಜೀವನ ಎಂಬ ಮಹಾಯುದ್ದಾದಲ್ಲಿ ಕಾಲೆಳೆಯುವವರು ಎಷ್ಟಿರಬೇಡ......?
ನಮನ್ನು ಪ್ರೀತಿಸುವವರು ಎಷ್ಟೇ ಇದ್ರು  ನಮಗೆ ಒಬ್ಬ ದ್ವೇಷಿ ಇದ್ದರೆ ಅವನಿಂದ ಕೆಡುಕಾಗುವುದು ಖಂಡಿತ...
ಆದ್ದರಿಂದ ಅಂತಹ ಕೆಟ್ಟಹುಳುವಿನಿಂದ ದೂರ ಇರಲು ಬಯಸೋಣ..ಇಲ್ಲ ಅದನ್ನೇ ದೂರ ತಳ್ಳೊಣ.....ಹೋದಲೆಲ್ಲಾ ಬಂದು ಕಾಡಿದರೆ ಅಂತ ಒಂದು ಕೆಟ್ಟ ಹುಳುವನ್ನು ಹೊಸಕಿ ಹಾಕುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಭಾವನೆ.|
ಧನ್ಯವಾದ
ಸೋಮೇಶ್ ಗೌಡ

ಕುತೂಹಲಕಾರಿ ಯುವಕ


ಅಪ್ಪ ನಂಜುಂಡೇಶ್ವರ ವೆಂಕಟೇಶ್ವರ
ಸಿದ್ದಪ್ಪಾಜಿ ಮಂಟೇಸ್ವಾಮಿ
ಅಮ್ಮ ಹಿರಿಯಮ್ಮ ಮುತ್ತಲಮ್ಮ
ಚಾಮುಂಡೇಶ್ವರಿ...ಎಲ್ಲರನ್ನೂ ಕಾಪಾಡು ತಾಯೇ...


ಹೀಗೆ ದಿನವೂ ಮಡಿವಂತನಾಗಿ ನಿಶ್ಕಲ ಮನಸ್ಸಿನ್ನಿಂದ ಎಲ್ಲರೂ ಕ್ಷೇಮವಾಗಿರಲೆಂದು ದೇವರ ಪೂಜೆ ಮುಗಿಸಿ ನಂತರ ಕೆಲಸ ಶುರು ಮಾಡುತ್ತಾನೆ ಈ ನಮ್ಮ ಶಾಂತವೀರಪ್ಪ...ಹೆಸರಿಗೆ ತಕ್ಕಂತೆ ಶಾಂತಿಯಿಂದ ಬಾಳಲು ಬಲ್ಲ,ವೀರಾವೇಶದಿಂದ ಹೋರಾಡಲು ಬಲ್ಲ,ವಯಸ್ಸು 56..ಗಂಡನೇ ದೈವ ಮಕ್ಕಳೇ ಜೀವ ಎಂದು ಜೀವನ ಸಾಗಿಸುತ್ತಿರುವ ಸದ್ಗೃಹಿಣಿ ಸರೋಜ ಇವನ ಹೆಂಡತಿ. ಹಹ ಇವರಿಗೆ ಗಟ್ಟಿಮುಟ್ಟಾದ ಚಿಗುರು ಮೀಸೆಯ ಚೆಲುವ ಚಂದ್ರಕಾಂತನೆಂಬ ಮಗನೂ ಹಾಗೂ ಮೃದು ಮನಸ್ಸಿನ ಎಲ್ಲದಕ್ಕೂ ಮುನಿಸಿಕೊಳ್ಳುವ ಮಾನಸ ಎಂಬ ಮುತ್ತಿನಂತ ಮಗಳು. ಈ ಇಬ್ಬರು ಇವರ ಮುದ್ದು ಮಕ್ಕಳು.
ಮಗ ಅಂತೂ ಅಪ್ಪನಂತೆ ವೀರನೇ ಅದರಲ್ಲಿ ಎರಡು ಮಾತಿಲ್ಲ,ಆದರೆ ಶಾಂತ ಸ್ವಭಾವ ಇವನಿಗೆ ಗೊತ್ತಿಲ್ಲ.ಎಲ್ಲ ಹುಡುಗರಂತೆ ಇವನಿಗೂ ಕ್ರಿಕೆಟ್ ಆಡುವುದು..ಊರು ಸುತ್ತುವುದು...ಹುಡ್ಗೀರ್ ಚುಡಾಯಿಸುವುದು....ಇವನ ಅಭ್ಯಾಸವಾಗಿಬಿಟ್ಟಿದೆ. ಅದರಲ್ಲೂ ಇವನಲ್ಲಿರುವ ವಿಶೇಷತೆ ಏನಪ್ಪಾ ಅಂದ್ರೆ....ಗಂಭೀರ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡುವುದು,ಅದರಲ್ಲಿ ಏನಿದೆ ಎಂದು ತಿಳಿದುಕೊಳ್ಳುವಂತ ಕುತೂಹಲಕಾರಿ ಯುವಕ.ಇದು ಒಂದು ರೀತಿ ಇವನ ಒಳ್ಳೆಯ ಹವ್ಯಾಸ...ಹ್ಮ್ ಹ್ಮ್ ನೋಡ್ರಪ್ಪ ಇವನೇ ನಮ್ಮ ಕಥಾನಾಯಕ ಇನ್ಮೇಲೆ ಶುರುವಾಗೋದು ಇವನ ಕಾಯಕ.....ಏನೇನ್ ಮಾಡ್ತಾನೆ ಅಂತೀರಾ.....ನೀವೇ ಓದಿ



ಚಂದ್ರಕಾಂತನಿಗೆ ಊರು ಸುತ್ತೋ ಅಭ್ಯಾಸ ಇದ್ದಮೇಲೆ ಇವನದೊಂದ್ ಗ್ಯಾಂಗ್ ಇರ್ಬೇಕಲ್ವ..ಹೌದು ಇದೆ ಸತೀಶ,ವಿಜಯ,ಶಂಕರ ಇವನ ಸ್ನೇಹಿತರು..ಇವರೇ ಈ ಗ್ಯಾಂಗ್ ಮೆಂಬರ್..........ಶುದ್ದ ಪೋಲಿಗಳು...ಆದರೆ ಕಟುಕರಲ್ಲ...ಕೆಡುಕರು ಅಲ್ಲ.....ಅವರ ವಯಸ್ಸಿಗೆ ತಕ್ಕ ಮನಸ್ಸುಳ್ಳ ಪೋರರು........... ಕಾಲೇಜ್ನಲ್ಲೂ ತರ್ಲೆ ಆಟ....ಹೊರಗಡೇನೂ ಅದೇ ಆಟ...ಈಗೆ ದಿನವೂ ಬೇರೆಯವರನ್ನು ಕೀಟಲೇ ಮಾಡುತ್ತಲೇ ಕಾಲ ಕಳೆಯುತ್ತಿರುತ್ತಾರೆ.....ಹೀಗೆ ಇವರ ಅಡ್ಡದ
್ದಲ್ಲಿ ಕೂತು ಹೋಗೋ ಬಾರೋರ್ನೆಲ್ಲಾ ಚುಡಾಯಿಸ್ತಾ ಕುಳಿತಿರಬೇಕಾದ್ರೆ.....
ಸರ್ರನೆ ಬಂದ ಒಂದು ಆಟೋದಿಂದ ಮೆಲ್ಲನೆ ಇಳಿಯುತ್ತಾಳೆ . ರಂಭೆ ಅಲ್ಲ...ಮೇನಕೆ, ತಿಲೋತ್ತಮೆ ಅಲ್ಲವೇ ಅಲ್ಲ. ಅದಕ್ಕಿಂತ ಸುಂದರವಾದ ಪೋರಿ, ಪೋಲಿ ಹುಡುಗರ ಮನ ಕೆಣಕಲೆಂದೆ ಬಂದ ನಾರಿ...ಅವಳ ಹೆಸರೇ ಮಾದುರಿ....ಅವಳ ನೋಡನೋಡುತ್ತಲೇ ಈ ಮೂವರು ಸುಸ್ತು...ಇನ್ನೂ ಚಂದ್ರಅಂತೂ ಸುಸ್ತೋ ಸುಸ್ತು...ಅವಳ ನೋಟಕ್ಕೆ ಇವನು ಬಂದಿತನಾಗೋದಾ ,ಅವಳ ಹಂಸದ ನಡಿಗೆಗೆ ಇವನು ದ್ವ0ಸವಾದ......ಹೊಸ ಹೊಸ ಬಯಕೆಗಳು ಹುಟ್ಟಿತು ಇವನ್ನಲ್ಲಿ....
ನೋಡಪ್ಪ.....ಆಗ್ಲೇ ಹಾಡಿನ ಜೊತೆ ಕನಸಿನ ಲೋಕಕ್ಕೆ ಹೋಗ್ ಬಿಡುತ್ತಾನೆ ನಮ್ ಹುಡ್ಗ.

ಗಾಳಿಯೂ ಬೀಸಿರೆ ಮನದಲಿ
ಮೌನಾದಿ ರಾಗವು ಮೂಡುತಲಿ
ಪ್ರೇಮದ ಪಾಠದಿ ಮಂತ್ರವ ಕಲಿತಿಹ
ಒಂಟಿ ಪೂಜಾರಿಯೂ ನಾನಿಲ್ಲಿ

ಪುರ್ರನೆ ಹಕ್ಕಿಯು ಹಾರಿತು ಕಾಣದೆ
ನನ್ನಯ ಹೃದಯದ ಬಡಿತವು ಹೆಚ್ಚಿದೆ
ಚಂದ್ರನೆ ನಿನ್ನಯ ತಿಂಗಳ ಬೆಳಕಲಿ
ಹುಣ್ಣಿಮೆ ರಾತ್ರಿಯ ತಣ್ಣನೆ ಗಾಳಿಲಿ

ನನ್ನಯ ಗೆಳತಿಯ ಕಂಗಳ ನೋಟದಿ
ಪೆನ್ನನೆ ನಂಬಿಹ ಖಾಲಿಯ ಹಾಳೆಲಿ
ತುಂಬಿದೆ ನನ್ನಯ ಪ್ರೀತಿಯ ಸಿಂಚನ
ಕಾಣದ ಅವಳಿಗೂ ಎಂತದೋ ಕಂಪನ

ಅವಳ ಹಂಸದ ನಡಿಗೆಗೆ ನಾ ದ್ವ0ಸವಾದೆ
ಪ್ರೇಮದ ಮಾಟಕೆ ನಾ ಬಂದಿತನಾದೆ
ಗಾಳಿಯೂ ಬೀಸಿದ ರಭಸವು ನನ್ನೇಕೆ
ತೂರಿದೆ ಪ್ರೇಮದ ಮಾಯಾ ಲೋಕಕೆ.|

ಹ್ಮ್ ಹ್ಮ್ ಹಾಡು ಮುಗೀತು..ಇನ್ನೂ ಅವಳ ಮನಸ್ಸನ ಗೆಲ್ಲಬೇಕಲ್ಲ ಅದಕ್ಕೆ ತಯಾರಿ..ಒಂದು ದಿನ ದೈರ್ಯವಾಗಿ ಅವಳ ಹತ್ತಿರ ಹೋಗಿ..ಹಿಂದೆ ಮುಂದೆ ಬೇರೇನು ಮಾತನಾಡದೇ...ಒಂದೇ ಸರಿ I LOVE U ಅಂತ ಹೇಳೆ ಬಿಡ್ತಾನೆ.......
Dialog ಹೇಳಕ್ಕೂ ಶುರು ಮಾಡ್ತಾನೆ..... ಹೊಳೆವ ವಜ್ರಕ್ಕಿಂತ ಸೆಳೆವ ಈ ನಿಮ್ಮ ಕಣ್ಣೇ ಸೂಪರ್ ರೀ ಮುಗಿಯುವ ಕಥೆಗಿಂತ ನೀವು ಶುರು ಮಾಡೋ ಮಾತೇ ಈ interesting ರಿ. ಅದೇನೋ ಗೊತ್ತಿಲ್ಲ ರಿ...ನಿಮ್ಮ ನೋಡಿದಾಗಿನಿಂದ ನಾನಂತೂ ಹುಚ್ಚ ಆಗೋಗ್ಬಿಟ್ಟಿದ್ದೀನಿ....ಪ್ರೀತಿ ಅಂದ್ರೆ ಇದೇನಾ.. ಇದು ಶುರುವಾಗೋದು ಹೀಗೇನಾ....ಬೇಗ ಉತ್ತರ ಕೊಡೆ ನನ್ ಚಿನ್ನ Stupid ಹಬ್ಬಾಬ್ಬ....ನೋಡ್ರಪ್ಪ ಇವನು ಇಷ್ಟ್ ಗಂಟಲು ಹರ್ಕೊಂಡ್ ಇಷ್ಟೆಲ್ಲಾ ಹೇಳಿದ್ರೆ ಅವಳು ಒಂದೇ ಪದದಲ್ಲಿ ಉತ್ತರ ಕೊಟ್ಲಲ್ಲೋ........ ಮಗ ಅವಳು ಶುರು ಮಾಡೋ ಮಾತು ಸಕ್ಕತ್ interesting ಆಗಿದೆ ಮಗ.....!!! ಇಷ್ಟೆಲ್ಲಾ ಆದ್ರೂ ಬಿಡ್ತಾನ.. ದಿನ ಹೀಗೆ ಮಾಡ್ತಾನೆ ದಿನಕ್ಕೊಂದು Dialog ಅದಕ್ಕೆ ತಕ್ಕ ಉತ್ತರ ತಕೊಂಡ್ ಹೋಗ್ತಾ ಇರ್ತಾನೆ... ಹೇಗೆಗೋ ಮಾಡಿ ಕೊನೆಗೂ ಅವಳ ಮನಸ್ಸ.ಗೆದ್ಡೆ ಬಿಡ್ತಾನೆ.......


ಅಂತು ಇಂತು ಚಂದ್ರ ಮಾದುರಿ ಇಬ್ಬರು Love ನಲ್ಲಿ ಬೀಳ್ತಾರೆ....ಈಗೆ ಪ್ರೀತಿ ಮಾಡ್ತಾ ಕಾಲ ಕಳೆಯುತ ಇರ್ತಾರೆ..
ಒಂದು ದಿನ ಆಕಸ್ಮಿಕವಾಗಿ ಮಾಧುರಿ ಇರೋ Hostel ಗೆ ಅವಳ ಊರಿಂದ ಫೋನ್ ಕಾಲ್ ಬರುತ್ತೆ...ಫೋನ್ ನಲ್ಲಿ ಮಾತಾಡ್ತಾ ಮಾತಾಡ್ತಾ ಅವಳು ಮೂರ್ಛೆ
ಬೀಳ್ತಾಳೆ...ಅವಳು ಫೋನ್ ನಲ್ಲಿ ಕೇಳಿದ ವಿಷಯ ಏನು ಗೊತ್ತಾ...."ನಿಮ್ಮ ಅಪ್ಪ ಸತ್ತುಹೋಗಿದ್ದಾರೆ ಬೇಗ ಊರಿಗೆ ಬಾ ಎಂದು"
ಏನಪ್ಪಾ ಇದು ಒಂದೇ ಸರಿ ಅವರಪ್ಪನೆ ಸಾಯಿಸಿ ಬಿಟ್ಟ..ಯಾರಪ್ಪ ಈ ಮಾದುರಿ ಅಂತ ಚಿಂತಿಸ್ತಾ ಇದ್ದೀರ....ಇವಳು ಮಾಯಾಪುರ ಎಂಬ ಹಳ್ಳಿ ಇಂದ
ಕಾಲೇಜ್ನಲ್ಲಿ ಓದೋಕೆ ಅಂತ ಇಲ್ಲಿಗೆ ಬದೀರ್ತಾಳೆ..ಇಲ್ಲಿ Hostelನಲ್ಲಿ ಉಳಿದುಕೊಂಡಿರ್ತಾಳೆ...ಈ ವಿಷಯ ತಿಳಿದ ಕೂಡಲೇ..ತನ್ನ ಪ್ರೀತಿಯ ಅಪ್ಪನನ್ನು
ಕೊನೆಯ ಬಾರಿ ನೋಡಲು ದಿಡೀರನೆ ಚಂದ್ರನಿಗೂ ಹೇಳದೇ ಅವಳ ಊರಿಗೆ ಹೊರಟು ಹೋಗ್ತಾಳೆ..........ಹೋದವಳು ಬರುವುದೇ ಇಲ್ಲ..


ಆ ಮಾಯಾಪುರದಲ್ಲಿ ಕೊಲೆ ಮೇಲೆ ಕೊಲೆ ನಡೀತಾ ಇರುತ್ತೆ....ಹೇಗೆ ಏನು ಎಲ್ಲಿ ಅಂತೀರಾ.......ಮಾಯಾಪುರದ ಗ್ರಾಮದಲ್ಲಿ ಒಂದು ದಟ್ಟ ಕಾಡು ಇದೆ ಅಲ್ಲಿಗೆ ಹೋದವರು
ಯಾರು ಜೀವಂತವಾಗಿ ಬರುವುದಿಲ್ಲ....ಎಲ್ಲರಿಗೂ ಆ ಕಡೆ ಹೋಗಬೇಡಿ ಎಂದು ಬುದ್ದಿ ಹೇಳುತ್ತಿದ್ದ ಮಾಧುರಿ ತಂದೆನೆ ಸತ್ತಿದ್ದಾರೆ ಎಂದರೆ
ಆ ಕಾಡಲ್ಲಿ ಅಂತದು ಏನಿರಬಹುದು..ಇದುವರೆಗೂ ಅದು ಯಾರಿಗೂ ಗೊತ್ತಿಲ್ಲ.....ಸಾಯುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ..
ಇವರೆಲ್ಲ ದೆವ್ವ ಇರಬಹುದು ಎಂದು ಭಾವಿಸಿರುತ್ತಾರೆ.
ಇತ್ತ ಚಂದ್ರನಿಗೆ ಇವಳದೇ ಚಿಂತೆ....
ಒಂದು ದಿನ.Hostel ಹೋಗಿ ವಿಚಾರಿಸಿದ ಮೇಲೆ ಅವಳ ಊರಿಗೆ ಇವನು ಪ್ರಯಾಣ ಬೆಳೆಸೆ ಬಿಡ್ತಾನೆ....ಅಲ್ಲಿಗೆ ಹೋದ್ಮೆಲೆ
ಈ ವಿಷಯವೆಲ್ಲ ತಿಳಿಯುತ್ತದೆ...ಮೊದಲೇ ಇವನು ಕುತೂಹಲಕಾರಿ ಯುವಕ...ಆ ವಿಷಯ ಕೇಳ್ತಾ ಇದ್ದಂಗೆ ಇವನಿಗೆ ಈ ಕಾಡಿನ ಬಗ್ಗೆ ತಿಳಿದುಕೊಲ್ಲುವ ಹಂಬಲ ಜಾಸ್ತಿಯಾಗುತ್ತೆ…
ಆಗ ಅವನು ಪ್ರೀತಿ ಮಾಡಿದ ಹುಡುಗಿ..ಮನೆಯವರು ಯಾರ ಬಗ್ಗೇನೂ ಚಿಂತಿಸುವುದಿಲ್ಲ.... ಇವನ ಗೆಳೆಯರ ಜೊತೆ
ಕಾಡಿಗೆ ಹೊರಟೆ ಬಿಡ್ತಾನೆ...ಈ ನಾಲ್ವರಲ್ಲಿ ಶಂಕರ ಅಂತೂ ದೊಡ್ಡ ಪುಕ್ಲ..ಭಯ ಆದಾಗೆಲ್ಲ ವಾಪಸ್ ಹೋಗೋಣ ಬನ್ರೋ ಅಂತ ಪ್ರೇರೇಪಿಸುವುದು ಇವನ ಕೆಲಸ...ಇವರಿಗಂತೂ ಅವನ ಮಾತುಗಳು Comedy ಆಗಿ ಬಿಡುತ್ತವೆ..ಅಂತೂ ಶಂಕರ ಕಾಡಿಗೆ ಬಂದು ದೊಡ್ಡ Comedian ಆಗಿಬಿಡ್ತಾನೆ ನೋಡ್ರಪ್ಪ
ಮೂರ್ನಾಲ್ಕು ದಿನ ಹುಡುಕಾಡ್ತಾರೆ ಏನೇನು ಸಿಗಲ್ಲ . .ರಾತ್ರಿ ಮಾತ್ರ ಏನೋ ಕಿರುಚುವ ಶಬ್ದ....ಅದು ಮಾತ್ರ ಭಯಂಕರ ಇರುತ್ತೆ
ಈ ಚಂದ್ರನಿಗೆ ಈ ದ್ವನಿದೆ ಚಿಂತೆ..ಏನಿರಬಹುದು ಎಂದು ಚಿಂತಿಸುತ್ತಾ ಕುಳಿತಿರಬೇಕಾದ್ರೆ ವಿಜಯ ಕಿರುಚಿದ ಶಬ್ದ ಕೇಳಿಸುತ್ತದೆ..ಅಲ್ಲಿಗೆ ಹೋಗಿ ನೋಡಿದಾಗ
ಅವನನ್ನ ವಿಕಾರವಾಗಿ ಕೊಲೆ ಮಾಡಿರುವ ದೃಶ್ಯ...ನೋಡ ನೋಡುತ್ತಲೇ ಎಲ್ಲರೂ ಭಯಪಡಿಸುತ್ತೆ ಆ ದೃಶ್ಯ.....
ಈ ಇಬ್ಬರು ಬಾರೋ ವಾಪಸ್ ಹೋಗೋಣ ಇಲ್ಲಿಗೆ ಬಂದು ವಿಜಯನ್ನೇ ಕಳ್ಕೊಂಡ್ವಲ್ಲೋ ನಮಗ್ಯಾಕೋ ಬೇಕು ಬಾರೋಅಂತ ಬಿಕ್ಕಿ ಬಿಕ್ಕಿ ಅತ್ತರು ಚಂದ್ರ ಮಾತ್ರ
ದ್ರುತಿಗೆಡಲ್ಲ... ಹೇಗೋ ಇವರನ ಸಮಾದಾನ ಮಾಡಿ ಒಪ್ಪಿಸ್ತಾನೆ...ಇನ್ನೂ ಹೆಚ್ಚಿನ ಉತ್ಸಾಹದಿಂದ ಬಂದ ಕೆಲಸದ ಕಡೆನ ಗಮನ ಕೊಡ್ತಾರೆ....
ಹಾಗೆ ಹುಡುಕಾಡ್ತಾ ಇರ್ಬೇಕಾದ್ರೆ .....ಒಂದು ಮರದ ಮೇಲಿಂದ ದೈತ್ಯಾಕಾರದ ದೇಹವಿರುವ ನೋಡುಗರನ್ನು ಭಯ ಪಡಿಸುವ ಒಂದು ಅಪರೂಪದ ಪ್ರಾಣಿ ಇವರ ಮುಂದೆ ಹಾರಿ ಬರುತ್ತೆ ...
ಹಬ್ಬಬಾ ಹೇಗಿದೆ ಗೊತ್ತಾ ಅದು ಶಂಕ್ರನೆ ಕೇಳ್ರಾಪ್ಪ ಅದನ್ನ ನೋಡ್ತಾ ನೋಡ್ತಾ ಪ್ಯಾಂಟ್ ಒದ್ದೆಯಾಗಿದ್ದು ಇವನಿಗೆ ಮೊದಲು.
ಹ್ಮ್ ಹ್ಮ್ ಅದ್ನ ನೋಡ್ತಾ ಇವ್ರೆಲ್ಲಾ ತಟಸ್ಥವಾಗಿ ನಿಂತಿರ್‌ಬೇಕಾದ್ರೇನೆ . ಸತೀಶನ ಎತ್ತಿಕೊಂಡ್ ಹೋಗೇ ಬಿಡುತ್ತೆ .... ತಿರುಗಿ ನೋಡುವಷ್ಟರಲ್ಲಿ ಮಾಯಾ....ಕ್ಷಣ ಕಾಲದಲ್ಲೇ ಸತೀಶನೂ ಕೂಡ ಕೊಲೆಯಾಗಿ ಹೋಗಿರ್ತಾನೆ......ಈಗಂತೂ ಅವರ ರೋಧನೆ ಹೇಳತೀರದು.
ಈ ಕಾಡಿಗೆ ಬಂದು ಇಬ್ಬರು ಫ್ರೆಂಡ್ಸ್ ಕಳೆದುಕೊಂಡೋ......ಇನ್ನೂ ಯಾರಿಗೆ ಬೇಕು ಈ ಕಾಡ ಸಹವಾಸ ...ಮೂರನೆಯವನು ನಾನಾಗುವುದಕ್ಕಿಂತ ಮೊದಲು ಈ ಕಾಡಿಂದ ಹೊರಟು ಹೋಗಬೇಕು ಅಂತ ಮನಸ್ಸಿನಲ್ಲೇ ಶಂಕರ ಯೋಚಿಸಿ ಅಲ್ಲಿಂದ ಚಂದ್ರನಿಗೆ ತಿಳಿಯದಂತೆ ಪರಾರಿಯಾಗುತ್ತಾನೆ...........ಊರು ತಲುಪಿದ್ದಾನೋ ಏನೋ ನಮಗಂತೂ ಗೊತ್ತಿಲ್ಲ......
ಇನ್ನ ಚಂದ್ರ ಒಬ್ಬನೇ ಈ ಕಾಡಲ್ಲಿ ,ಇವನು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ...ಎಕಾಂಗಿ ಹೋರಾಟಕ್ಕೆ ಸಿದ್ದವಾಗೇ ಬಿಡ್ತಾನೆ .
ಮೊದಲು ಆ ಪ್ರಾಣಿಯ ಬಗ್ಗೆ ಎಲ್ಲಾ ವಿವರಗಳನ್ನು ಕಲೆ ಹಾಕುತ್ತಾನೆ..

ಏನದು ದೆವ್ವನ, ಯಾರಾದರೂ ಬೇಕು ಅಂತಾನೆ ಈಗೆಲ್ಲಾ ಮಾಡ್ತಾ ಇದ್ದಾರ ಏನದು...ತಿಳಿಯಬೇಕು ಅನಿಸ್ತಿದೆ ಅಲ್ವಾ...?
ಅದು ದೆವ್ವನು ಅಲ್ಲ ಭೂತನು ಅಲ್ಲ ,ಯಾರು ಮುಕವಾಡ ದರಿಸಿ ಈ ಕೆಲ್ಸ ಅಂತೂ ಮಾಡ್ತಾ ಇಲ್ಲ .. ……..
ಅದು ಒಂಥರ ವಿಚಿತ್ರ ಪ್ರಾಣಿ....ನೋಡಲು ಮನುಷ್ಯನಂತೆ ಇರುತ್ತೆ... ಚೂಪಾದ ಹಲ್ಲುಗಳು, ಮೈ ತುಂಬಾ ಕೂದಲು,ದೊಡ್ಡದಾಗಿ ಬೆಳೆದಿರುವ ಉಗುರುಗಳು
ದೊಡ್ಡ ದೇಹ....ನೋಡುಗರು ಒಮ್ಮೆ ಮೂಕರಾಗುವುದಂತೂ ಖಂಡಿತ. ಇದೊಂತರ ವಿಚಿತ್ರವಾದ ಕ್ರೂರ ಪ್ರಾಣಿ.......!!!
ಮಿಂಚಿನ ಓಟ, ಎತ್ತರವಾಗಿ ಜಿಗಿಯಬಲ್ಲ ವಿಶೇಷ ಸಾಮರ್ಥ್ಯ ಇದಕ್ಕಿದೆ......ಇದ್ಯಾಕೆ ಮನುಷ್ಯರನ್ನೆಲ್ಲ ಕೊಲ್ತಾ ಇರಬಹುದು....ಗೊಂದಲ ಬಿಡ್ರಪ್ಪ...ಮುಂದೆ ಓದಿ......ಪ್ರಾಣಿಗಳನ್ನು ಕೊಲ್ಲುವ ಮನುಷ್ಯರನ್ನು ಕಂಡರೆ ಇದಕ್ಕೆ ಆಗುವುದಿಲ್ಲ.ಇದೆ ಇದಕ್ಕೆಲ್ಲಾ ಮುಖ್ಯ ಕಾರಣ...ಮನುಷ್ಯರ ಕಂಡರೆ ಸಾಕು ಸಾಯಿಸದೇ ಬಿಡುವುದಿಲ್ಲ ಅದು.ಅವರು ಎಲ್ಲಿ ನನ್ನನ್ನ ಸಾಯಿಸ್ತಾರೋ ಅಂತ ಅದಕ್ಕಿಂತ ಮೊದಲು ಮನುಷ್ಯರನ್ನೇ ಸಾಯಿಸಿ ಬಿಡುವುದು ಇದರ ಕೆಲಸ……
ಅದಕ್ಕೆಇದನ್ನ ಸಾಯಿಸೋ ತೀರ್ಮಾನಕ್ಕೆ ಬರ್ತಾನೆ ನಮ್ ಹೀರೊ....ಒಂದು ಒಳ್ಳೆಯ ಸಮಯ ನೋಡಿ ಅದರ ಮೇಲೆ ದಾಳಿ ಮಾಡೇ ಬಿಡ್ತಾನೆ...ಹ ಹ ಎಂತ ಭಯಾನಕ ಯುದ್ದ ಇಬ್ಬರಿಗೂ ,ಅದನ ಸಾಯಿಸೊದ್ ಇರ್ಲಿ, ಅದರ ಹೊಡೆತದಿಂದ ಇವನು ತಪ್ಪಿಸಿ ಕೊಳ್ಳೋಕೆ ಸಾಹಸ ಮಾಡಬೇಕಾಗುತ್ತದೆ...ಕೊನೆಗೂ ಹೇಗೋ ಅದರಿಂದ ಇವನು ತಪ್ಪಿಸಿಕೊಂಡೆ ಬಿಡ್ತಾನೆ...
ಆಮೇಲೆ ಯೋಚಿಸುತ್ತಾನೆ ಇದನ್ನ ಗೆಲ್ಲಾಬೇಕಾದರೆ ಯುಕ್ತಿ ಬೇಕು ಶಕ್ತಿಯಲ್ಲ ಎಂದು.......ಹೊಸ ಹೊಸ ಪ್ಲಾನ್ ತಯಾರ್ ಮಾಡ್ತಾನೆ ...ಅದು ದಿನವೂ ಓಡಾಡುವ
ಜಾಗ ನೋಡಿ ಒಂದು ದೊಡ್ಡ ಗುಂಡಿ ತೋಡಿ..ಅದರ ಕೆಲಗಡೆ ಚೂಪಾದ ಕೋಲುಗಳನ್ನು ನೆಟ್ಟು ಮೇಲೆ ತರಗೆಲೆಗಳನ್ನು ಮುಚ್ಚಿ ಅದು ಬರುವುದನ್ನೇ ಕಾಯ್ತಾ ಇರ್ತಾನೆ.....ಅದು ಬಂತು ಬಂತು ಬಂತು ಎಷ್ಟು ವೇಗವಾಗಿ ಓಡಿ ಬಂತು ಅಂದ್ರೆ ಅಷ್ಟೇ ವೇಗವಾಗಿ ಆ ಗುಂಡಿಯೊಳಕ್ಕೆ ಬಿತ್ತು.......ಅಲ್ಲಿರುವ ಚೂಪಾದ ಕೋಲುಗಳು ಅದಕ್ಕೆ ಚುಚ್ಚಿಕೊಂಡವು ಅತಿಯಾದ ರಕ್ತಸ್ರಾವ, ಇನ್ನೇನು ಅದು ಸತ್ತೆ ಹೋಯ್ತು ಅಂತ ಇವನು ನಿಟ್ಟುಸಿರು ಬಿಡುವಷ್ಟರಲ್ಲಿ...ಅದು ಮೇಲೆದ್ದು
ಇವನ ಮೇಲೆ ಎಗರಿತು..ಈಗ ಇವನಿಗೆ ಅದನ್ನು ಎದುರಿಸುವುದು ಕಷ್ಟವೆನಿಸಲಿಲ್ಲ...ಮೊದಲೇ ಏಟು ತಿಂದ ಪ್ರಾಣಿ . ಬಿಡ್ತಾನ……. ಅದರ ಜೊತೆ ಒಂದಷ್ಟು ಸಮಯ ಹೋರಾಟ ನಡೆಯುತ್ತದೆ....ಕೊನೆಗೂ ಅದನ್ನ ಮತ್ತೆ ಅದೇ ಗುಂಡಿಗೆ ತಳ್ಳಿ....ಟಕ್ಕನೆ ಅದರ ಮೇಲೆ ಒಂದು ದೊಡ್ಡ ಕಲ್ಲು ಹಾಕಿ ಬಿಡ್ತಾನೆ....ಇನ್ನೂ ಅದು ಮೇಲೇಳುವ ಮಾತೆಲ್ಲಿ ಅದು ಸತ್ತೆ ಹೋಗಿರುತ್ತೆ.......ಇಲ್ಲಿಗೆ ಅದರ ಕಥೇನೂ ಮುಗಿಯುತ್ತೆ, ಇವನು ಬಂದ ಕೆಲಸನೂ ಆಗುತ್ತೆ...ತನ್ನ ಸ್ನೇಹಿತರನ್ನು ನೆನೆದು
ದುಃಖಿಸುತ್ತಾ ಆ ಕಾಡಿಂದ ಹಿಂದಿರುಗುತ್ತಾನೆ..ಅಂದು ಆ ಮಾಯಾಪುರದಲ್ಲಿ ಹಬ್ಬವೋ ಹಬ್ಬ ..ಎಲ್ಲರಿಗೂ ಸಂತಸವೋ ಸಂತಸ...ಈಗ ನೆಮ್ಮದಿಯಿಂದ ಕಾಡು ಸುತ್ತುತ್ತಾರೆ...ರಾವಣನನ್ನು ಕೊಂದ ರಾಮನನ್ನು ಗೌರವಿಸುವಂತೆ ..ಅಲ್ಲಿನ ಜನರು ಇವನನ್ನು ಗೌರವಿಸುತ್ತಾರೆ....

ಇನ್ನೇನಿದೆ ಇಲ್ಲಿ...... ಇವನು ತನ್ನ ಪ್ರಿಯತಮೆಯ ಜೊತೆ ತನ್ನೂರಿಗೆ ಹೊರಡುತ್ತಾನೆ....ಶಂಕರ ಅಲ್ಲೇ ಇರ್ತಾನಪ್ಪ....ಸುಮ್ನೇ ಇರಲ್ಲ ಇವರು ಬರ್ತಾ ಇದ್ದಂಗೆ
ಸ್ವಾಗತ ಬೇರೆ ಕೊರ್ತಾನೆ...
ಎನ್ಗೆ ಗೊತ್ತಾ ನಮ್ ಹೀರೊ ಜೊತೆ ಸೇರಿ ಹಾಡು ಬೇರೆ ಹಾಡ್ತಾನೆ
ಕೇಳ್ತೀರಾ ವಿಜಯೋತ್ಸವದ ಹಾಡು

ಎಲ್ಲಾನೂ ಸಾದಿಸಬಹುದು
ಎಲ್ಲಾನೂ ಗೆಲ್ಲಬಹುದು
ನಮ್ಮನ್ನು ನಾವು ನಂಬಬೇಕು ಮೊದಲು

ಯಾರನ್ನೂ ಎದುರಿಸಬಹುದು
ಎಲ್ಲಾನೂ ಪಡೆಯಬಹುದು
ಎಲ್ಲಾದಕ್ಕೂ ಬೆಂಬಲ ಬೇಕು ಮೊದಲು
ನಮ್ಮನು ನಾವು ನಂಬ ಬೇಕು ಮೊದಲು

ಇಲ್ಯಾರೂ ದಡ್ಡರು ಅಲ್ಲ
ಇಲ್ಯಾರೂ ನಿಸ್ಪ್ರಯೋಜಕರು ಅಲ್ಲ
ಎಲ್ಲದಕ್ಕೂ ಒಂದು ಸಮಯ ಬರಬೇಕು ಮೊದಲು
ನಮ್ಮನ್ನ ನಾವು ನಂಬಬೇಕು ಮೊದಲು

ಪ್ರೀತಿನೆ ಎಲ್ಲಾ ಇಲ್ಲಿ
ದ್ವೇಷಿಸಿ ಗೆದ್ದೋರ್ ಯಾರು ಇಲ್ಲ ಇಲ್ಲಿ
ಎಲ್ಲದಕ್ಕೂ ತಾಳ್ಮೆ ಬೇಕು ಮೊದಲು
ನಮ್ಮ ನಾವು ನಂಬಬೇಕು ಮೊದಲು.

ಸೋಮೇಶ್ ಗೌಡ

ನೋಡಿ ಅವನಲ್ಲಿರುವ ಕುತೂಹಲ ಒಂದು ಊರನ್ನೇ ರಕ್ಷಿವಂತಾಯ್ತು.......ಏನು ಮಾಡುವುದು ವಿಪರ್ಯಾಸ ಇದರಲ್ಲಿ ಅವನ ಸ್ನೇಹಿತರನ್ನು ಕಳೆದುಕೊಂಡ...
ಕೊನೆಗೂ ಗೆದ್ದ....ಒಂದನ್ನು ಪಡೆಯಬೇಕಾದರೆ ಇನ್ನೊದನ್ನು ಕಳೆದುಕೊಳ್ಳಬೇಕು ಅಂತ ದೊಡ್ಡವರೇ ಹೇಳಿದ್ದಾರೆ...ಇರ್ಲಿ ಬಿಡಿ............
ಯಾವುದೇ ಕೆಲಸ ಮಾಡಬೇಕಾದರೂ ನಾವು ಅದರ ಬಗ್ಗೆ ಸೋಮಾರಿತನ ತೋರಿಸುವುದನ್ನ ಬಿಟ್ಟು...ಅದನ್ನು ಮಾಡೇ ಮಾಡುತ್ತೇನೆ ಎಂಬ ನಂಬಿಕೆ ಇಡಬೇಕು ..ಆಗ ಅದು ಪೂರ್ಣಗೊಳ್ಳುವುದು ಖಂಡಿತ....




ಧನ್ಯವಾದ

ಸೋಮೇಶ್ ಗೌಡ
Somesh N Gowda

ಸೂಚನೆ: ನನಗೆ ಇನ್ನೂ ಇದನ್ನು ಒಳ್ಳೆಯೇ ಕಥೆಯ ರೂಪದಲ್ಲಿ ಪರಿಪೂರ್ಣವಾಗಿ ವಿವರಿಸುವಂತ ಸಾಮರ್ಥ್ಯ ಇಲ್ಲ..ಆದರೂ ಒಂದು ಪ್ರಯತ್ನ ಮಾಡಿದ್ದೇನೆ
ಬರವಣಿಗೆಯಲ್ಲಿ ಏನಾದರೂ ತಪ್ಪುಗಳು ಕಂಡು ಬಂದಲ್ಲಿ..ದಯವಿಟ್ಟು  ತಿಳಿಸಿ

Thanksss