Thursday 22 November 2012

ಪ್ರೀತಿ, ಆತ್ಮ ಸಂಬಂಧ

ನಮಸ್ಕಾರ
ಇತ್ತೀಚಿನ ದಿನಗಳಲ್ಲಿ ಲವ್ ಮಾಡಿ ಮದ್ವೆ ಆಗೋರೆ ಜಾಸ್ತಿ ನೋಡ್ರಪ್ಪ, ಅದೆಷ್ಟು ಜನ ಸುಖವಾಗಿ ಬಾಳ್ತಾ ಇದ್ದಾರೋ ಗೊತ್ತಿಲ್ಲ..
ಆದರೆ ಬೆಂಗಳೂರಿನ ಸದಾಶಿವನಗರದಲ್ಲಿ ವಾಸವಾಗಿದ್ದ ರಮೇಶ್ ಹಾಗೂ ರಮ್ಯ ದಂಪತಿಗಳು ಮಾತ್ರ ಬೇರೆಯವರಿಗೆ ಮಾದರಿಯಾಗುವಷ್ಟು
ಅನ್ಯೋನ್ಯವಾಗಿದ್ದರು.

ಈ ದಂಪತಿಗಳಿಗೆ ಮುದ್ದಾದ ಒಬ್ಬಳು ಮಗಳಿದ್ದಳು..ಹೆಸರು ಅನಿತಾ!!! ಒಬ್ಬಳೇ ಮಗಳಾದ್ದರಿಂದ ಇವಳ ಮೇಲೆ ಇವರಿಗೆ ಎಲ್ಲಿಲ್ಲದ ಪ್ರೀತಿ.
ಈ ಸ್ವೀಟೀ ತುಂಬಾ ನಾಟಿ ಎಷ್ಟೋಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಳು ಈ ಬ್ಯೂಟಿ..ಹಿರಿಯರೆಂದರೆ ತುಂಬಾ ಗೌರವ,
ತಂದೆ ತಾಯಿಗಳ ಮಾತಿಗೆ ಎಂದೂ ಪ್ರತ್ಯುತ್ತರ ಕೊಡುತ್ತಿರಲಿಲ್ಲ. ಒಟ್ಟಾರೆ ಒಳ್ಳೆಯ ಸಬ್ಯತೆಯನ್ನ ರೂಡಿಸಿಕೊಂಡಿದ್ದಳು..

ಕಾಲೇಜ್ ಮುಗಿದ ತಕ್ಷಣ ಮನೆ ಸೇರುತ್ತಿದ್ದ ಮುದ್ದು ಹುಡುಗಿ...ಅದೆಷ್ಟೋ ಹುಡುಗರು ಇವಳನ್ನ ಪ್ರೇಮಿಸಲು ಪ್ರಯತ್ನಿಸಿ ಕೈ ಸುಟ್ಟುಕೊಂಡಿದ್ದಾರೆ
ಆದರೆ ಇವಳ ಮನಸ್ಸನ್ನ ಯಾರು ಗೆಲ್ಲಲು ಆಗಿರಲಿಲ್ಲ...ಈ ಹುಡುಗಿಗೆ ಒಂದು ಹವ್ಯಾಸ ಇತ್ತು ಅದೇನಪ್ಪ ಅಂದ್ರೆ..ಕಾಲೇಜ್ ಮುಗಿಸಿ ಮಲ್ಲೇಶ್ವರಂ ನಲ್ಲಿ
ಮಸಾಲೆ ದೋಸೆ ತಿನ್ನೋದು..ಒಂದು ದಿನವೂ ಬಿಡದೆ ದಿನಾಲೂ ಮಸಾಲ ದೋಸೆ ತಿನ್ನಲು ಮಲ್ಲೇಶ್ವರಂಗೆ ಹೊರಟು ಬಿಡುತ್ತಿದ್ದಳು.
ಅದೆಷ್ಟು ಪ್ರೀತಿನೋ ನಾ ಕಾಣೆ ಇವಳಿಗೆ ಮಸಾಲ ದೋಸೆ ಮೇಲೆ.
ಈಗೆ ಇವಳ ದಿನಚರಿ ಸಾಗುತ್ತಿತ್ತು..

ಒಂದು ದಿನ ಅದೇ ಹೋಟೆಲ್ಗೆ ನನ್ನ ಗೆಳೆಯ ಸುದೀಪ ಹೋಗುತ್ತಾನೆ. ಅವಳ ನೋಡಲು ಅಲ್ಲ...ಹಸಿದ ಹೊಟ್ಟೆಯ ತಣ್ಣಾಗಾಗಿಸಲು!

ಆದರೆ ಅವನು ಅಲ್ಲಿಗೆ ಹೋದದ್ದೇ ತಡ . ಇಲ್ಲಿಗೆ ನಾನು ಏಕೆ ಬಂದಿದ್ದೇನೆ ಎಂಬುದನ್ನ ಮರೆತು ಒಂದು ಖುರ್ಚಿಯ ಮೇಲೆ ಕೂತು ಈ ಅನಿತಾಳನ್ನ
ನೋಡ್ತಾ ಕುಳಿತುಕೊಂಡು ಬಿಡ್ತಾನೆ . .ನೋಡ್ತಾ ನೋಡ್ತಾ..ಮನಸ್ಸಲ್ಲಿ ನೂರಾರು ಕನಸುಗಳನ್ನ ಬಿತ್ತನೆ ಮಾಡಿ ಬಿಡ್ತಾನೆ..ನಾನು ಮದ್ವೆ ಅಂತ ಆದ್ರೆ ಅದು ಇವಳನ್ನ ಮಾತ್ರ.
ಇಂತಹ ನೂರಾರು ಹುಚ್ಚು ಆಸೆಗಳಿಗೆ ಮನಸ್ಸಲ್ಲಿ ಜಾಗ ಕೊಡ್ತಾನೆ. ಇವನು ಅದೇ ಲೋಕದಲ್ಲಿ ತೇಲ್ತಾ ಇರ್ತಾನೆ...ಇತ್ತ ಇವಳು ತನ್ನ ಕೆಲ್ಸಾ ಮುಗಿಸಿಕೊಂಡು
ಮನೆಯ ದಾರಿ ಹಿಡಿಯುತ್ತಾಳೆ..ಇವನು ಮತ್ತೆ ಆ ಕಡೆ ಕಣ್ಣಾಯಿಸಿದರೆ ಅನಿತಾ ಅಲ್ಲಿ ಕಾಣುವುದಿಲ್ಲ ."ಒಹ್ ಗಾಡ್" ಬೇಜಾರಿನಿಂದ
ಇವನು ತನ್ನ ಕೆಲ್ಸದ ಕಡೆ ಗಮನ ಹರಿಸುತ್ತಾನೆ.. ನೋಡಿ ಇವನಿಗೆ ರಾತ್ರಿಯೆಲ್ಲ ನಿದ್ದೆ ಕೂಡ ಬರಲ್ಲ.. ಇಷ್ಟು ಬೇಗ ಇವನನ್ನ ಸೆಳೆದಿದ್ದಳು ಅಂದರೆ ಇನ್ನೆಂತ ಚೆಲುವಿರಬೇಕು ಅವಳದ್ದು..
ನಿಜಕ್ಕೂ ಆಶ್ಚರ್ಯ!!!.

ಅದೇ ಕೊರಗಿನಿಂದ ಮತ್ತೆ ಅದೇ ಸಮಯಕ್ಕೆ ಒಮ್ಮೆ ನೋಡೋಣ ಅಂತ ಆ ಹೊಟೆಲ್ ಬಳಿಗೆ ಬರ್ತಾನೆ..
ವಾಹ್ ಇವನ ಅದೃಷ್ಟವೆ ಇರಬೇಕು ಅನ್ನುವ ಹಾಗೆ.ಅನಿತಾ ಅದೇ ಖುರ್ಚಿಯ ಮೇಲೆ ಮಸಾಲ ದೋಸೆ ತಿನ್ನುತ್ತಾ ಕುಳಿತಿರುತ್ತಾಳೆ.
ಇನ್ನೂ ಇವನು ತಡ ಮಾಡುವುದಿಲ್ಲ. ಮನಸ್ಸಲ್ಲಿ ಮೂಡಿದ ನೂರಾರು ಆಸೆಗಳನ್ನ ಶಿಖರಕ್ಕೆ ಏರಿಸುವ ಹೆಜ್ಜೆ ಹಾಕಿ ಅವಳ ಮುಂದಿನ ಖುರ್ಚಿಯಲ್ಲಿ
ಕುಳಿತು ಅವಳನ್ನೇ ನೋಡುತ್ತಾ.."ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೆ ಕೊಡ್ತೀಯಾ, ನಿನ್ನೆ ಪ್ರೀತಿ ಮಾಡ್ತೀನಿ ನನ್ನ ಮದ್ವೆ ಆಗ್ತೀಯ"

ಅಂತ ನಗು ನಗುತ್ತಾ ಕಣ್ಣಲ್ಲಿ ಕಣ್ಣಿಟ್ಟು ಬಡಬಡಾಯಿಸುತ್ತಾನೆ..

-----------------------

ಪರಿಚಯವೇ ಇಲ್ಲದ ಒಬ್ಬ ಹುಡುಗ..ನೇರವಾಗಿ ಬಂದು ನನ್ನ ಮದ್ವೆ ಆಗು ಅಂದ್ರೆ ಯಾವ ಹುಡ್ಗಿ ತಾನೆ ಒಪ್ಪಿಕೊಳ್ತಾಳೆ ಹೇಳಿ.
ಇಲ್ಲಿ ಅನಿತಾ ಕೂಡ ಎಲ್ಲೋ ಲೂಸ್ ಇರ್ಬೇಕು ಅಂತ ಸುಮ್ನೇ ಎದ್ದು ಹೊರಟು ಹೋಗ್ತಾಳೆ.
ಅದಕ್ಕೆ ಸುದೀಪ ಏನು ಬೇಸರ ಮಾಡಿಕೊಂಡಿರಲಿಲ್ಲ..ಏಕೆಂದರೆ ಅವಳು ದಿನ ಇಲ್ಲಿಗೆ ಬರುತ್ತಾಳೆ ಎಂಬ ಮುಖ್ಯವಾದ ವಿಷಯ ಇವನಿಗೆ ತಿಳಿದಿತ್ತು..
ಅವಳು ಒಪ್ಪುತ್ತಾಳೆ ಎಂಬ ಅತಿಯಾದ ಭರವಸೆ ಕೂಡ ಇವನಲ್ಲಿತ್ತು .
 hmm ಇವನದು ಅದೆಂತಾ ಆತ್ಮ ವಿಶ್ವಾಸನೋ....ಇನ್ನೂ ಅವಳು ಹೇಗೆ ಒಪ್ಪುತ್ತಾಳೊ.!

ಮತ್ತೆ ಅವಳು ಬರುವ ದಾರಿಯನ್ನು ನೋಡುತ್ತಿದ್ದ ಸುದೀಪ ಎರಡನೇ ದಿನವೂ ನಿನ್ನೆ ಹೇಳಿದ್ದ ಮಾತನ್ನೇ ಮತ್ತೆ ಹೇಳುತ್ತಾನೆ.. ಅವಳಿಗೆ ಕೋಪ ಬಂದಿತ್ತೋ ಏನೋ ಆವನ ಮಾತನ್ನು ಕೇಳಿದ ಕೂಡಲೇ
ತಿನ್ನುತ್ತಿದ್ದ ಮಸಾಲ ದೋಸೆಯನ್ನು ಬಿಟ್ಟು! ಅರ್ಧಕ್ಕೆ ಎದ್ದು ಹೋಗ್ತಾಳೆ.. ಇವನು ಗಾಬರಿಯಿಂದ ಅವಳ ಹಿಂದೆನೆ ಸ್ವಲ್ಪ ದೂರ ಹೋದರು ಅವಳಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ... ಆ ಕ್ಷಣ ಮಾತ್ರ ಸುದೀಪ ಸ್ವಲ್ಪ ಬೇಸತ್ತು ಹೋಗಿರುತ್ತಾನೆ.
ನಾಳೆ ಏನಾಗುವುದೇನೋ ಎಂಬ ಕೊರಗು ಇವನಲ್ಲಿ ಜಾಸ್ತಿಯಾಗಿರುತ್ತೆ...

ಆದರೂ ಬಿಡಲ್ಲ  ಇದು ಮೂರನೇ ದಿನದ ಪ್ರಯತ್ನ..
ನೋಡಿ ಇಂದೂ ಕೂಡ ಅದೇ ವಾಕ್ಯ"ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೆ ಕೊಡ್ತೀಯಾ, ನಿನ್ನೆ ಪ್ರೀತಿ ಮಾಡ್ತೀನಿ ನನ್ನ ಮದ್ವೆ ಆಗ್ತೀಯ"
ನಿಜವಾದ ಪ್ರೇಮಿನಮ್ಮ ನಾನು!  ನಿನ್ನನ್ನು ಬಿಟ್ಟು ಬೇರೆ ಯಾವ ಹೆಣ್ಣನ್ನು ನೋಡೋದಿಲ್ಲ ನಿನ್ನಾಣೆ!!! ..ಅಂತ ಮತ್ತೆ ಗೋಗರೆಯುತ್ತಾನೆ

ಆದರೆ ಈ ಬಾರಿ ಮಾತ್ರ ಅವಳು ನಗು ನಗುತ್ತಾ. ನಾಚುತ್ತಾ. ಮೆಲ್ಲನೆ  ಮೆಲ್ಲನೆ ಉಗುಳು ನುಂಗಿ " ಚೆಲುವ ಒಂದು ಹೇಳ್ತೀನಿ ನನ್ನ ಮನಸ್ಸು ಕೊಡ್ತೀನಿ"
ಅಂತ ಹೇಳಿ ಓಡಿ ಹೊರಟೆ ಬಿಡೋದ.. ಹಬ್ಬನಿಜವಾಗಲು ಈ ಸುದೀಪನಿಗೆ ತಕ್ಕ ಜೋಡಿ ನೋಡಿ ಇವಳು .ಹೇಗೆ ಉತ್ತರ ಕೊಟ್ಟಳು ನೋಡ್ರಿ.:)
ಅಂತೂ ಒಪ್ಪಿಗೆ ಕೊಟ್ಟೆ ಬಿಟ್ಟಳು...ಕೊಡದೇ ಏನ್ ಮಾಡ್ತಾಳೆ ಸುದೀಪ ಯಾವುದರಲ್ಲಿ ಕಡಿಮೆ ಇದ್ದ ಹೇಳಿ.
ನೋಡಕ್ಕೆ ಸುಂದರ, ಮೇಲಾಗಿ ಸಾಫ್ಟ್‌ವೇರ್ ಉಧ್ಯೊಗಿ ,ಒಟ್ಟಿನಲ್ಲಿ ಅವಳು ಮೆಚ್ಚುವ ಗುಣ ಇವನ್ನಲ್ಲಿತ್ತು .

ಇನ್ನೂ ಇಬ್ಬರ ಪ್ರೀತಿ ಗಾಡವಾಗಿ ಬೆಳೆದು ಬಿಡುತ್ತೆ...ಯಾವ ರೀತಿ ಅಂದ್ರೆ ದಿನದ 24 ಗಂಟೆಗಳಲ್ಲಿ 7 ಗಂಟೆ ಫೋನ್ ನಲ್ಲಿ ಮಾತನಾಡುವಷ್ಟು..
7 ಗಂಟೆ ಮಾತನಾಡುವಷ್ಟು ವಿಷಯ ಏನಿರುತ್ತೋ..? ನನಗಂತು ನಿಜವಾಗಲೂ ಗೊಂದಲ ಹುಟ್ಟಿಸಿಬಿಟ್ಟಿದೆ.....
ಸುದೀಪ ಬರುವ ಸಂಬಳದಲ್ಲಿ ಅರ್ಧ ಕರೆನ್ಸಿಗೆ ಖರ್ಚು ಮಾಡುತ್ತಿದ್ದನೆನೋ.!!
ಅದು ಅಲ್ಲದೇ ತನ್ನ ಪ್ರೇಯಸಿಗೆ ಉಡುಗೊರೆಯಾಗಿ ಒಂದು ಮೊಬೈಲ್ ಕೊಟ್ಟಿರುತ್ತಾನೆ...
ಆಈ ಮೊಬೈಲ್ ಎಂದರೆ ಅನಿತಾಳಿಗೆ ಪಂಚ ಪ್ರಾಣ..!!!!!!!!!

ಈಗೆ ಇವರ ಪ್ರೀತಿ ಪ್ರಯಾಣ ಮುಂದುವರೆಯುತ್ತಿರಬೇಕಾದ್ರೆ ಎಲ್ಲಾ ಕಥೆಗಳಲ್ಲೂ ಇರುವ ಹಾಗೆ ಇಲ್ಲೂ ಪೋಷಕರಿಗೆ ವಿಷಯ ಗೊತ್ತಾಗಿ ಬಿಡುತ್ತದೆ, ಅದೂ ಮೊದಲು ಗೊತ್ತಾಗುವುದು ಅನಿತಾಳ ತಂದೆ-ತಾಯಿಗಳಿಗೆ. ಏನಾಗಬಹುದೋ ಎಂಬ ಭಯ ಇಬ್ಬರಿಗೂ ಆದರೆ ಇವರು ಅಂದುಕೊಂಡತೆ ಏನೂ ಆಗುವುದಿಲ್ಲ!!!...ಅನಿತಾ ಮೆಚ್ಚಿರುವ ಹುಡುಗ ಇವಳ ತಂದೆ ತಾಯಿಗಳಿಗೂ ಇಷ್ಟವಾಗುತ್ತಾನೆ...ಎರಡು ಮನೆಯವರು ಒಪ್ಪಿ ಇಬ್ಬರ ನಿಶ್ಚಿತಾರ್ಥವನ್ನು ಕೂಡ ಮಾಡಿ ಮುಗಿಸುತ್ತಾರೆ.

ಹ್ಮ್ ಹ್ಮ್ ಹ್ಮ್ :) ಅಂತೂ  ಮನೆಯವರೆ ಗ್ರೀನ್ ಸಿಗ್ನಲ್ ಕೊಟ್ಟಮೇಲೆ ಇವರು ಸುಮ್ನೇ ಇರ್ತಾರ . ದಿನಕ್ಕೆ 7  ಗಂಟೆ ಮಾತನಾಡುತ್ತಿದ್ದವರು .ಒಂದು ಗಂಟೆ ಜಾಸ್ತಿನೆ ಮಾತನಾಡಕ್ಕೆ ಶುರು ಮಾಡ್ತಾರೆ..ಅದರಲ್ಲೂ  ಆಗಾಗ SMS ಮಾಡುವುದು.

ಒಬ್ಬರನ್ನು ಒಬ್ಬರು ಬಿಟ್ಟಿ ಕೊಡದ ಪ್ರೇಮ. ಒಂದು ದಿನವೂ ಇವರು ಭೇಟಿ ಮಾಡದೇ ಇರುತ್ತಿರಲಿಲ್ಲ...ನಿಜವಾಗಲೂ ಇವರು ಪ್ರೇಮಸಾಗರದಲ್ಲಿ
ಮುಳುಗಿ ಹೋಗಿರುತ್ತಾರೆ ...
ಪ್ರೀತಿಯಲ್ಲಿ ಅದೆಷ್ಟು ಶಕ್ತಿ! Great

ಒಂದು ದಿನ ಸುದೀಪ್ ಕೆಲಸದ ವಿಷಯವಾಗಿ ಚೆನ್ನೈಗೆ ಹೋಗುವ ಪರಿಸ್ಥಿತಿ ಬರುತ್ತದೆ... ಮನಸ್ಸಿಲ್ಲದ ಮನಸ್ಸಿನ್ನಿಂದ
ಚೆನೈಗೆ ಹೋಗಲು ಸುದೀಪ್ ಸಜ್ಜಾಗುತ್ತಾನೆ. ಇತ್ತ ಅನಿತಾ  ಕೂಡ ತುಂಬಾ ಬೇಸರಗೊಂಡಿರುತ್ತಾಳೆ.

ಅವಳಿಗೆ ಸುದೀಪ್ ಹೀಗೆ ಸಮಾಧಾನ ಮಾಡುತ್ತಾನೆ
(ಚೆನ್ನೈ ಏನು ಬಹಳ ದೂರ ಇದೆಯಾ
ಈಗೆ ಹೋಗಿ ಹಾಗೆ ಬಂದು ಬಿಡುತ್ತೇನೆ..ಫೋನ್ ಇರ್ಬೇಕಾದ್ರೆ ಯಾಕೆ ಬೇಜಾರು, ಎಂತಹ ಕೆಲಸವಿದ್ದರು ನಾನು  ಹೇಗೆ ದಿನಾ ಕಾಲ್  ಮಾಡುತ್ತಿದ್ದನೋ ಹಾಗೆ ನಿನಗೆ ಕಾಲ್ ಮಾಡ್ತಾ ಇರ್ತೇನೆ. )
ಹಾಗೆ ಹೀಗೆ ಏನೇನೋ ಹೇಳಿ ಒಟ್ಟಿನಲ್ಲಿ ಸಮಾಧಾನ ಮಾಡಿ
ಚೆನ್ನೈ ದಾರಿಯನ್ನ ಸುದೀಪ ಹಿಡಿಯುತ್ತಾನೆ...

ಅಲ್ಲಿಗೆ ಹೋದಮೇಲೆ ಅವಳಿಗೆ ಕೊಟ್ಟ ಮಾತಿನಂತೆ ಎಂತಹ ಕೆಲಸವಿದ್ದರು ಅವಳಿಗೆ ಕಾಲ್ ಮಾಡ್ತಾ ಇರುತ್ತಾನೆ, ಅವಳ ಜೊತೆ ಗಂಟೆ ಗಂಟಲೇ ಹರಟೆ ಹೊಡೆಯುತ್ತಾ ಇರುತ್ತಾನೆ ಸುದೀಪ.

ಮೀಟಿಂಗ್ ನಲ್ಲಿ ಇದ್ದರು ಸಹ  SMS ಮಾಡುತ್ತಿದ್ದಾನೆಂದರೆ ಇನ್ನೆಂತ ಪ್ರೀತಿ ಇವರದು.
ಈಗೆ ಮೂರು ದಿನ ಕಳೆದೆ ಹೋಗುತ್ತೆ....
ನಾಲ್ಕನೇ ದಿನ ಸುದೀಪ್ ದಿನದ ಅಭ್ಯಾಸದಂತೆ ಮೊದಲು ಅವಳಿಗೆ ಗುಡ್ ಮಾರ್ನಿಂಗ್ ಹೇಳಲು ಕಾಲ್ ಮಾಡುತ್ತಾನೆ
ಆದರೆ ಇವನು ಎಷ್ಟೇ ಟ್ರೈ ಮಾಡಿದ್ರು ಅನಿತಾಳ ನ್ನು  ಸಂಪರ್ಕಿಸಲು ಆಗುವುದಿಲ್ಲ...ಎಷ್ಟ್ ಸಲ ಕಾಲ್ ಮಾಡಿದ್ರೂ ಆ ಕಡೆ ಇಂದ ಬರುತ್ತಿದ್ದ ಉತ್ತರ

"ನೀವು ಕರೆ ಮಾಡುತ್ತಿರುವ ನಂಬರ್ ಈ ಸಮಯದಲ್ಲಿ ಸ್ವಿಚ್ ಆಫ್ ಆಗಿದೆ ದಯವಿಟ್ಟು ಸ್ವಲ್ಪ ಸಮಯ್ದ ನಂತರ ಪ್ರಯತ್ನಿಸಿ"

Ohhh

ಇವನು ಆ ದಿನ ಆಪೀಸಿಗೂ ಹೋಗದೇ ಮನೆಯಲ್ಲೇ ಇದ್ದು  ಅವಳನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಿಸಿದರು ಅದು ಮಾತ್ರ ಇವನಿಗೆ ಸಾಧ್ಯವಾಗುವುದಿಲ್ಲ..ಕೇವಲ ಇವಳ ಫೋನ್ ಮಾತ್ರ ಅಲ್ಲ ಅವರ ಮನೆಯ ಎಲ್ಲಾ ಫೋನುಗಳು ಸ್ವಿಚ್ ಆಫ್ ಆಗಿರುತ್ತವೆ...ಮತ್ತೆ ಮರುದಿನದ ಪ್ರಯತ್ನದಲ್ಲೂ ಸುದೀಪನಿಗೆ ಜಯ ಸಿಗುವುದಿಲ್ಲ. ಇವನ ಹುಚ್ಚು ವರ್ತನೆ ನೋಡಿ ಅಕ್ಕ ಪಕ್ಕದವರೂ ಕಂಗಾಲಾಗಿರುತ್ತಾರೆ.


-----------------------

ಸುದೀಪ್ ಗೆ ಗೊಂದಲಗಳು ಜಾಸ್ತಿಯಾಗಿ, ತಲೆ ಕೆಟ್ಟು ಬೆಂಗಳೂರಿಗೆ ವಾಪಸ್ ಬರುವ ತೀರ್ಮಾನ ಮಾಡುತ್ತಾನೆ.
ಇನ್ನು ಇಲ್ಲಿ ಅನಿತಾಳ ಮೊಬೈಲ್  ಸ್ವಿಚ್ ಆಫ್ ಆಗಲು ಕಾರಣ ಏನೆಂದರೆ....!!!!!!!!
ಒಂದು ದಿನ ಅನಿತಾ ಕಾಲೇಜ್ ಮುಗಿಸಿ ಮನೆಗೆ ಬಂದು ಹಾರಾಮಾಗಿ TV ನೋಡ್ತಾ ಕುಳಿತ್ತಿರುತ್ತಾಳೆ..ಅದೇ ಸಮಯಕ್ಕೆ ಅವಳ ಗೆಳತಿ ಸುಷ್ಮ..
ಇವಳಿಗೆ ಕಾಲ್ ಮಾಡಿ.
"ಎಂ ಜಿ ರೋಡ್ ನಲ್ಲಿ ಬಟ್ಟೆಗಳು ತುಂಬಾ ಚೆನ್ನಾಗಿವೆಯಂತೆ...ಆಫರ್ ಕೂಡ ಇದೆಯಂತೆ ಬಾರೆ ಹೋಗೋಣ..ಬೇಗ ನೀನು ಎಂ ಜಿ ರೋಡ್ ಗೆ ಬಂದು ಬಿಡು ನಾನು ಅಲ್ಲೇ ಸಿಗ್ತೇನೆ" ಅಂತ ಅವಳನ್ನ ಶಾಪಿಂಗ್ ಗೆ ಕರೆಯುತ್ತಾಳೆ...
 

ಇವಳು ಮೊದ್ಲೆ ಕೇಳ್ಬೇಕಾ ಹೊಸ ಹೊಸ ಬಟ್ಟೆ ಅಂದ್ರೆ ಹುಚ್ಚು
ಹೋಗಿ ಬಂದ್ ಬಿಡೋಣ ಅಂತ..ಸುಮಾರು ಸಾಯಂಕಾಲ ೪ ಗಂಟೆ ಹೊತ್ತಿಗೆ ಅಪ್ಪ ಕೊಡಿಸಿದ್ದ ಬೈಕ್ ನ್ನು ತೆಗೆದುಕೊಂಡು ಹೊರಡುತ್ತಾಳೆ..

ಒಳ್ಳೆ ಒಳ್ಳೆಯ ಬಟ್ಟೆಗಳನ್ನು ಆರಿಸಿಕೊಂಡು ಶಾಪಿಂಗ್ ಮುಗಿಸಿ...ಖುಷಿ ಖುಷಿಯಾಗಿ ಮನೆಯ ದಾರಿಯನ್ನ ಹಿಡಿಯುತ್ತಾಳೆ..

ಆಗ ಸಾಯಂಕಾಲ 6.30ರ ಸಮಯ, ಅದೇನೋ ಖುಷಿ , ಹುಮ್ಮಸ್ಸು, ಹೊಸದಾಗಿ ಏನನ್ನೋ ಪಡೆದುಕೊಳ್ಳುತ್ತಿದ್ದೇನೆ
ಎಂಬ ಸಂಭ್ರಮ.. . ತಾನು ಬೈಕ್ ನಲ್ಲಿ ಚಲಿಸುತ್ತ್ತಿದ್ದೇನೆ ಎಂಬ ಪರಿವೆ ಅವಳಿಗೆ ಇರಲಿಲ್ಲ. ಯಾವುದೋ ಲೋಕದಲ್ಲಿ ತೇಲಾಡುತ್ತಿರುವ ಅನುಭವ.
ಪಾಪ ಇವಳ ಖುಷಿಯನ್ನು ನೋಡಿ ದೇವರಿಗೂ ಹೊಟ್ಟೆ ಕಿಚ್ಚು ಬಂದಿತ್ತು ಅನಿಸುತ್ತೆ.

ಮುಂದೆ ರಭಸವಾಗಿ ಬರುತ್ತಿದ್ದ ಸಿಮೆಂಟ್ ಲಾರಿಯೊಂದು..ಇವಳ ಬೈಕನ್ನು ಕ್ಷಣಾರ್ಧದಲ್ಲಿ ಪುಡಿ ಪುಡಿ ಮಾಡಿ ಬಿಡುತ್ತದೆ :(..
ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳು ಒಂದರ ಹಿಂದೆ ಒಂದು ಸಾಲು ಸಾಲಾಗಿ ನಿಂತು ಬಿಡುತ್ತವೆ. ಅಲ್ಲೇ ಕೆಲಸ ಮಾಡುತ್ತಿದ್ದ ಜನರೆಲ್ಲಾ
ಓಡೋಡಿ ಬಂದು ಅಲ್ಲಿಗೆ ಸೇರುತ್ತಾರೆ..ಅಂತಹ ಬೀಕಾರ ಅಫಗಾತ ಅದಾಗಿರುತ್ತದೆ.

ಆ ರಸ್ತೆಯಲ್ಲಿ ರಕ್ತ ನೀರು ಹರಿಯುವಂತೆ ಹರಿದು ಹೋಗುತ್ತದೆ... ಗಾಡಿಯೇ ಚೂರು ಚೂರಾಗಿತ್ತು ಅಂದರೆ ಇನ್ನೂ ಇವಳ ಸ್ಥಿತಿ ಏನಾಗಿರಬೇಡ.
ಹೌದು ಇಲ್ಲಿ ಅನಿತಾ ಕೂಡ ಕ್ಷಣಾರ್ಧದಲ್ಲೇ ಕೊನೆಯುಸಿರನ್ನು ಎಳೆದಿರುತ್ತಾಳೆ...ಮತ್ತೆ ಹಿಂತಿರುಗಿ ಬಾರದ ಯಾರಿಗೂ ಕಾಣದ ಲೋಕಕ್ಕೆ
ಹೆಜ್ಜೆ ಹಿಟ್ಟಿರುತ್ತಾಳೆ. ..!ಇವಳ ಎಲ್ಲಾ ಕನಸುಗಳು ನುಚ್ಚು ನೂರಾಗಿರುತ್ತವೆ.!

 ಅನಿತಾಳ ಬಗ್ಗೆ ತಿಳಿದುಕೊಂಡು ಸ್ಥಳೀಯರು..ಅವಳ ಶವವನ್ನ, ಅವರ ಹೆತ್ತವರ ಕೈಗೆ ಒಪ್ಪಿಸುತ್ತಾರೆ.
ಅಂದು ಅವರ ಮನೆಯಲ್ಲಿ ಮೋಡ ಕವಿದ ವಾತವಾರಣ ಸೃಷ್ಟಿಯಾಗಿರುತ್ತೆ.
ಹೆತ್ತವರ ರೋಧನೆ ಹೇಳತೀರದು..ಅವರ ಕೂಗು ಮುಗಿಲು ಮುಟ್ಟಿತ್ತು.

ಇಲ್ಲಿ ಇನ್ನೊಂದು ಮುಖ್ಯವಾದ ವಿಷಯ ಏನಪ್ಪಾ ಅಂದ್ರೆ...ಇವಳು ಸತ್ತಿರುವ ವಿಷಯವನ್ನ..ಅನಿತಾ ಮದುವೆಯಾಗಬೇಕಿದ್ದ
ಹುಡುಗನಿಗಾಗಲಿ ಅಥವಾ ಅವನ ಮನೆಯವರಿಗಾಗಲಿ ತಿಳಿಸುವುದೇ ಇಲ್ಲ.
ಧಾರ್ಮಿಕ ವಿದಿ ವಿಧಾನದಂತೆ  ಅನಿತಾಳ ಶವ ಸಂಸ್ಕಾರ  ಮುಗಿಸಿ ಬಿಡುತ್ತಾರೆ...ಹಾಗೂ ಅವಳು ಅತಿ ಹೆಚ್ಚಾಗಿ ಪ್ರೀತಿಸುತ್ತಿದ್ದ ಅವಳ ಮೊಬೈಲ್
ಅನ್ನು ಕೂಡ ಅವಳ ಜೊತೆಯಲ್ಲೇ ಹೂತು ಬಿಡುತ್ತಾರೆ.. ಏಕೆ ಗೊತ್ತಾ ಅನಿತಾ ಅವರ ಅಮ್ಮನಿಗೆ ಹೇಳಿರುತ್ತಾಳೆ..
"ಅಮ್ಮ ಈ ಮೊಬೈಲ್ ಅಂದ್ರೆ ನನಗೆ ಪ್ರಾಣ .ಅಕಸ್ಮಾತ್ ನಾನು ಸತ್ತರು ಇದು ಕೂಡ ನನ್ನ ಜೊತೆಯಲ್ಲೇ ಇರಬೇಕು ಎಂಬುದು.
ಆದರೆ ಅದು ಇಷ್ಟು ಬೇಗ ನೆರವೇರುತ್ತದೆ ಎಂದು ಯಾರು ಭಾವಿಸಿರಲಿಲ್ಲ...ಹ್ಮ್ ವಿದಿ ಅದೆಷ್ಟು ಘೋರ ಅಲ್ವಾ........


ಇತ್ತ ಸುದೀಪ್ ಬೆಂಗಳೂರಿಗೆ ಬರುತ್ತಿರುತ್ತಾನೆ ಅಷ್ಟು ದಿನದಿಂದ ಸ್ವಿಚ್ ಆಫ್ ಆಗಿದ್ದ ಮೊಬೈಲ್ ಅದು ಹೇಗೆ ಆನ್ ಆಗಿತ್ತೋ ಗೊತ್ತಿಲ್ಲ...ಅದು ಅಲ್ಲದೇ ಆ ಮೊಬೈಲ್
ಅನ್ನು ಅನಿತಾಳ ಜೊತೆಯಲ್ಲೇ ಹೂತಿದ್ದಾರೆ..ಆದರೆ ಇಲ್ಲಿ ಪವಾಡ ಎನ್ನುವ ಹಾಗೆ ಸುದೀಪ್ ಗೆ ಅನಿತಾಳ ನಂಬರ್ ನಿಂದ ಕಾಲ್ ಬಂದಿರುತ್ತೆ

" ಹೇ ಸುದೀಪ್ ಎಲ್ಲಿ ಇದ್ದೀಯಾ..ಇವತ್ತು ಬೆಂಗಳೂರಿಗೆ ಬರ್ತೀನಿ ಅಂತ ಹೇಳಿದ್ದಲ್ಲ .ಬರ್ತಾ ಇದ್ದೀಯಾ ಸಾಯಂಕಾಲ ನನ್ ಫ್ರೆಂಡ್ ಮನೆಯಲ್ಲಿ ಪಾರ್ಟೀ ಇದೆ
ನೀನು ಬರ್ತೀಯಾ ಅಂತ ಹೇಳಿದ್ದೀನಿ, ಬರ್ತೀಯಾ ತಾನೆ ಅಂತ ಕಾಲ್ ಮಾಡಿರುತ್ತಾಳೆ...

"ಸುದೀಪ್ ಮಾತ್ರ ಸದ್ಯ ಅಂತೂ ಕಾಲ್ ಬಂತಲ್ಲ ಅನ್ನೋ ಖುಷಿಯಲ್ಲಿ ಬೆಂಗಳೂರಿಗೆ ಬಂದದ್ದೆ ತಡ . ಅನಿತಾ ಮನೆಗೆ ಓಡೋಡಿ ಬರ್ತಾನೆ
ಅಲ್ಲಿನ ವಾತಾವರಣ ನೋಡಿ ಸ್ವಲ್ಪ ಹೊತ್ತು ಮೌನಿಯಾದರೂ... ಅದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಲಿಲ್ಲ ..ಏಕೆಂದರೆ ಅವನಿಗಿನ್ನೂ ಅಲ್ಲಿನ ವಿಷಯ
ಗೊತ್ತಿರಲಿಲ್ಲ... ಮನೆಗೆ ಹೋದದ್ದೇ ತಡ..
"ಆಂಟಿ  ಆಂಟಿ ಎಲ್ಲಿ ಅನಿತಾ ನನ್ನ ಬೇಗ ಬಾ ಅಂತ ಹೇಳಿ ಇನ್ನೂ ಎನ್ ಮಾಡ್ತಾ ಅವ್ಳೆ.. ಬೇಗ ಕರೆಯಿರಿ..
ಟೈಮ್ ಆಯ್ತು..ಹೀಗೆ ಫುಲ್ ಜಾಲಿ ಮೂಡಲ್ಲಿದ್ದ ಸುದೀಪ್ ಅತ್ತೆ ಕೊಟ್ಟ ಉತ್ತರಕ್ಕೆ....ತತ್ತರಿಸಿ ಹೋಗುತ್ತಾನೆ...ಆದರೂ ಅವನು ನಂಬುವುದಿಲ್ಲ
ನೀವ್ ಸುಳ್ಳು ಹೇಳ್ತಾ ಇದ್ದೀರ ನೋಡಿ ಅನಿತಾ ಈಗ ತಾನೆ ಕಾಲ್ ಮಾಡಿ ಕರೆದಿದ್ದಾಳೆ...ನೀವ್ಯಾಕೆ ಹೀಗೆ ಹೇಳ್ತೀರ....!!!ನಾಟಕ ಸಾಕು ಕರೆಯಿರಿ.

ಒಳ್ಳೇ ತಮಾಷೆ ಫ್ಯಾಮಿಲೀನಪ್ಪ ಇವರದು.
ಹೀಗೆ ಒಬ್ಬೊಬ್ಬನೇ ಮಾತನಾಡಿಕೊಂಡು ಅನಿತಾಳ ನಂಬರ್ ಗೆ ಕಾಲ್ ಮಾಡ್ತಾನೆ..ಅವಳ ಜೊತೆ ಮಾತು ಕೂಡ ಆಡ್ತಾನೆ, ಮೊದಲು ಅನಿತಾಳ ಜೊತೆ ಹೇಗೆ ಮಾತನಾಡುತ್ತಿದ್ದಾನೆ ಹಾಗೆ, ಅದು ಕೇವಲ 7 ಗಂಟೆಯಲ್ಲ ದಿನವಿಡೀ ಫೋನ್ ನ ಕಿವಿಯಲ್ಲೇ ಹಿಡಿದು ಕೊಂಡಿರುತ್ತಾನೆ.... ಆ ಫೋನ್ ನ ಯಾರಿಂದಲೂ ಕಸಿದುಕೊಳ್ಳಲು ಆಗದ ರೀತಿ. ... ಇವನ ಸ್ಥಿತಿ ನೋಡಿ ಪೋಷಕರು ಕಂಗಾಲಾಗುತ್ತಾರೆ...

ಇವನು ನಿಜವಾಗಲೂ ಅವಳ ಜೊತೆ ಮಾತನಾಡುತ್ತಾನೆ...ಅದು ಹೇಗೆ ಆ ಮೊಬೈಲ್ ನಿಂದ ಇವನಿಗೆ ಕಾಲ್ ಬರುತ್ತೆ...
ಇದು ನಿಜಾನ...ಹೌದು ಇದು ನಿಜ ಏಕೆಂದರೆ ಅವನದು "ಪ್ರೇಮ ಸಾಮ್ರಾಜ್ಯ" ಅಲ್ಲಿ ಏನು ಬೇಕಾದರೂ ನಡೆಯುತ್ತದೆ.!!!

ಇವನ ಸ್ಥಿತಿಯನ್ನು ಸರಿಪಡಿಸಲು...ಅದೆಷ್ಟು ಡಾಕ್ಟರ್ ಗೆ ತೋರಿಸಿದರೆ ಅದು ಮಾತ್ರ ಪ್ರಯೋಜನವಾಗಲಿಲ್ಲ...ಎಲ್ಲ ಡಾಕ್ಟರ್ ಗಳು ಹೇಳುವುದೊಂದೇ
ಇವನಿನ್ನೂ ಅವಳದೇ ಲೋಕದಲ್ಲಿದ್ದಾನೆ ಅದರಿಂದ ಹೊರತರಲು ನಮ್ಮಿಂದ ಆಗುವುದಿಲ್ಲ ಎಂದು. ಹೌದು ಅವನಿನ್ನೂ ತನ್ನ ಪ್ರೇಮಲೋಕದಲ್ಲಿ
ರಾಜನಾಗಿ ಮೆರೆಯಿತ್ತಿದ್ದಾನೆ. ಅವನ ಪ್ರೇಮ ಇನ್ನೂ ಗಟ್ಟಿಯಾಗೆ ಇದೆ.
ದೇಹವೇ ಇಲ್ಲದ ಒಂದು ಆತ್ಮವನ್ನು ಅವನು ಪ್ರೀತಿಸುತ್ತಿದ್ದಾನೆ....
 ಪ್ರೀತಿಯಲ್ಲಿ ಅದೆಂತ ಆಕರ್ಷಣೆಯಿದೆ!

 "ಪ್ರೀತಿಯೇ ದೇವರು ಪ್ರೆಯಸಿಯೆ ದೇವತೆ"!!!ಅನ್ನುತ್ತಾನೆ ನಮ್ಮ ಸುದೀಪ. ಇವನು ನಿಜವಾಗಲೂ ಪ್ರೇಮ ಸಾಮ್ರಾಜ್ಯದ ಅದಿಪತಿಯೆ ಬಿಡಿ... ಅದಕ್ಕೆ ಪ್ರೀತಿ ಆತ್ಮ ಸಂಬಂಧ ಅನ್ನೋದು..

ಪ್ರೇಮ ಎಂದರೆ ಒಂದು ಹುಡುಗಾಟ ಎಂದು ತಿಳಿದಿರುವ ಈ ಕಾಲದ ಹುಡುಗರ ಪೈಕಿ  .. ಇಂತಹ ಒಬ್ಬ ಪ್ರೇಮಿ ಇದ್ದಾನೆ ಎಂದರೆ ಗ್ರೇಟ್ !      
ಇಂತಹ ಪ್ರೇಮಿಗೆ ನನ್ನದೊಂದು ಸಲಾಮ್.

ಅವನ ಪ್ರೀತಿ ಸದಾ ಹಸಿರಾಗಲಿ ಎಂಬುದೇ ನನ್ನ ಆಶಯ


ಧನ್ಯವಾದ
ಸೋಮೇಶ್ ಎನ್ ಗೌಡ

 

3 comments:

  1. Kathe saralavaadharu niroopane bigiyaagidhe.. olle prayathna mundhuvarisi..

    ReplyDelete
  2. super sir thumba channagide kathe

    ReplyDelete