Thursday 22 November 2012

ಕಪ್ಪು ಚುಕ್ಕೆ


ಒಮ್ಮೊಮ್ಮೆ ಈಗೂ ಆಗುವುದು...ಎಲ್ಲರ ಬಾಳಲ್ಲೂ ಒಂದು ಕಪ್ಪು ಚುಕ್ಕೆ ಬಿದ್ದೆ ಬೀಳುವುದು 


ಹೌದು ನಾವು ಅಂದುಕೊಂಡಂತೆ ಜೀವನ ಸಾಗುವುದಿಲ್ಲ
ಅದರ ವೈಶಿಷ್ಟ್ಯತೆನೇ ಬೇರೆ...ಆಕಷ್ಮಿಕವಾಗಿ ನಡೆಯುವ ಘಟನೆಗಳು ಒಬ್ಬ ಮನುಷ್ಯನ ಬದುಕಿನ ಬಣ್ಣವನ್ನೇ ಬದಲಿಸುತ್ತದೆ.

ಅದಕ್ಕೆ ಇದನ್ನ ಜೀವನ ಅನ್ನೋದು..! ಈ ಬದುಕೇ ಒಂದು ..?

ನೇಗಿಲಪುರ ಎಂಬ ಊರಲ್ಲಿ ಶಾಂತಮ್ಮ ಎಂಬ ಮಹಿಳೆ ಇದ್ದಳು.....ಬಡವೆ,ಸ್ವಲ್ಪ ಜಿಪುಣಿ,
ಮುಂಗೋಪಿ...ಕಷ್ಟ ಅನ್ನೋದು ಇವಳ ಬೆನ್ನು ಬಿಟ್ಟು ಹೋಗಲಾರೆ ಅನ್ನುವಷ್ಟು ಅಂಟಿಕೊಂಡು ಬಿಟ್ಟಿದೆ...
ಮದುವೆಯಾದ 2ನೇ ವರ್ಷಕ್ಕೆ ಆಕೆಯ ಗಂಡ ಮರಣ ಹೊಂದಿರುತ್ತಾನೆ
ಗಂಡನ ಜೊತೆ ಸಂತೋಷದಿಂದ ಸಂಸಾರ ನಡೆಸಬೇಕಾದವಳು ಒಬ್ಬಂಟಿಯಾಗಿ ತನ್ನ ಮಗನ ಭವಿಷ್ಯದ ಜವಬ್ದಾರಿಯನ್ನು ಹೊತ್ತು ಕೂಲಿ ಮಾಡುತ್ತಾ ಜೀವನ ನಡೆಸುತ್ತಿರುತ್ತಾಳೆ....ಮಹೇಶ ಈಕೆಯ ಮಗ ..ಈತ ಕೂಡ ತಾಯಿಗೆ ತಕ್ಕ ಮಗನೆ ಬಿಡಿ....ಪಾತ್ರೆ ಬೆಳಗುವುದು,ಅಡುಗೆ ಮಾಡುವುದು,ಹೀಗೆ ತನ್ನ ಅಮ್ಮನಿಗೆ ಕೆಲಸದಲ್ಲಿ ಸಹಾಯ ಮಾಡುತ್ತಾ ಬೆಳೆಯುತ್ತಿರುತ್ತಾನೆ..ಇವನು ಅಮ್ಮನಿಗೆ ಸಹಾಯ ಮಾಡುವ ರೀತಿ ಹೇಗಿತ್ತೆಂದರೆ..ಇನ್ನೊಬ್ಬರಿಗೆ ಮಾದರಿಯಾಗುವಷ್ಟು..
ಹೀಗೆ ಎಲ್ಲರ ಮೆಚ್ಚುಗೆಯನ್ನ ಇವನು ಚಿಕ್ಕ ವಯಸ್ಸಿನಲ್ಲೇ ಸಂಪಾದಿಸಿರುತ್ತಾನೆ.....ಆದರೆ ಓದಿನಲ್ಲಿ ಮಾತ್ರ ಇವನು ಸ್ವಲ್ಪ ಹಿಂದೆ....ಹೇಗೋ SSLC ವರೆಗೂ ಬಂದೆ ಬಿಟ್ಟ ಆದರೆ SSLC ಯಲ್ಲಿ Fail ಆಗೋಗ್ತಾನೆ...ಇನ್ನೂ ವಿಧ್ಯಾಬ್ಯಾಸ ಮುಂದುವರಿಸಲು ಇವನಿಗೂ ಇಷ್ಟವಿರಲಿಲ್ಲ....ಓದಿಸಲು ಅಮ್ಮನಿಗೂ ಬಲ ಸಾಕಾಗಲಿಲ್ಲ....

ಮತ್ತೆ ಮುಂದೇನು ಮಾಡ್ತಾನೆ ಹೀಗೆ ಅಮ್ಮನ ಜೊತೆ ಮನೆಗೆಲಸ ಮಾಡ್ಕೊಂಡು ಇರ್ತಾನೆ ಅಂದುಕೊಂಡ್ರಾ....ದುಡಿಯುವ ಬಲ ಇವನಲ್ಲಿ ಇರುವಾಗ ಸುಮ್ಮನೇ ಮನೆಯಲಿ ಕೂರುವನೇ...ಅದಕ್ಕೆ ಊರಲ್ಲೇ ಇರುವ ಇಟ್ಟಿಗೆ ಫ್ಯಾಕ್ಟರೀಯಲ್ಲಿ ಕೂಲಿ ಕೆಲ್ಸಾ ಆರಂಭಿಸುತ್ತಾನೆ. ಓದಿಕೊಂಡು ,ಆಟವಾಡಿಕೊಂಡು ಇರಬೇಕಾದವನು...ದುಡಿಮೆಗೆ ಕೈ ಹಾಕಿರುತ್ತಾನೆ. ದೊಡ್ಡವರ ಸಹವಾಸ ದುಡ್ಡಿಗಾಗಿ ದುಡಿಯುವ ಕೆಲಸ...ಒಂಥರ ಎಲ್ಲಾ ಹೊಸದು, ಅಲ್ಲಿನ ಕಾರ್ಮಿಕರು ಮಾಡುವ ಎಲ್ಲ ಕೆಲಸಗಳನ್ನು ಅನುಕರಣೆ ಮಾಡುತ್ತಾ ಕಲಿಯುತ್ತಾನೆ...ಏನೇನ್ ಕಲ್ತಿರ್ತಾನೆ ಅಂದರೆ ಮದ್ಯಪಾನ....ವಯಸ್ಸಿಗೆ ಮೀರಿ ಮಾತನಾಡುವುದು..ಸಿಗರೇಟ್ ಸೇದುವುದು ಇವೆಲ್ಲಾ...ದೊಡ್ಡವರು ಅನಿಸಿಕೊಂಡ ಆ ಮನುಷ್ಯರು ಅವನಿಗೆ ಒಳ್ಳೆಯದನ್ನ ಕಲಿಸುವುದ ಬಿಟ್ಟು ಅವನನ್ನು ಇವನ ದಾರಿಗೆ ಎಳೆದುಕೊಂಡಿರುತ್ತಾರೆ....ಹೀಗೆ ಇವನು ಇಟ್ಟಿಗೆ ಕೆಲಸ...ಗಾರೆ ಕೆಲಸ ..ಎಲ್ಲಾ ಕೆಲಸಗಳನ್ನು ಮಾಡಿಕೊಂಡು ತನ್ನ ಜೀವನವನ್ನು ನಡೆಸುತ್ತಿರುತ್ತಾನೆ...ಇವನು ಮದ್ಯಪಾನ ಮಾಡುವುದು ಇವನ ಅಮ್ಮನಿಗೂ ಗೊತ್ತಿರುವುದಿಲ್ಲ ಅಷ್ಟೇನಾಗಿ ಯಾರಿಗೂ ತೋರಿಸಿಕೊಂಡಿರುವುದಿಲ್ಲ...

ಇವನಿಗೆ ಇಲ್ಲಿನ ಕೆಲಸ ಬೇಸತ್ತು ಹೋಗಿರುತ್ತದೆ ಅದಕ್ಕೆ ಬೆಂಗಳೂರಿಗೆ ಹೋಗುವ ನಿರ್ಧಾರ ಮಾಡುತ್ತಾನೆ..ಹಾಗೆಯೇ ಅವರ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಅವನ ಸಾಮರ್ಥ್ಯಕ್ಕೆ ಹೋಲುವ ಕೆಲಸಗಳನ್ನು ಬೆಂಗಳೂರಿನಲ್ಲಿ ಪ್ರಾರಂಬಿಸುತ್ತಾನೆ...ಒಂದು ರೀತಿ ಎಲ್ಲವನ್ನು ಮರೆತು ಹೊಸ ಬಾಳನ್ನೇ ನಡೆಸುತ್ತಾ ಇರುತ್ತಾನೆ...ಎಲ್ಲರ ದೃಷ್ಟಿಯಲ್ಲಿ ಒಳ್ಳೆಯ ಹುಡುಗನೇ ಹಾಗಿರುತ್ತಾನೆ....
ಹಬ್ಬದ ಸಮಯ ಎಲ್ಲ ಬಂದು ಬಾಂಧವರೂ ಸೇರಿ ಮಾಡುವ ಕಾರ್ಯ ...ಇವನು ತನ್ನ ಊರಿಗೆ ಹಬ್ಬ ಆಚರಿಸಲು ಬರುತ್ತಾನೆ,,.,ಹಳೆಯ ಗೆಳೆಯರು ತನ್ನ ಊರು ಅಂದು ಇವನ ಖುಷಿಗೆ ಮಿತಿಯೇ ಇರಲಿಲ್ಲ....ಮತ್ತೆ ಏನೋ ಸಿಕ್ಕಿದಂತಾಗಿತ್ತು....ಅದೇ ಖುಷಿಯಲ್ಲಿ ಎಣ್ಣೆ ಪಾರ್ಟಿನೂ ಶುರುವಾಯ್ತು ಚೆನ್ನಾಗಿ ಗಂಟಲವರೆಗೂ ತುಂಬಿಸಿಕೊಂಡ...ಅಂತೂ ಫುಲ್ಲ್ ಟೈಟ್ ಆದ.. ಬೀದಿಯಲ್ಲಿ ಹೋಗೋ ಬಾರೋರ್ನೆಲ್ಲಾ ಬಯ್ಯ ತೊಡಗಿದ..ಆ ರಾತ್ರಿ ಅಕ್ಕ ಪಕ್ಕದ ಮನೆಯವರಿಗೆ ನಿದ್ದೆಯೇ ಇಲ್ಲ.....ಅವರ ಅಮ್ಮನಂತೂ ರಾತ್ರಿಯೆಲ್ಲ ಕಣ್ಣೀರು ಸುರಿಸುತ್ತಿದ್ದರು..ಎಷ್ಟು ದಿನ ಅಂತ ಕಲಿತ ಚಟವನ್ನು ಮುಚ್ಚಿಕೊಂಡಿರಲು ಆಗುತ್ತದೆ ಹಾಗೆ ಇವನಿಗೆ ಈ ದಿನ ಕರಾಳ ದಿನ. ಅಂತೂ ಹೇಗೋ ರಾತ್ರಿ ಕಳೆಯಿತು

ಬೆಳಗ್ಗೆ ಮಹೇಶನಿಗೆ ಪೂಜ ಕಾರ್ಯಕ್ರಮ ನಿನ್ನೆ ರಾತ್ರಿ ಅವನ ಬೈಗುಳಕ್ಕೆ ಸಿಕ್ಕಿದ್ದವರೆಲ್ಲಾ...ಬೆಳಗ್ಗೆ ಇವನಿಗೆ ಶುರು ಮಾಡಿಕೊಂಡಿದ್ದರು,..ಇಷ್ಟು ದಿನ
ಕಾಪಾಡಿಕೊಂಡು ಬಂದಿದ್ದ ಮರ್ಯಾದೆಯನ್ನ ಒಂದೇ ರಾತ್ರಿಗೆ ಕಳೆದು ಕೊಂಡುಬಿಟ್ಟಿದ್ದ....ಅವರ ಅಮ್ಮ ಇವನ ಮೇಲೆ ಇಟ್ಟಿದ್ದ ನಂಬಿಕೆಯನ್ನೇ ಹಾಳು ಮಾಡಿಕೊಂಡಿದ್ದ.ಎಲ್ಲರೂ ಈ ವಯಸ್ಸಿಗೆ ಏನ್ ಬುದ್ದಿ ನೋಡು ಅಂತ ಬೈದು ಮಾತನಾಡಿಕೊಳ್ಳುತ್ತಿದ್ದರು..
ಈ ಅವಮಾನವಾದ ಮೇಲೆ ಜೀವನವೇ ಬೇಡ ಎನಿಸುವಷ್ಟು ಬೇಸರವಾಗಿತ್ತು....ಆತ್ಮಹತ್ಯೆಗೂ ಪ್ರಯತ್ನ ಪಟ್ಟ .ಆದರೆ ಅಮ್ಮನನ್ನ ಒಂಟಿ ಮಾಡಲು ಅವನಿಗೆ ಇಷ್ಟವಾಗಲಿಲ್ಲ,
ಅಮ್ಮನಿಗೋಸ್ಕರ ನಾದರೂ ಬದುಕಬೇಕೆಂದು ಮತ್ತೆ ಬೆಂಗಳೂರ ದಾರಿ ಹಿಡಿದ..ಆ ಒಂದು ಕಪ್ಪು ಚುಕ್ಕೆ ಅವನನ್ನು ಹೀಯಾಳಿಸುತ್ತಿದ್ದರು ಮತ್ತೆ ಏನಾದರೂ ಸಾದಿಸಬೇಕೆಂದೂ ಈಗ ಬೆಂಗಳೂರಲ್ಲಿ ಹೋರಾಟ ನಡೆಸುತ್ತಿದ್ದಾನೆ...ಆ ಕಪ್ಪು ಚುಕ್ಕೆಯನ್ನು ಅಳಿಸಿ ಹಾಕಲು ಪ್ರಯತ್ನ ಪಡುತ್ತಿದ್ದಾನೆ

ಸ್ನೇಹಿತರೆ..ಒಳ್ಳೆಯವನಾಗಲು ತುಂಬಾ ಸಾಹಸ ಮಾಡಬೇಕು ...ಆದರೆ ದುಷ್ಟ ಎನ್ನಿಸಿಕೊಳ್ಳಲು ಎರಡೇ ನಿಮಿಷ ಸಾಕು....ಆದ್ದರಿಂದ ನಿಮ್ಮ ಬುದ್ದಿಗೆ ಎಂದೂ ಮಂಕು ಬಡಿಯದಿರಲಿ.ಅರಿತು ಜೀವನ ನಡೆಸಿರಿ.

ಈ ಬದುಕೇ ಒಂದು ?

ಧನ್ಯವಾದ
ಸೋಮೇಶ್ ಗೌಡ Somesh N Gowda
ಮಾಕಳಿ
ಚನ್ನಪಟ್ಟಣ

No comments:

Post a Comment