Tuesday 24 September 2013

ಪ್ರಕೃತಿ ಉಳಿಸಿ ನೆಮ್ಮದಿ ಗಳಿಸಿ!

ಗುಯ್ ಎಂದು ತಣ್ಣಗೆ  ಬೀಸುವ ಗಾಳಿಬೀಸುವ  ರಭಸಕ್ಕೆ ಗಾಳಿಯಲ್ಲಿ ತೇಲಾಡುತ್ತಿರುವ ತರಗೆಲೆಗಳು .. ಹಕ್ಕಿಯ ಚಿಲಿಪಿಲಿ ನಾದ

ಸುತ್ತಲೂ ಹಸಿರು ತುಂಬಿಕೊಂಡು ಸೊಬಗಿನಿಂದ ಮೆರೆಯುತ್ತಿರುವ ಗುಡ್ಡಅಲ್ಲಿ ನಾನು ಕಾದ ಕಲ್ಲು ಬಂಡೆಯ ಮೇಲೆ ಮಲಗಿ ಮೈ ಬೆಜ್ಜಗಾಗಿಸಿಕೊಳ್ಳುತ್ತಾ ಆನಂದ ದಲ್ಲಿ ಮೈ ಮರೆತ್ತಿದ್ದೆ
ಆಗ ಸಂಜೆಯಾಗಿತ್ತು ಮನಸ್ಸು ಪ್ರಕೃತಿ ಮಡಿಲಲ್ಲಿ ಆನಂದದಿಂದ ವಿಜೃಂಭಿಸುತ್ತಿತ್ತು ...
  
ಬಾನಲ್ಲಿ ಮೋಡಗಳ ಮಿಲನ..
 ಗುಡುಗಿನ ಸಂಚಲನ....
ಶುರುವಾಯ್ತು ಮಳೆಯ ನರ್ತನ ..
 ಆಹಾ ಇದೆಂತಾ ಕ್ಷಣ ,
   
ಇಂದೆಂದೂ ಕಂಡರಿಯದ ಸ್ವರ್ಗ ಅಂದು ನನ್ನ ಕಣ್ಣ ಮುಂದೆ ರಾರಾಜಿಸುತ್ತಿತ್ತು... ಮಳೆಯ ಹನಿಗಳು ಮೈ ಮೇಲೆ ಬಿದ್ದು  ಮೈ ರೋಮಾಂಚನವಾಯಿತು ... ಎಲ್ಲಿಲ್ಲದ ಖುಷಿ ದಿನವೆಲ್ಲಾ ಹೀಗೆ ಇಲ್ಲೆ ಮಲಗಿ ಬಿಡಬೇಕೆಂಡುಕೊಳ್ಳುತ್ತಿದ್ದ ಮನಸ್ಸು ತಾನು ಮಲಗಿದ್ದ ಕಲ್ಲು ಬಂಡೆಗೆ ವಂದಿಸುತ್ತಾ ಮುತ್ತನಿಟ್ಟಿತು
 ಬೆಳಗ್ಗೆಯಿಂದ ಕಾದು ಬಿಸಿ  ಚಿಮ್ಮುತ್ತಿದ್ದ ಕಲ್ಲು ಬಂಡೆ ಮಳೆಯಲ್ಲಿ ಮಿಂದು ಗಮ್ಮ್  ಎನ್ನುತ್ತಿತ್ತು. ..
 ನಾನಂತೂ ಪ್ರಕೃತಿಗೆ ಶರಣಾಗಿ ನನ್ನೇ ನಾ ಮರೆತು ಹೋಗಿದ್ದೆ....   

ಆಗ
ಎಲೈ ಮಾನವ
ಮಾನವಆಆ

ಎಂದು ಯಾರೋ ಕರೆದಂತೆ ಬಾಸವಾಗಿ ಕಣ್ಣ್ ತೆರೆದು ನೋಡಿದೆ..
ಮೈತುಂಬಾ ಚಿನ್ನದ ಆಭರಣಗಳನ್ನ ದರಿಸಿ ತಲೆಗೊಂದು ಕಿರೀಟ ದರಿಸಿ.. ಮಳೆಯಲ್ಲೂ ಪಳ ಪಳನೇ ಹೊಳೆಯುತ್ತಿದ್ದ ವ್ಯಕ್ತಿಯೊಬ್ಬ ನನ್ನ ಮುಂದೆ ನಿಂತಿದ್ದ...

ಯಾರು ನೀವು? ನಿಮ್ಮ ವೇಷ ಭೂಷಣಗಳು ವಿಚಿತ್ರವೆನಿಸುತಿದೆಯಲ್ಲ

ನಾನೇನಾನು  ಇಂದ್ರ, ಸ್ವರ್ಗಾದಿಪತಿ ದೇವೇಂದ್ರ !!

ಓಹೋ ಓಹೋ ಇಂದ್ರದೇವಾಇದೇನಿದು ಆಶ್ಚರ್ಯ ವೆಂಬಂತೆ ಭೂಲೋಕಕ್ಕೆ ಆಗಮಿಸಿದ್ದೀರಿ

ಹೌದು ಮಾನವ . ಹೌದು ಸ್ಪರ್ದೆ ಎಂದಮೇಲೆ ಭೂಲೋಕಕ್ಕೂ ಆಗಮಿಸಬೇಕು ಪಾತಾಳಕ್ಕೂ ಹೋಗಬೇಕು.

ನಿಮಗೆ ಸ್ಪ್ರರ್ದೆಯೇ ಅದು ಈ ಭೂಲೋಕದಲ್ಲಿ... ನಿಮ್ಮ ಎದುರು ನಿಲ್ಲುವ ಸ್ಪರ್ದಿ ಯಾರು ದೇವ?

ಇನ್ಯಾರು ನೀನೆ!!!!

ಕೇಳಿದ ಕ್ಷಣ ಭಯವಾದರೂ... ನಗು ಮೆಲ್ಲನೆ ಇಂದ್ರನೇ ನಾಚುವಂತೆ ಆವರಿಸಿತು ನನ್ನ.

ನನ್ನ ನಿನ್ನಲ್ಲಿ ಅದೆಂತಾ ಸ್ಪರ್ದೆ ದೇವಾ?

ಸ್ವರ್ಗಾದಿಪತಿಯದ ನಾನೇ ಇದುವರೆಗೂ ಅನುಭವಿಸದ ಸುಖವನ್ನು ಇಂದು ನಿನ್ನಲ್ಲಿ ಕಂಡು ಚಿಂತೆಗೊಳಗಾಗಿ ಇಲ್ಲಿವರೆಗೂ ಬರಬೇಕಾಯಿತು ಮಾನವ.
ಅದಾವ ಸುಖವನ್ನು ಇಂದು ನೀ ಕಂಡೆ? ಸ್ವರ್ಗ ದಲ್ಲೇ ಇರದ ಸುಖವನ್ನ ನೀ ಈ ಭೂಲೋಕದಲ್ಲಿ ಪಡೆದುದ್ಡಾರು ಹೇಗೆ?

ಓಹೋ ಓಹೋ ಅದಕ್ಕಾಗಿಯೇ ನೀವಿಂದು ಇಲ್ಲಿಗೆ ಬಂದಿದ್ದು... ಬಲು ಹೊಟ್ಟೆ ಕಿಚ್ಚು ಸ್ವಾಮಿ ನಿಮಗೆ... ನಿಮಗಿಂತ ಸುಖ ಕಂಡವರನ್ನು ನೀವು ಸಹಿಸುವುದಿಲ್ಲ ಎಂದು ಕಾಣುತ್ತದೆ..

ಹ್ಮ್ ಹ್ಮ್ ಸಾಕು.  ಹೆಚ್ಚಿನ ಮಾತು ಬೇಡ ಆ ಸ್ವರ್ಗದ ದಾರಿ ತೋರಿಸು>

ಹ ಹ ಹ ಸ್ವರ್ಗಾದಿಪತಿಗೆ ಸ್ವಗದ ಭಾಗಿಲು ತೋರಿಸಬೇಕಂತೆ.. ಎಂತಹ ವಿಪರ್ಯಾಸ  ಚೆನ್ನಾಗಿದೆ ಚೆನ್ನಾಗಿದೆ
ದೇವ ಇಂದ್ರದೇವಾ
ಇದೋ ಈ ಸುಂದರ ಪರಿಸರದಲ್ಲಿ ನೀನು ದೇವನೆಂಬುವುದನ್ನು ಮರೆತು.. ಎರಡು ತಾಸು ಮಲಗು.. ಸುರಿಯುವ ಈ ಮಳೆಹನಿಗೆ ಮೈ ಒಡ್ಡು.. ಬೀಸುವ ಗಾಳಿಯ ಅಪ್ಪಿಕೋ..
ಒಳಗಿನ ದಗೆಯು ಮಾಯವಾಗಿ ತಂಪು ಕಾಣಿಸುತ್ತದೆ.  ಸ್ವರ್ಗದ ಬಾಗಿಲು ತೆರೆಯುತ್ತದೆ.. ……..

ಕೆಲ ಸಮಯದ ನಂತರ....

ಹೌದು ಮಾನವ ಹೌದು ಸ್ವರ್ಗ ಇರುವುದು ಇಲ್ಲೆ! ..ಸ್ವರ್ಗ ಇರುವುದು ಇಲ್ಲೆ!  ಈ ಸ್ವರ್ಗವನ್ನ ಅನುಭವಿಸದ ನಾನು ಅದೇಗೆ ಸ್ವರ್ಗಾದಿಪತಿಯಾಗಲು ಸಾದ್ಯ?...
ಆಹಾ ನಿಜಕ್ಕೂ ಸ್ವರ್ಗ ಇರುವುದು ಇಲ್ಲೆ
ತಾಯಿ  ಪ್ರಕೃತಿ ಸದಾ ಹೀಗೆ ಸೌಭಾಗ್ಯವಂತೆ ಯಾಗಿ ಕಂಗೊಳಿಸುತ್ತಿರು.. ಕಂಗೊಳಿಸುತ್ತಿರು.....
ಎನ್ನುತ್ತಾ ಮೈ ಮರೆತ ಇಂದ್ರ ಅಲ್ಲಿಂದ ಮಾಯವಾದ!

ಇಂದ್ರನೇ ಭೂಮಿಗೆ ಬಂದು ಸ್ವರ್ಗ ಕಂಡನೆಂದರೆ! ಇನ್ನೂ ಈ ಭೂಲೋಕದಲ್ಲೇ ವಾಸವಾಗಿರುವ ನಾವೆಷ್ಟು ಅದೃಷ್ಟವಂತರು!

ಪ್ರಕೃತಿ ಮಡಿಲಲ್ಲಿ ಮಗುವಾದರೆ ಎಂತಹವರ ಮನಸ್ಸು ಹಗುರವಾಗುತ್ತದೆ
ಗೆಳೆಯರೇ ಇರುವ ಸ್ವರ್ಗವನ್ನ ನಾಶ ಮಾಡಬೇಡಿ! ಕಾಡು ಬೆಳಸಿ ಸ್ವರ್ಗ ಸೃಷ್ಟಿಸಿ!

ದಯವಿಟ್ಟು ಎಲ್ಲರೂ………………………

ಪ್ರಕೃತಿ ಉಳಿಸಿ ನೆಮ್ಮದಿ ಗಳಿಸಿ..

ಧನ್ಯವಾದ
ಸೋಮೇಶ್ ಎನ್ ಗೌಡ